Viral News: ಬಡ ರಿಕ್ಷಾ ಚಾಲಕನಿಗೆ 1 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿದ ಅಜ್ಜಿ..!
ಸಮಲ್ ಅವರ ಸಮರ್ಪಣಾ ಭಾವ, ನಿಸ್ವಾರ್ಥ ಸೇವೆ ಮತ್ತು ಬದ್ಧತೆ ನೋಡಿದ ನಂತರ ಕೋಟ್ಯಂತರ ಮೌಲ್ಯದ ನನ್ನ ಆಸ್ತಿಯನ್ನು ಅವರಿಗೆ ದಾನ ನೀಡಲು ನಿರ್ಧರಿಸಿದೆ ಎಂದು ವೃದ್ಧೆ ಹೇಳಿದ್ದಾರೆ.
ಕಟಕ್: ಒಡಿಶಾದ ಕಟಕ್ ನಗರ( Cuttack in Odisha)ದಲ್ಲಿ ಅಜ್ಜಿಯೊಬ್ಬರು ತಮ್ಮ ಸುಮಾರು 1 ಕೋಟಿ ರೂ. ಮೌಲ್ಯದ ಸಂಪೂರ್ಣ ಆಸ್ತಿಯನ್ನು ಬಡ ರಿಕ್ಷಾ ಚಾಲಕನಿಗೆ ದಾನ ಮಾಡಿದ್ದಾರೆ. 63 ವರ್ಷದ ಮಿನಾತಿ ಪಟ್ನಾಯಕ್ ಅವರು ನಗರದ ಸುತಾಹತ್ ಪ್ರದೇಶದಲ್ಲಿರುವ 3 ಅಂತಸ್ತಿನ ಮನೆ, ಚಿನ್ನಾಭರಣಗಳು ಮತ್ತು ಇತರ ಎಲ್ಲಾ ಆಸ್ತಿಗಳನ್ನು ರಿಕ್ಷಾ ಚಾಲಕ ಬುಧಾ ಸಮಲ್‌ಗೆ ದಾನವಾಗಿ ನೀಡಿದ್ದಾರೆ. ತನ್ನ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿರುವ ರಿಕ್ಷಾ ಚಾಲಕ ಕಳೆದ 25 ವರ್ಷಗಳಿಂದ ಮಿನಾಟಿ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದುಬಂದಿದೆ.
ಸಂಬಲ್‌ಪುರದವರಾದ ಮಿನಾಟಿ(Minati Patnaik) ಅವರು ಕಟಕ್ ನಗರದ ಶ್ರೀಮಂತ ವ್ಯಕ್ತಿ ಕೃಷ್ಣ ಕುಮಾರ್ ಪಟ್ನಾಯಕ್ ಅವರನ್ನು ವಿವಾಹವಾಗಿದ್ದರು. ಪತಿ ಹಾಗೂ ಮಗಳು ಕೋಮಲ್ ಜೊತೆ ಖುಷಿ ಖುಷಿಯಿಂದ ಇದ್ದರು. ‘ನನ್ನ ಪತಿ 2020ರಲ್ಲಿ ನಿಧನರಾದರು, 2021ರಲ್ಲಿ ನನ್ನ ಮಗಳು ಕೂಡ ಸಾವನ್ನಪ್ಪಿದಳು. ನನಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವ ಕೊರಗು ನನ್ನನ್ನು ಕಾಡುತ್ತಿದೆ. ಪತಿ ಮತ್ತು ಪುತ್ರಿಯನ್ನು ಕಳೆದುಕೊಂಡ ಮೇಲೆ ನನ್ನ ಎಲ್ಲಾ ಆಸ್ತಿಗಳಿಗೆ ಯಾವುದೇ ಮೌಲ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Airtel ಬಳಕೆದಾರರಿಗೆ ಸಿಹಿ ಸುದ್ದಿ : ಪ್ರತಿ ದಿನ ಸಿಗಲಿದೆ 500MB ಫ್ರೀ ಡೇಟಾ
‘ನಾನು ಪತಿ ಮತ್ತು ಮಗಳನ್ನು ಕಳೆದುಕೊಂಡು ದುಃಖದಲ್ಲಿ ಬದುಕುತ್ತಿರುವಾಗ ನನ್ನ ಸಂಬಂಧಿಕರು ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ. ನಾನೊಬ್ಬಳೇ ಎಲ್ಲ ಕಷ್ಟ, ದುಃಖವನ್ನು ಅನುಭವಿಸಿದೆ. ಆದರೆ ಈ ರಿಕ್ಷಾ ಚಾಲಕ(Budha Samal) ಮತ್ತು ಆತನ ಕುಟುಂಬದವರು ಯಾವುದೇ ನಿರೀಕ್ಷೆ ಇಲ್ಲದೆ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಬದುಕಿದ್ದಾಗ ನನ್ನ ಪತಿ ಮತ್ತು ಮಗಳಿಗೂ ರಿಕ್ಷಾ ಚಾಲಕ ಸೇವೆ ಸಲ್ಲಿಸಿದ್ದಾನೆ. ಅವರ ಮರಣದ ನಂತರ ಬುಧಾ ಸಮಲ್ ಮತ್ತು ಅವರ ಕುಟುಂಬಸ್ಥರು ಒಂಟಿಯಾಗಿದ್ದ ನನ್ನ ಸೇವೆ ಮಾಡಲು ತಮ್ಮನ್ನೇ ಸಮರ್ಪಿಸಿಕೊಂಡರು. ನನ್ನ ಬಗ್ಗೆ ವಿಶೇಷ ಕಾಳಜಿ ವಹಿಸಿದ ಅವರಿಗೆ ಏನಾದರೂ ಕೊಡಬೇಕೆಂದು ನನ್ನ ಮನಸ್ಸು ಹೇಳುತ್ತಿತ್ತು’ ಅಂತಾ ಹೇಳಿದ್ದಾರೆ.
