ನವದೆಹಲಿ: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ, ಅದರಲ್ಲಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಶುಕ್ರವಾರ ಸಂಜೆ ನಡುಕ ಉಂಟಾಗಿದೆ.


COMMERCIAL BREAK
SCROLL TO CONTINUE READING

ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಭೂಕಂಪದ ಕೇಂದ್ರವೂ ರಾಜಸ್ತಾನದ ಆಳ್ವಾರ್ ನಲ್ಲಿದೆ ಎಂದು ತಿಳಿದುಬಂದಿದೆ.ಭೂಕಂಪನ ಸುಮಾರು 3-4 ಸೆಕೆಂಡುಗಳ ಕಾಲವಿತ್ತು ಎನ್ನಲಾಗಿದೆ. ಭೂಕಂಪನವು ನಡುಕ ಅನುಭವಿಸುತ್ತಿದ್ದಂತೆ ಜನರು ತಮ್ಮ ಮನೆಗಳಿಂದ ಹೊರಗೆ ಸುರಕ್ಷಿತವಾಗಿ ಓಡಿಬಂದಿದ್ದಾರೆ.


ಇದನ್ನೂ ಓದಿ: ಹರಿಯಾಣ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಮತ್ತೆ ಭೂಕಂಪ


ದೆಹಲಿ-ಎನ್‌ಸಿಆರ್ ಪ್ರದೇಶವು ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಸಣ್ಣ ಭೂಕಂಪಗಳು ಮತ್ತು ನಡುಕಗಳನ್ನು ಅನುಭವಿಸಿದೆ. ದೆಹಲಿ ಭೂಕಂಪನ ವಲಯದ ಅಡಿಯಲ್ಲಿ ಬರುತ್ತದೆ ಆದ್ದರಿಂದ ಇಲ್ಲಿ ಸಣ್ಣ ಮತ್ತು ಮಧ್ಯಮ ತೀವ್ರತೆಯ ಭೂಕಂಪಗಳು ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮಿತವಾಗಿ ಅನುಭವಿಸುತ್ತಿವೆ ಎಂದು ಗಮನಿಸಬೇಕು.


ಇದಕ್ಕೂ ಮುನ್ನ ಜೂನ್ 8 ರಂದು ದೆಹಲಿಗೆ 2.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪನ ರಾಷ್ಟ್ರೀಯ ಕೇಂದ್ರದ ಪ್ರಕಾರ, ಗುರ್ಗಾಂವ್‌ನ ಗಡಿಯಲ್ಲಿರುವ 13 ಕಿ.ಮೀ ದೂರದಲ್ಲಿ ಭೂಕಂಪವು ಕೇಂದ್ರೀಕೃತವಾಗಿತ್ತು ಮತ್ತು 18 ಕಿ.ಮೀ ಆಳವನ್ನು ಹೊಂದಿತ್ತು.ಏಪ್ರಿಲ್‌ನಿಂದ, ದೆಹಲಿ-ಎನ್‌ಸಿಆರ್ ಕಡಿಮೆ ಮತ್ತು ಮಧ್ಯಮ ತೀವ್ರತೆಯ 14 ಕ್ಕೂ ಹೆಚ್ಚು ಭೂಕಂಪಗಳನ್ನು ದಾಖಲಿಸಿದೆ.


ಇದನ್ನೂ ಓದಿ: ಹರಿಯಾಣದಲ್ಲಿ ಭೂಕಂಪ: ರೋಹ್ಟಕ್‌ನಿಂದ 15 ಕಿ.ಮೀ ದೂರದಲ್ಲಿ ನಡುಗಿದ ಭೂಮಿ


ದೆಹಲಿಯಲ್ಲಿ ಇತ್ತೀಚಿನ ಭೂಕಂಪಗಳು ದೆಹಲಿಯ ಸುತ್ತಲೂ ಭೂಕಂಪನ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ, ಇದು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆ ಇದು ಎನ್ನುವ ಚರ್ಚೆಗಳು ನಡೆಯುತ್ತಿವೆ.


ದೆಹಲಿ ಹೈಕೋರ್ಟ್ ಇತ್ತೀಚೆಗೆ ದೆಹಲಿ ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳಿಗೆ ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದ ಭೂಕಂಪದಿಂದ ಪ್ರಮುಖ ಕಟ್ಟಡಗಳು ಮತ್ತು ಹೆಗ್ಗುರುತುಗಳನ್ನು ಸುರಕ್ಷಿತವಾಗಿಸಲು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ವಿವರಿಸುವಂತೆ ಕೇಳಿದೆ.