Earthquake In Punjab:  ದೆಹಲಿ/ಎನ್‌ಸಿಆರ್‌ನಲ್ಲಿ ಕಂಪನದ ಅನುಭವವಾದ ಎರಡು ದಿನಗಳ ನಂತರ ದೆಹಲಿ ಸಮೀಪದ ಪಂಜಾಬ್‌ನಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು (ಸೋಮವಾರ) ಮುಂಜಾನೆ ಪಂಜಾಬ್‌ನ ಅಮೃತಸರದಾದ್ಯಂತ 4.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.


COMMERCIAL BREAK
SCROLL TO CONTINUE READING

ಇಂದು (ನವೆಂಬರ್ 03)  ಬೆಳಗಿನ ಜಾವ 3:42ರ ಸುಮಾರಿಗೆ  ಭೂಕಂಪದ ಅನುಭವವಾಗಿದೆ. 14 ನವೆಂಬರ್ 2022ರ ಸೋಮವಾರದಂದು ಬೆಳಗಿನ ಜಾವ  03:42:27ರ ಸುಮಾರಿಗೆ ಪಂಜಾಬ್‌ನ ಅಮೃತಸರದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.


ರಾಮ್‌ದೇವ್ ದಿವ್ಯ ಫಾರ್ಮಸಿ ಸಂಸ್ಥೆಯ ಐದು ಉತ್ಪನ್ನಗಳ ಮೇಲಿನ ನಿಷೇಧ ರದ್ದು


ಏತನ್ಮಧ್ಯೆ, ಉತ್ತರಾಖಂಡದ ಪಿಥೋರಗಢದಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 101 ಕಿಮೀ ದೂರದಲ್ಲಿ ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪನ ಸಂಭವಿಸಿದ್ದರಿಂದ ಶನಿವಾರ ರಾತ್ರಿ ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ- ಭಾರತದಲ್ಲಿ ಶೇ.99ರಷ್ಟು ಮುಸ್ಲಿಮರು ಸಂಸ್ಕೃತಿಯಿಂದ ಹಿಂದೂಸ್ತಾನಿಗಳು ಎಂದ ಆರೆಸೆಸ್ಸ್ ನಾಯಕ


ಭೂಕಂಪದ ಕೇಂದ್ರಬಿಂದು ಕಠ್ಮಂಡುವಿನಿಂದ ಪಶ್ಚಿಮಕ್ಕೆ 460 ಕಿಮೀ ದೂರದಲ್ಲಿರುವ ಬಜಾಂಗ್‌ನ ಪಟದೇಬಲ್ ಎಂದು ನೇಪಾಳದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.