ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ
ಹೈದರಾಬಾದ್: ಶುಕ್ರವಾರದಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಆವರಣದಲ್ಲಿ ಮಹಿಳೆ ಮೇಲೆ ನಾಲ್ವರು ಅಪ್ರಾಪ್ತ ವಯಸ್ಕ ವ್ಯಕ್ತಿಗಳು ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಅತ್ಯಾಚಾರಕ್ಕೆ ಪ್ರಯತ್ನಿಸಿದ ವ್ಯಕ್ತಿಗಳನ್ನು ಕಟ್ಟಡ ಕಾರ್ಮಿಕರು ರಂದು ಹೇಳಲಾಗಿದೆ.ಈಗಾಗಲೇ ಗಚಿಬೌಲಿಯಾ ಪೊಲೀಸರು ಘಟನೆಗೆ ಸಂಬಂಧಿಸಿದ ಹಾಗೆ 375d (ಅತ್ಯಾಚಾರ), 307 (ಕೊಲೆಗೆ ಯತ್ನ), 394 (ಕಳ್ಳತನಕ್ಕೆ ಯತ್ನ) ಈ ಸೆಕ್ಷನ್ ಅಡಿಯಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬಂಧಿತರನ್ನು ನಲ್ಲಗಂಡ್ಲಾದ ನಿವಾಸಿಗಳು ಎಂದು ಹೇಳಲಾಗಿದೆ.
ಹೈದರಾಬಾದ್ ವಿವಿ ವಕ್ತಾರರು ಹೇಳುವಂತೆ ಈ ಘಟನೆ ಕ್ಯಾಂಪಸ್ ನ ಹೊರಗಡೆ ನಡೆದಿದೆ.ಆದರೆ ಆ ಮಹಿಳೆಗೆ ಎಲ್ಲ ರೀತಿಯ ಸಹಾಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.