ನವದೆಹಲಿ: ಹೊಸದಾಗಿ ಬಂದಿರುವ ವರದಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧದ ಕಾಯ್ದೆಯನ್ನು ಘೋಷಿಸಿದ ನಂತರ ಕಳೆದ ಎರಡು ವರ್ಷಗಳಲ್ಲಿ ಒಟ್ಟು ಐವತ್ತು ಲಕ್ಷಕ್ಕೂ ಅಧಿಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಅಜೀಮ್ ಪ್ರೇಮಜಿ ವಿಶ್ವವಿದ್ಯಾಲಯದ  ಸೆಂಟರ್ ಫಾರ್ ಸಸ್ಟೈನಬಲ್ ಎಂಪ್ಲಾಯ್ಮೆಂಟ್, ವಿಭಾಗದ ಮೂಲಕ ಮಂಗಳವಾರದಂದು ಬಿಡುಗಡೆ ಮಾಡಿದ "ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2019" ವರದಿಯಲ್ಲಿ ಎರಡು ವರ್ಷಗಳ ಅವಧಿಯಲ್ಲಿ 50 ಲಕ್ಷಕ್ಕೂ ಅಧಿಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.ಉದ್ಯೋಗ ಕಳೆದುಕೊಂಡಿರುವವರಲ್ಲಿ ಮಹಿಳೆಯರ ಪ್ರಮಾಣವೇ ಅಧಿಕವಿದೆ ಎಂದು ವರದಿ ತಿಳಿಸಿದೆ.


ಈ ಉದ್ಯೋಗದ ಕುಸಿತವು ನೋಟು ನಿಷೇಧದಿಂದ ಸಂಭವಿಸಿದೆಯೋ ಇಲ್ಲವೋ ಆದರೆ ಈ ಕುಸಿತ ನಿಜಕ್ಕೂ ಕಳವಳಕ್ಕೆ ಕಾರಣವಾಗಿದೆ ಆದ್ದರಿಂದ ತುರ್ತು ನೀತಿ ಹಸ್ತಕ್ಷೇಪದ ಅಗತ್ಯವಿದೆ ಎಂದು ವರದಿ ತಿಳಿಸಿದೆ. ಇತ್ತೀಚಿಗೆ ಲೀಕ್ ಆದ ಸರ್ಕಾರದ ವರದಿ ಪ್ರಕಾರ 2017-18 ರ ಅವಧಿಯಲ್ಲಿನ ನಿರುದ್ಯೋಗ ಏರಿಕೆ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅಧಿಕವೆಂದು ತಿಳಿದುಬಂದಿತ್ತು.ಆದರೆ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಈ ವರದಿಯನ್ನು ದೃಡೀಕರಿಸಲ್ಪಟ್ಟಿಲ್ಲ ಎಂದು ತಿಳಿಸಿದ್ದರು.