ನವದೆಹಲಿ: ಕೊರೊನಾ (Coronavirus) ಮಹಾಮಾರಿ ಹಾಗೂ ಲಾಕ್ ಡೌನ್ ಹಿನ್ನೆಲೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವವರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಕಾರ್ಮಿಕ ಸಚಿವಾಲಯ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯ ಅಡಿ ರಾಜ್ಯ ವಿಮಾ ನಿಗಮ (ESIC) ಸದಸ್ಯರಾಗಿರುವ ನಿರುದ್ಯೋಗಿ ಕಾರ್ಮಿಕರಿಗೆ ಶೆ.50 ರಷ್ಟು ವೇತನ ನೀಡುವ ಅಧಿಸೂಚನೆಯನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರದ ಈ ನಿರ್ಣಯದಿಂದ ಸುಮಾರು 40 ಲಕ್ಷ ಉದ್ಯೋಗ ಕಳೆದುಕೊಂಡ ನೌಕರರಿಗೆ ಲಾಭ ಸಿಗಲಿದೆ.


COMMERCIAL BREAK
SCROLL TO CONTINUE READING

ಕರೋನಾ ಬಿಕ್ಕಟ್ಟಿನಲ್ಲಿ ಉದ್ಯೋಗ ಕಳೆದುಕೊಂಡ ಕೈಗಾರಿಕಾ ಕಾರ್ಮಿಕರಿಗೆ ನಿಯಮಗಳನ್ನು ಬದಲಾಯಿಸುವ ಮೂಲಕ ಮೂರು ತಿಂಗಳವರೆಗೆ ಶೇ.50 ರಷ್ಟು  ನಿರುದ್ಯೋಗ ಭತ್ಯೆ ನೀಡಲು ಸರ್ಕಾರ ನಿರ್ಧರಿಸಿದೆ. ಅಧಿಸೂಚನೆಯ ಪ್ರಕಾರ, ಈ ವರ್ಷ ಮಾರ್ಚ್ 24 ರಿಂದ ಡಿಸೆಂಬರ್ 31 ರವರೆಗೆ ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಈ ಪ್ರಯೋಜನವನ್ನು ನೀಡಲಾಗುವುದು. ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ, ಇಎಸ್ಐಸಿ ಮೂಲಕ ನಿರ್ವಹಿಸುವ ಯೋಜನೆಯಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗ ಕಳೆದುಕೊಳ್ಳುವವರಿಗೆ ನಿರುದ್ಯೋಗ ಭತ್ಯೆ ನೀಡಲಾಗುವುದು.


ಈ ಮೊದಲು ಈ ಮಿತಿ ಶೇಕಡಾ 25 ರಷ್ಟಿತ್ತು. ಸರ್ಕಾರವು ಈ ಯೋಜನೆಯನ್ನು 2021 ರ ಜೂನ್ 30 ರವರೆಗೆ ವಿಸ್ತರಿಸಿದೆ. ಆದರೆ, ಜನವರಿ 1, 2021 ರಲ್ಲಿ ಮತ್ತೆ  ಮೂಲ ನಿಬಂಧನೆಗಳನ್ನು ಪುನಃಸ್ಥಾಪಿಸಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಪರಿಷ್ಕೃತ ಷರತ್ತುಗಳ ಅಡಿಯಲ್ಲಿ ಯೋಜನೆಯ ವ್ಯಾಪ್ತಿಗೆ ಬಂದಿರುವ 41,94,176 ಕಾರ್ಮಿಕರಿಗೆ ಈ ಯೋಜನೆಯು ಪ್ರಯೋಜನವನ್ನು ನೀಡಲಾಗುತ್ತಿದ್ದು, ಇದರಿಂದ ಇಎಸ್ಐಸಿಗೆ 6710.68 ಕೋಟಿ ರೂ. ಹೊರೆ ಬೀಳಲಿದೆ.


ಈ ರೀತಿ ಕಾರ್ಮಿಕರಿಗೆ ಲಾಭ ಸಿಗಲಿದೆ
ಇಎಸ್ಐಸಿ ಪ್ರಕಾರ, ನಿರುದ್ಯೋಗಿ ಕಾರ್ಮಿಕರು ಯಾವುದೇ ಇಎಸ್ಐಸಿ ಶಾಖೆಗೆ ನೇರವಾಗಿ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯ ಸಲ್ಲಿಸಿದ ನಂತರ, ಇಎಸ್ಐಸಿ ನೀಡಿದ ದಾಖಲೆಗಳನ್ನು ಪರಿಶೀಲಿಸಿ ಮೊತ್ತವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ. ಇದಕ್ಕಾಗಿ ಆಧಾರ್ ಸಂಖ್ಯೆಯನ್ನು ಸಹ ತೆಗೆದುಕೊಳ್ಳಲಾಗುವುದು.


ESIC ಅಡಿ ಸುಮಾರು 3.5 ಕೋಟಿ ಕುಟುಂಬ ಯೂನಿಟ್ ಗಳು ಶಾಮೀಲಾಗಿವೆ
ಕರೋನಾ ಕಾಲದಲ್ಲಿ ತಮ್ಮ ಉದ್ಯೋಗವನ್ನು ಉಳಿಸಿಕೊಂಡವರೂ ಕೂಡ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಸರ್ಕಾರದ ಈ ಕ್ರಮವು ಕೈಗಾರಿಕಾ ಕಾರ್ಮಿಕರಿಗೆ ಹೆಚ್ಚಿನ ಸಮಾಧಾನ ನೀಡಲಿದೆ. ಇದು ಸುಮಾರು 40 ಲಕ್ಷ ಜನರಿಗೆ ಪರಿಹಾರ ನೀಡಲಿದೆ. 10 ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಮಿಕರು ಇರುವ ಕಾರ್ಖಾನೆಗಳಲ್ಲಿಯೂ ಕೂಡ ಈ ಯೋಜನೆ ಅನ್ವಯಿಸಲಿದೆ. 21 ಸಾವಿರವರೆಗೆ ವೇತನ ಇರುವ ಕಾರ್ಮಿಕರಿಗೆ ಈ ಯೋಜನೆ ಅನ್ವಯಿಸಲಿದೆ.  ದೇಶದ ಸುಮಾರು 3.5 ಕೋಟಿ ಕುಟುಂಬ ಘಟಕಗಳು ಇಎಸ್‌ಐ ವ್ಯಾಪ್ತಿಗೆ ಬರುತ್ತವೆ, ಇದರಿಂದಾಗಿ ಸುಮಾರು 135 ದಶಲಕ್ಷ ಜನರು ನಗದು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.