ಭೋಪಾಲ್: ಎಲ್ಲಾ ಕಡೆಗಳಲ್ಲೂ ಹುಡುಗಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಭೋಪಾಲ್ ನ ಹಬೀಬಂಜ್ ಪ್ರದೇಶದಲ್ಲಿ ರೈಲ್ವೇ ಮಾರ್ಗದ ಸಮೀಪದಲ್ಲಿ ಕೋಚಿಂಗ್ ಸೆಂಟರ್ನಿಂದ ಹಿಂದಿರುತ್ತಿದ್ದ ಸಮಯದಲ್ಲಿ ಕಿಡಿಗೇಡಿಗಳ ಗುಂಪೊಂದು 19 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿತ್ತು. ಈ ಘಟನೆಯು ಭೋಪಾಲ್ ಜನತೆಯನ್ನು ಭಯಭೀತರನ್ನಾಗಿಸಿತ್ತು. ಇದೀಗ ಪೋಲೀಸ್ ಪಡೆಯ ತ್ವರಿತ ಕಾರ್ಯಾಚರಣೆಯಿಂದಾಗಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಗೋಲು ಬಿಹಾರಿ, ಅಮರ್ ಛೋಟು, ರಾಜೇಶ್ ಮತ್ತು ರಮೇಶ್ ಎಂದು ಗುರುತಿಸಲಾಗಿದೆ ಎಂದು ಸರ್ಕಾರಿ ರೈಲ್ವೆ ಪೋಲಿಸ್ (ಜಿಆರ್ಪಿ) ಹಬೀಬ್ಗಂಜ್ ಪೋಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮಾಹಿತಿಗಳ ಪ್ರಕಾರ, ಅಕ್ಟೋಬರ್ 31ರ ಸಂಜೆ, ಅಪಹರಣಕಾರರು ಮೊದಲ ಬಾರಿಗೆ ರೈಲ್ವೇ ಲೈನ್ ಬಳಿ ಮಹಾರಾಣ ಪ್ರತಾಪ ನಗರದಲ್ಲಿ ಕೋಚಿಂಗ್ ಸೆಂಟರ್ನಿಂದ ಬರುತ್ತಿದ್ದ ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದರು. ನಂತರ ಅವರು ಪರಾರಿಯಾಗಿದ್ದರು. ಘಟನೆಯ ಬಳಿಕ ವಿದ್ಯಾರ್ಥಿಯು ಪೋಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು ಎಂದು ಹೇಳಲಾಗಿದೆ.



 


ಹುಡುಗಿಯ ಕುತ್ತಿಗೆಯನ್ನು ಹೊಡೆಯುವ ಮೂಲಕ ಅಪರಾಧಿಗಳು ಆಕೆಯನ್ನು ಕೊಲ್ಲಲು ಪ್ರಯತ್ನಿಸಿದರು. ಹುಡುಗಿ ಸುಪ್ತಾವಸ್ಥೆಯ ಬಳಿಕ, ತಾನು ಸತ್ತಿದ್ದೇನೆಂದು ಆಕೆ ಭಾವಿಸಿದ್ದಳು. ಪ್ರಜ್ಞೆ ಬಂದ ಮೇಲೆ, ಹುಡುಗಿ ತನ್ನ ಮನೆಗೆ ಹತ್ತಿರ ಮತ್ತು ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದರು. ಹುಡುಗಿಯ ತಂದೆ ಪೊಲೀಸರ ಮೊರೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದರು.