ನವದೆಹಲಿ: ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ 58 ಸದಸ್ಯರಲ್ಲಿ 41 ಸದಸ್ಯರು 9 ಭಾಷೆಗಳಲ್ಲಿ ಸಂಸತ್ತಿನಲ್ಲಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಕಳೆದ ತಿಂಗಳು 15 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಈ ಸದಸ್ಯರು ಆಯ್ಕೆಯಾಗಿದ್ದರು. 


COMMERCIAL BREAK
SCROLL TO CONTINUE READING

ಪ್ರಮಾಣ ವಚನ ಪ್ರಕ್ರಿಯೆಯು ತೆಲುಗು ದೇಶಂ ಪಕ್ಷದ ಸಿ.ಎಸ್.ರಮೇಶ್ ಅವರಿಂದ ಆರಂಭವಾಯಿತು. ರಮೇಶ್ ಆಂಗ್ಲ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಕೇಂದ್ರಿಯ ಸಚಿವ ಜೆ.ಪಿ.ನಡ್ದ, ಥಾವರ್ ಚಂದ್ ಗೆಹಲೋಟ್, ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವಡೇಕರ್, ರವಿಶಂಕರ್ ಪ್ರಸಾದ್ ಅವರೊಂದಿಗೆ ರಾಷ್ಟ್ರೀಯ ಜನತಾ ದಳದ ಮನೋಜ್ ಕುಮಾರ್ ಜಾ, ಕಾಂಗ್ರೆಸ್'ನ ಅಭಿಷೇಕ್ ಮನು ಸಿಂಘ್ವಿ ಮತ್ತು ಸಂಯುಕ್ತ ಜನತಾ ದಳದ ನಾರಾಯಣ ಸಿಂಗ್ ಅವರೂ ಭಾಗಿಯಾಗಿದ್ದರು. 


41 ಸದಸ್ಯರಿಂದ 9 ಭಾರತೀಯ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕಾರ
ಸಂಸತ್ತಿನಲ್ಲಿ 41 ಸದಸ್ಯರು 9 ವಿವಿಧ ಭಾರತಿಯ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾರತ ದೇಶದ ಭಾಷಾ ವೈವಿಧ್ಯತೆಗೆ ಸಾಕ್ಷಿಯಾದರು ಎಂದು ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ತಿಳಿಸಿದರು. ಮಧ್ಯಪ್ರದೇಶದಿಂದ ಆಯ್ಕೆಯಾದ ಚುನಾಯಿತ ಸಂಸದ ಗೆಹ್ಲೋಟ್ ಸಂಸ್ಕೃತದಲ್ಲಿ, ಆಂಧ್ರ ಪ್ರದೇಶದ ಟಿಡಿಪಿಯಿಂದ ಸ್ಪರ್ಧಿಸಿ ಆಯ್ಕೆಯಾದ ರವಿದ್ರ ಕುಮಾರ್ ತೆಲುಗು ಭಾಷೆಯಲ್ಲಿ, ಗುಜರಾತ್'ನಿಂದ ಆಯ್ಕೆಯಾದ ಬಿಜೆಪಿಯ ಪುರುಷೋತ್ತಮ್ ರೂಪಾಲ್ ಗುಜರಾತಿಯಲ್ಲಿ, ಕರ್ನಾತಕದಿಂದಾ ಆಯ್ಕೆಯಾದ ಬಿಜೆಪಿಯ ರಾಜೀವ್ ಚಂದ್ರಶೇಖರ್ ಕನ್ನಡದಲ್ಲಿ, ಮಹಾರಾಷ್ಟ್ರದಿಂದ ಆಯ್ಕೆಯಾದ ಕಾಂಗ್ರೆಸ್'ನ ವಂದನಾ ಚೌಹಾಣ್ ಮತ್ತು ಶಿವಸೇನಾದ ಅನಿಲ್ ದೇಸಾಯಿ ಅವರು ಮರಾಠಿಯಲ್ಲಿ, ಉತ್ತರ ಪ್ರದೇಶದಿಂದ ಆಯ್ಕೆಯಾದ ಬಿಜೆಪಿಯ ಜಿ.ವಿ.ಎಲ್.ನರಸಿಂಹರಾವ್ ತೆಲುಗು ಭಾಷೆಯಲ್ಲಿ, ತೃಣಮೂಲ ಕಾಂಗ್ರೆಸ್'ನ ರಂಜಾನ್ ವಿಶ್ವಾಸ್, ಸುಭಾಶೀತ್ ಚಕ್ರವರ್ತಿ ಮತ್ತು ಶಂತನು ಸೇನಾ ಅವರು ಬೆಂಗಾಲಿ ಭಾಷೆಯಲ್ಲಿ ಮತ್ತು ನದೀಮುಲ್ ಹಕ್ ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 


ಕಾಲು ಮುರಿತದ ಕಾರಣದಿಂದಾಗಿ ನಿಲ್ಲಲಾಗದ ಸರೋಜ ಪಾಂಡೆ
ಏತನ್ಮಧ್ಯೆ, ಛತ್ತೀಸ್ಗಢದಿಂದ ಚುನಾಯಿತರಾದ ಬಿಜೆಪಿ ಸದಸ್ಯ ಸರೋಜ್ ಪಾಂಡೆ ಕಾಲು ಮುರಿತದಿಂದಾಗಿ ನೋವುಂಟಾಗಿದ್ದರಿಂದ ಸಭಾಧ್ಯಕ್ಷರು ಅವರಿಗೆ ಕುಳಿತಲ್ಲಿಂದಲೇ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಿದರು. ಪ್ರಮಾಣವಚನ ಸ್ವೀಕಾರ ಸಮಾರಂಭ ವಿಕ್ಷಣೆಗಾಗಿ ಸಭೆಯ ವೀಕ್ಷಕರ ಗ್ಯಾಲರಿಯಲ್ಲಿ ಬಹಳಷ್ಟು ಮಂದಿ ಪ್ರೇಕ್ಷಕರು ಉಪಸ್ಥಿತರಿದ್ದರು.