‘ಸಮಲ್(Cuttack Rikshawala) ಅವರ ಸಮರ್ಪಣಾ ಭಾವ, ನಿಸ್ವಾರ್ಥ ಸೇವೆ ಮತ್ತು ಬದ್ಧತೆಯನ್ನು ನೋಡಿದ ನಂತರ ಕೋಟ್ಯಂತರ ಮೌಲ್ಯದ ನನ್ನ ಆಸ್ತಿಯನ್ನು ಅವರಿಗೆ ದಾನ ನೀಡಲು ನಿರ್ಧರಿಸಿದೆ’ ಎಂದು ವೃದ್ಧೆ ಹೇಳಿದ್ದಾರೆ. ‘ನನ್ನ ಸಾವಿನ ನಂತರ ಬುಧಾ ಸಮಲ್ ಮತ್ತು ಆತನ ಕುಟುಂಬಕ್ಕೆ ಯಾರೂ ಕಿರುಕುಳ ನೀಡಿವುದಿಲ್ಲ. ಬಡತನದಲ್ಲಿಯೇ ಜಿವನ ಸಾಗಿಸುತ್ತಿದ್ದ ಅವರು ಈಗ ನಿಶ್ಚಿಂತೆಯಾಗಿ ಜೀವನ ನಡೆಸಬಹುದು’ ಎಂದು ವೃದ್ಧೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: iPhone 13ರ ಮೇಲೆ ಸಿಗಲಿದೆ ಹಿಂದೆದೂ ಸಿಗದ Discount, ಸಿಗಲಿದೆ 37 ಸಾವಿರ ರೂ ಗಳ ಭರ್ಜರಿ ರಿಯಾಯಿತಿ
ಕಳೆದ 25 ವರ್ಷಗಳಿಂದ ಈ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿದ್ದು, ಆಸ್ತಿಯ ಕನಸು ಕಂಡಿರಲಿಲ್ಲ ಎಂದು ರಿಕ್ಷಾ ಚಾಲಕ(Cuttack Rikshawala) ಹೇಳಿದ್ದಾನೆ. ಆತ ತನ್ನ ರಿಕ್ಷಾದಲ್ಲಿ ಬೇರೆ ಯಾವುದೇ ಪ್ರಯಾಣಿಕರನ್ನು ಕರೆದೊಯ್ಯುವುದಿಲ್ಲ. ‘ಮಿನಾಟಿಯವರ ಪತಿ ತೀರಿಕೊಂಡ ನಂತರ ನಾನು ಮತ್ತು ನನ್ನ ಕುಟುಂಬಸ್ಥರು ವಯಸ್ಸಾಗಿರುವ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡೆವು. ಒಂಟಿಯಾಗಿ ಜೀವನ ನಡೆಸುತ್ತಿರುವ ಅವರಿಗೆ ಪತಿ ಮತ್ತು ಮಗಳನ್ನು ಕಳೆದುಕೊಂಡಿರುವ ದುಃಖವಿದೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಿ ಅವರನ್ನು ಆರೈಕೆ ಮಾಡುತ್ತಿದ್ದೇವೆ. ಅವರು ಕೊನೆಯ ಉಸಿರು ಇರುವವರೆಗೂ ಏನೂ ತೊಂದರೆಯಾಗದ ರೀತಿ ಅವರನ್ನುನಾವು ನೋಡಿಕೊಳ್ಳುತ್ತೇವೆಂದು ರಿಕ್ಷಾ ಚಾಲಕ ಸಮಲ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.