ಗುರುಗ್ರಾಮ್: ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಬುಧವಾರ ಗುರುಗ್ರಾಮ್ ನಲ್ಲಿ ಬೆಳಕಿಗೆ ಬಂದಿದೆ. ಅದರಲ್ಲಿ ಮೂರು ಮಂದಿ ಮನೆಯಲ್ಲೇ ಮೃತಪಟ್ಟಿದ್ದರು. ಒಂದು ವರ್ಷದ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.


COMMERCIAL BREAK
SCROLL TO CONTINUE READING

ಘಟನೆ ಗುರುಗುರಾಮ್ನಿಂದ 50 ಕಿ.ಮೀ ದೂರದಲ್ಲಿರುವ ಪಟೌಡಿನಲ್ಲಿರುವ ಬ್ರಿಜ್ಪುರಾ ಹಳ್ಳಿಯಿಂದ ಈ ಘಟನೆ ವರದಿಯಾಗಿದೆ.


ನೇಣು ಬಿಗಿದ ರೀತಿಯಲ್ಲಿ ಒಬ್ಬ ಮಹಿಳೆಯ ದೇಹ ದೊರೆತಿದ್ದು, ಮತ್ತೊಬ್ಬ ಮಹಿಳೆ ಮತ್ತು ಪುರುಷನ ದೇಹ ನೆಲದ ಮೇಲೆ ಬಿದ್ದಿತ್ತು, ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.


ಕುಟುಂಬದಲ್ಲಿ ವಯಸ್ಸಾದ ಮಹಿಳೆ, ಆಕೆಯ ಮಗ, ಸೊಸೆ ಮತ್ತು ಒಂದು ವರ್ಷದ ಮಗು ಇದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.


ಅತ್ತೆ ಮತ್ತು ಪತಿಯನ್ನು ಕೊಂದ ನಂತರ ಸೊಸೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳ ಪರಿಶೀಲನೆಯ ನಂತರ ಸತ್ಯಾಸತ್ಯತೆ ಹೊರಬೀಳಲಿದೆ.