ನವದೆಹಲಿ: ಸತತ ಒಂಬತ್ತು ವರ್ಷಗಳಿಂದ ಐಷಾರಾಮಿ ಕಾರುಗಳನ್ನೇ (Luxury Cars) ಟಾರ್ಗೆಟ್ ಮಾಡಿ, ಕದಿಯುತ್ತಿದ್ದ ಚಾಲಾಕಿ ಕಳ್ಳನನ್ನು (Car King Arrested) ಸೆರೆ ಹಿಡಿಯುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ತನ್ನನ್ನು ತಾನೇ 'ಕಾರ್ ಕಿಂಗ್' ಎಂದು ಕರೆದುಕೊಳ್ಳುತ್ತಿದ್ದ. 


COMMERCIAL BREAK
SCROLL TO CONTINUE READING

2013 ರಿಂದ ಕಾರುಗಳನ್ನು ಕದಿಯುತ್ತಿದ್ದ:


2013 ರಿಂದ ಕಾರುಗಳನ್ನು ಕದಿಯುತ್ತಿದ್ದ ಈ  42 ವರ್ಷದ ಖತರ್ನಾಕ್ ಖದೀಮನನ್ನು ಕೊನೆಗೂ ಪೊಲೀಸರು (Delhi Police) ಬಂಧಿಸಿದ್ದಾರೆ. ಕದ್ದ ಮೂರು ಕಾರುಗಳು, ಕಾರ್ ನೋಂದಣಿ ನಂಬರ್ ಪ್ಲೇಟ್‌ಗಳು, ಕಾರ್ ಕೀಗಳು ಮತ್ತು ಕಾರು ಕಳ್ಳತನದ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ವ್ಯಕ್ತಿಯನ್ನು ಸಿವಿಲ್ ಲೈನ್ಸ್ ನಿವಾಸಿ ಕುನಾಲ್ ಎಂದು ಗುರುತಿಸಲಾಗಿದೆ.


ಕಾರ್ ಕಿಂಗ್:


ಕಾರ್ ಕಿಂಗ್ (Car king) ಎಂಬ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಗಿದೆ. ನಾವು ಆತನಿಂದ ಕಾರಿನ ಬಿಡಿಭಾಗಗಳು ಮತ್ತು ಕೀಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.


ಸೆರೆ ಸಿಕ್ಕಿದ್ದೇ ರೋಚಕ:


ಜನವರಿ 10 ರಂದು, ಸಿವಿಲ್ ಲೈನ್ಸ್‌ನ ಶ್ರೆತಾಂಕ್ ಅಗರವಾಲ್ ಅವರು ತಮ್ಮ ಮನೆಯಿಂದ ಟೊಯೊಟಾ ಫಾರ್ಚುನರ್ ಕಾಣೆಯಾಗಿದೆ ಎಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಶ್ಮೀರಿ ಗೇಟ್‌ನಿಂದ ಅದೇ ಕಾರಿನೊಂದಿಗೆ ಕುನಾಲ್‌ನನ್ನು ಹಿಡಿದಿದ್ದಾರೆ. ತನಿಖೆ ನಡೆಸಿದಾಗ ಕಾರಿನ ನೋಂದಣಿ ಮತ್ತು ಚಾಸಿಸ್ ಸಂಖ್ಯೆ ಹೊಂದಿಕೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ. 


ಇದನ್ನೂ ಓದಿ: ಹಾಡ ಹಗಲೇ ಸರಗಳ್ಳತನ: ವೃದ್ಧೆಯ ಸರ ಕಿತ್ತು ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ


ಅಂತಾರಾಜ್ಯ ಗ್ಯಾಂಗ್ ನಡೆಸುತ್ತಿದ್ದ:


ಈತ ಬೇಡಿಕೆಯ ಮೇರೆಗೆ ವಾಹನಗಳನ್ನು ಪೂರೈಸಲು ಅಂತಾರಾಜ್ಯ ಗ್ಯಾಂಗ್ ಅನ್ನು ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕಾರು ಕದ್ದು ಉತ್ತರ ಪ್ರದೇಶ, ಕಾಶ್ಮೀರಕ್ಕೆ ಸರಬರಾಜು:


ವಿಚಾರಣೆ ವೇಳೆ, ಕುನಾಲ್ 2013 ರಿಂದ ಕಾರುಗಳನ್ನು (Car Theft) ಕದಿಯುತ್ತಿದ್ದರು ಮತ್ತು ಅವರು ದೆಹಲಿ-ಎನ್‌ಸಿಆರ್‌ನಿಂದ ಐಷಾರಾಮಿ ಕಾರುಗಳನ್ನು ಕದ್ದು ಉತ್ತರ ಪ್ರದೇಶ ಮತ್ತು ಕಾಶ್ಮೀರಕ್ಕೆ ಸರಬರಾಜು ಮಾಡುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿಯ ವಿರುದ್ಧ ದೆಹಲಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.


ಪೊಲೀಸರು ಹಲವಾರು ಕಾರುಗಳು, ನಂಬರ್ ಪ್ಲೇಟ್‌ಗಳು, ಕೀಗಳು ಮತ್ತು ಕಾರು ಕಳ್ಳತನಕ್ಕೆ ಬಳಸಿದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.


100 ಕಾರುಗಳನ್ನು ಕದಿಯುವ ಗುರಿ:


ಅವರ ತಂದೆ ಅಮರ್ ಕಾಲೋನಿಯಲ್ಲಿ ಅಂಗಡಿ ಹೊಂದಿದ್ದಾರೆ. ಆರೋಪಿ 100 ಕಾರುಗಳನ್ನು ಕದಿಯುವ ಗುರಿ ಹೊಂದಿದ್ದ ಮತ್ತು ತನ್ನನ್ನು ತಾನು "ಕಾರ್ ಕಿಂಗ್" ಎಂದು ಕರೆದುಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.


ಈ ವ್ಯಕ್ತಿ ಐಷಾರಾಮಿ ಕಾರುಗಳನ್ನು ಕದ್ದು ಅದರಿಂದ ಬಂದ ಹಣದಿಂದ ಅದ್ದೂರಿ ಜೀವನಶೈಲಿ (Luxury Life) ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಸಂಪುಟ ವಿಸ್ತರಣೆ: ರಮೇಶ್ ಜಾರಕಿಹೊಳಿಗೆ ಮತ್ತೆ ಒಲಿಯುತ್ತಾ ಮಂತ್ರಿಗಿರಿ!?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.