ದೆಹಲಿ: ಪಾಟ್ನಾದಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಆರು ತಿಂಗಳ ಹೆಣ್ಣು ಮಗು ಮೃತ ಪಟ್ಟಿರುವ ಘಟನೆ ಸಂಭವಿಸಿದೆ. 


COMMERCIAL BREAK
SCROLL TO CONTINUE READING

ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಡಿಸಿಪಿ ಸಂಜಯ್ ಭಾಟಿಯಾ ಮಗುವಿನ ಸಾವಿನ ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಪೈಸ್ ಜೆಟ್ ವಿಮಾನ ಎಸ್‌ಜಿ 8481 ರಲ್ಲಿ ಈ ಅಪಘಾತ ಸಂಭವಿಸಿದೆ. ಮೃತ ಮಗುವನ್ನು ಬಿಹಾರದ ಬೆಗುಸರಾಯ್ ಮೂಲದ ರಾಜೇಂದ್ರ ರಾಜನ್ ಅವರ ಪುತ್ರಿ ರಚಿತಾ ಕುಮಾರಿ ಎಂದು ಗುರುತಿಸಲಾಗಿದೆ.


ಹುಟ್ಟಿದಾಗಿನಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಶಿಶುವಿಗೆ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ನಲ್ಲಿ ಚಿಕಿತ್ಸೆಗಾಗಿ ಪಾಟ್ನಾದಿಂದ ದೆಹಲಿಗೆ ಬಂದಿದ್ದೆವು. ಆದರೆ ಮಾರ್ಗ ಮಧ್ಯೆ ಈ ದುರಂತ ಸಂಭವಿಸಿದೆ ಎಂದು ಶಿಶುವಿನ ಹೆತ್ತವರು ತಿಳಿಸಿದ್ದಾರೆ.