ವಾರ್ಧಾ: ಮಹಾರಾಷ್ಟ್ರದ ವಾರ್ಧಾದ ಪುಲ್ಗಾನ್ ಸೇನಾ ಡಿಪೋವೊಂದರಲ್ಲಿ ನಡೆದ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವ ವ್ಯಕ್ತಿ ಸ್ಥಿತಿ ತೀವ್ರ ಗಂಭೀರವಾಗಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ವಾರ್ಧಾದ ಮಿಲಿಟರಿ ಫೈರಿಂಗ್ ರೇಂಜ್ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಹಳೆಯ ಸ್ಫೋಟಕಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದ ಸುತ್ತಮುತ್ತಲ ಗ್ರಾಮಗಳಿಗೂ ಸ್ಫೋಟದ ಸದ್ದು ಕೇಳಿಸಿದೆ. 23 ಮಿ.ಮೀ. ಫಿರಂಗಿ ಸಾಮಗ್ರಿಗಳನ್ನು ಇಳಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, ಫ್ಯಾಕ್ಟರಿಯ ಓರ್ವ ಮತ್ತು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಕಾಮಾರಿಯಾ ಮೂಲದ ಫ್ಯಾಕ್ಟರಿಯಿಂದ ತಂದಿದ್ದ ಯುದ್ಧ ಸಾಮಗ್ರಿಗಳನ್ನು ಪುಲ್ಗಾಮ್‌ನ ಸಂಗ್ರಹಾಗಾರಕ್ಕೆ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ.



2016ರಲ್ಲಿ ಇದೇ ಪುಲ್ ಗಾಂವ್ ಸೇನಾ ಡಿಪೋದಲ್ಲಿ ಇಂತಹುದೇ ದುರ್ಘಟನೆ ಸಂಭವಿಸಿ 16 ಮಂದಿ ಸಿಬ್ಬಂದಿ ಸಾವಿಗೀಡಾಗಿದ್ದರು.