ನಂದುರ್ ಬಾರ್: ಮಹಾರಾಷ್ಟ್ರದ ನಂದುರ್ ಬಾರ್ ಜಿಲ್ಲೆಯ ನರ್ಮದಾ ನದಿಯಲ್ಲಿ ಬೋಟ್ ಮುಳುಗಿ 6 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 


COMMERCIAL BREAK
SCROLL TO CONTINUE READING

ಪೋಲೀಸರ ಪ್ರಕಾರ ದುರಂತ ನಡೆಯುವ ಮುನ್ನ ಬೋಟ್ 60 ಜನರನ್ನು ಹೊತ್ತೊಯ್ಯುತ್ತಿತ್ತು ಇದುವರೆಗೆ ಸುಮಾರು 36 ಜನರನ್ನು ರಕ್ಷಿಸಲಾಗಿದೆ ಅವರೆಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.



ಬೋಟ್ ನಲ್ಲಿದ್ದ ಜನರು ಮಕರ ಸಂಕ್ರಾಂತಿ ನಿಮಿತ್ತ ಪೂಜಾ ಕೈಕರ್ಯಗಳನ್ನು ಕೊಳ್ಳಲು ಬೋಟ್ ನಲ್ಲಿ ತೆರಳುತ್ತಿದ್ದರು, ಆಗ ಈ ದುರ್ಘಟನೆ ಸಂಭವಿಸಿದೆ. ಈಗ ರಕ್ಷಣಾ ಕಾರ್ಯಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯಲ್ಲಿ ಮೃತಪಟ್ಟಿರುವವರೆಲ್ಲರು ಕೂಡ ಬುಡುಕಟ್ಟು ಸಮುದಾಯಗಳು ಪ್ರಾಬಲ್ಯವಿರುವ ಗ್ರಾಮಗಳ ಜನರು ಎಂದು ಹೇಳಲಾಗಿದೆ.


ದುರ್ಘಟನೆ ಸಂಭವಿಸಲು ಪ್ರಮುಖ ಕಾರಣ ಅದು ತನ್ನ ಸಾಮರ್ಥ್ಯಕ್ಕಿಂತಲೂ ಅಧಿಕ ಜನರನ್ನು ಸಾಗಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.