Viral: ಹೆಣ್ಣು ಮಗುವಿಗೆ ಜನ್ಮ ನೀಡಿದ 65ರ ವೃದ್ಧೆ; 80 ವರ್ಷದ ಪತಿ ಹೇಳಿದ್ದೇನು?
ಕಾಶ್ಮೀರದ 65 ವರ್ಷ ವಯಸ್ಸಿನ ವೃದ್ಧೆಯೋಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಇಡೀ ವೈದ್ಯಲೋಕಕ್ಕೆ ಅಚ್ಚ ಮೂಡಿಸಿದ್ದಾರೆ.
ಶ್ರೀನಗರ: ಕಾಶ್ಮೀರದ 65 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಇಡೀ ವೈದ್ಯಲೋಕಕ್ಕೆ ಅಚ್ಚ ಮೂಡಿಸಿದ್ದಾರೆ. ಈ ಬಗ್ಗೆ 80 ವರ್ಷ ವಯಸ್ಸಿನ ಮಗುವಿನ ತಂದೆ ಹರ್ಷ ವ್ಯಕ್ತಪಡಿಸಿದ್ದು, ಇದೆಲ್ಲಾ ಅಲ್ಲಾನ ಕೃಪೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಈಗಾಗಲೇ ಈ ದಂಪತಿಗೆ 10 ವರ್ಷದ ಮಗನಿದ್ದಾನೆ ಎನ್ನಲಾಗಿದೆ.
ಪೂಂಚ್ ಜಿಲ್ಲಾಸ್ಪತ್ರೆಗೆ ಬುಧವಾರ ಹೆರಿಗೆ ನೋವೆಂದು ದಾಖಲಾಗಿದ್ದ ಮಹಿಳೆ ಮಧ್ಯಾಹ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಮೂಲಕ ವಿಶ್ವದಲ್ಲಿಯೇ ನವಜಾತ ಶಿಶು ಹೊಂದಿದ ಅತೀ ಹಿರಿಯ ತಾಯಿ ಎಂಬ ಹೆಗ್ಗಳಿಕೆಗೆ ಮಹಿಳೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಿಶುವಿನ ತಂದೆ ಹಕೀಂ ದಿನ್ (80) ಅವರು, 'ಇದು ಅಲ್ಲಾಹುವಿನ ಪವಾಡ. ದೇವರು ನನಗೆ ನೀಡಿರುವ ಅಮೂಲ್ಯವಾದ ಕಾಣಿಕೆ. ಈ ಮಗವಿನ ಪೋಷಣೆಗೆ ಸರ್ಕಾರ ನೆರವಾಗಬೇಕು' ಎಂದು ಮನವಿ ಮಾಡಿದ್ದಾರೆ .