ಚಾರ್‌ದಾಮ್ ಯಾತ್ರೆ ವೇಳೆ ಈವರೆಗೆ ಹೃದಯಾಘಾತದಿಂದ 37 ಯಾತ್ರಿಕರು ಮೃತ!
ಕೇದಾರನಾಥ ಧಾಮದಲ್ಲಿ ಈವರೆಗೂ 23 ಭಕ್ತರು, ಯಮುನೋತ್ರಿಯಲ್ಲಿ 7, ಗಂಗೋತ್ರಿಯಲ್ಲಿ 4 ನಾಲ್ಕು ಮತ್ತು ಬದ್ರೀನಾಥದಲ್ಲಿ 3 ಮಂದಿ ಯಾತ್ರಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಡೆಹ್ರಾಡೂನ್: ಕೇದಾರನಾಥ ಮತ್ತು ಯಮುನೋತ್ರಿಯಲ್ಲಿ ದರ್ಶನಕ್ಕೆಂದು ತೆರಳುತ್ತಿದ್ದ ವೇಳೆ ವಿವಿಧ ಸ್ಥಳಗಳಲ್ಲಿ ಮೂರು ಮಂದಿ ಭಕ್ತರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಇವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಚಾರ್‌ದಾಮ್ ಯಾತ್ರೆ ವೇಳೆ ಇಲ್ಲಿಯವರೆಗೆ, 37 ಯಾತ್ರಿಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೇದಾರನಾಥ ಧಾಮದಲ್ಲಿ ಈವರೆಗೂ 23 ಭಕ್ತರು, ಯಮುನೋತ್ರಿಯಲ್ಲಿ 7, ಗಂಗೋತ್ರಿಯಲ್ಲಿ 4 ಮತ್ತು ಬದ್ರೀನಾಥದಲ್ಲಿ 3 ಮಂದಿ ಯಾತ್ರಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಾಹಿತಿ ಪ್ರಕಾರ, ಬುಧವಾರ ಕೇದಾರನಾಥ ದರ್ಶನಕ್ಕೆಂದು ತೆರೆಳಿದ್ದ ಜಬಲ್ಪುರದ (ಮಧ್ಯ ಪ್ರದೇಶ)ದ ವಿಮಲ್ ಕುಮಾರ್ ಖರ್ ಅವರ ಪತ್ನಿ 67 ವರ್ಷ ವಯಸ್ಸಿನ ಕಲ್ಪನಾ ಖರ್ ಅವರಿಗೆ ಅರೋಗ್ಯ ಹಠಾತ್ ಹದಗೆಟ್ಟಿತು. ಕಲ್ಪಾನಾ ಅವರನ್ನು ತಕ್ಷಣವೇ ಕೇದಾರನಾಥದ ಸಿಕ್ಸ್ ಸಿಗ್ಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸತ್ತಿರುವುದಾಗಿ ಘೋಷಿಸಿದರು. ಅದೇ ಸಮಯದಲ್ಲಿ, ರೋಹ್ಟಕ್ (ಹರಿಯಾಣ) ನಿವಾಸಿ ಇಮ್ತ್ರಿ ದೇವಿ ಕೂಡಾ ಗುಪ್ತಕಾಶಿಯಿಂದ ಕೇದಾರನಾಥಕ್ಕೆ ಕುಟುಂಬದ ಜೊತೆಗೆ ಹೋಗಿದ್ದರು. ಆ ಸಮಯದಲ್ಲಿ ಅವರ ಆರೋಗ್ಯವು ಹದಗೆಟ್ಟಿತು. ಅವರ ಕುಟುಂಬವು ತಕ್ಷಣವೇ ರಾಜ್ಯದ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ದರು, ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.
ಕೇದಾರನಾಥ ಧಾಮಕ್ಕೆ ಪ್ರಯಾಣಿಕರನ್ನು ಸಾಗಿಸುವ ಬಸ್ ಚಾಲಕ ಕೂಡ ಸಿಟಾಪುರ (ಕೇದಾರನಾಥ ಬಳಿ) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಾಲಕನನ್ನು ತೆಹ್ರಿ ನಿವಾಸಿಯಾಗಿದ್ದ ಕಿರ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಅದೇ ಸಮಯದಲ್ಲಿ, ಜೈಪುರ್ (ರಾಜಸ್ಥಾನ) ದಿಂದ ಯಮುನೋತ್ರಿ ಧಾಮ್ ಗೆ ಬಂದಿದ್ದ ಪೂರ್ಣ ಮೀನಾ ಸಹ ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ.