ನವದೆಹಲಿ: ಒಡಿಸ್ಸಾದ ರಾಯಘಡ್ ಜಿಲ್ಲೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಐವರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಈ ಘಟನೆ ದುರ್ಗಿಯ ಬಿಸ್ಸಾಂ ಕಟಕ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಮಹಿಳಾ ಪೌರ ಕಾರ್ಮಿಕಳೋಬ್ಬಳು ಇಳಿದಿದ್ದು ಅವಳು ಬರದೆ ಇರುವುದನ್ನು ಕಂಡು ಮತ್ತಿಬ್ಬರು ಇಳಿದಿದ್ದಾರೆ, ಇದಾದ ನಂತರ ಈ ಮೂವರು ಹೊರ ಬರದೆ ಇದ್ದಾಗ ಅಲ್ಲೇ ಹತ್ತಿರದಲ್ಲಿ ಪುಟ್ಬಾಲ್ ಆಡುತ್ತಿದ್ದ ಮೂವರು ಯುವಕರು ಕೂಡ ಟ್ಯಾಂಕ್ ಗೆ ಇಳಿದಿದ್ದಾರೆ.ಆಗ ಯಾರು ಹೊರಬರದೆ ಅವರಲ್ಲಿ ಐವರು ಮೃತಪಟ್ಟಿದ್ದಾರೆ.ಅದರಲ್ಲಿ  ಕಾರ್ತಿಕ ಗೌಡ ಎನ್ನುವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಆ ವ್ಯಕ್ತಿ ಇನ್ನು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾನೆ.


ಇತ್ತ ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮೃತ ಕುಟುಂಬಗಳಿಗೆ 2 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.ಜಿಲ್ಲಾ ಆಡಳಿತ ರೆಡ್ ಕ್ರಾಸ್ ನಿಧಿ ಅಡಿಯಲ್ಲಿ 10 ಸಾವಿರ ರೂಪಾಯಿಗಳನ್ನು ಘೋಷಿಸಿದೆ.