ಅಪ್ರಾಪ್ತ ಬಾಲಕಿಯರ ಅತ್ಯಾಚಾರ: 60 ರ ವ್ಯಕ್ತಿಯ ಬಂಧನ
ನವದೆಹಲಿ: ಇಲ್ಲಿನ 60 ವಯಸ್ಸಿನ ಪಾಲಂ ನಿವಾಸಿಯು ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಪರಿಣಾಮವಾಗಿ ದೆಹಲಿಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮೊಹಮ್ಮದ್ ಜೈನುಲ್ ಎಂದು ಗುರುತಿಸಲಾಗಿದ್ದು, ಪೊಲೀಸರು ಪೋಸ್ಕೊ ಕಾಯ್ದೆಯ ಅಡಿಯಲ್ಲಿ ಬಂಧಿಸಿ ನ್ಯಾಯಾಂಗದ ಅಧೀನಕ್ಕೆ ಒಪ್ಪಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯರು ಕ್ರಮವಾಗಿ ಐದು ಮತ್ತು ಒಂಬತ್ತು ವರ್ಷದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ವ್ಯಕ್ತಿಯು ಬಾಲಕಿಯರಿಗೆ ಚಾಕಲೇಟ್ ಕೊಡುವ ಆಸೆಯನ್ನು ತೋರಿಸಿ ಅವರನ್ನು ತನ್ನ ಬಾಡಿಗೆ ರೂಮಿಗೆ ಕರೆದೊಯ್ದು ಈ ಕೃತ್ಯವೆಸಗಿದ್ದಾನೆ, ನಂತರ ಅವರಿಬ್ಬರಿಗೆ ಐದು ರೂಪಾಯಿ ನೀಡಿದ್ದಾನೆ, ಈ ಘಟನೆಯ ನಂತರ ಇಬ್ಬರು ಬಾಲಕಿಯರು ಮನೆಯಲ್ಲಿ ತಮ್ಮ ತಾಯಿಯ ಮುಂದೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಈ ವಿಷಯವನ್ನು ಪೋಲೀಸರ ಗಮನಕ್ಕೆ ತರಲಾಗಿದೆ. ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.