ನವದೆಹಲಿ: 70ನೇ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಧ್ವಜಾರೋಹಣ ನೆರವೇರಿಸಿದರು.


COMMERCIAL BREAK
SCROLL TO CONTINUE READING

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 



ಇದೇ ಸಂದರ್ಭದಲ್ಲಿ ಹುತಾತ್ಮ ಯೋಧ ಲ್ಯಾನ್ಸ್​ ನಾಯಕ್​​ ನಾಜಿರ್​ ಅಹ್ಮದ್​ ವಾನಿ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ಸಮರ್ಪಿಸಿದರು. ವಾನಿ ಅವರ ಪತ್ನಿ ಮಹಾಜಬೀನ್ ರಾಷ್ಟ್ರಪತಿಗಳಿಂದ​​ ಪ್ರಶಸ್ತಿ ಸ್ವೀಕರಿಸಿದರು. 



ಬಳಿಕ ಮಂಜು ಕವಿದ ವಾತಾವರಣದ ನಡುವೆಯೇ ಲೆಫ್ಟಿನೆಂಟ್​ ಜನರಲ್​ ಅಸಿತ್​ ಮಿಸ್ತ್ರಿ ನೇತೃತ್ವದಲ್ಲಿ ರಾಜಪಥದಲ್ಲಿ ಪಥಸಂಚಲನ ಆರಂಭವಾಯಿತು. ವಿವಿಧ ಸೇನಾ ತುಕಡಿಗಳಿಂದ ಬಲ ಪ್ರದರ್ಶನ, ಪಥ ಸಂಚಲನದ ಮೂಲಕ ಸೇನಾ ಶಕ್ತಿ ಪ್ರದರ್ಶನ, ಸಿಆರ್​ಪಿಎಫ್​, ಕರಾವಳಿ ಮೀಸಲು ಪಡೆ, ರೈಲ್ವೆ ಭದ್ರತಾ ಪಡೆ, ವಿವಿಧ ರೆಜಿಮೆಂಟ್​ಗಳಿಂದ ಪೆರೇಡ್​, ನೌಕಾದಳ ಹಾಗೂ ವಾಯುಪಡೆಯ ಸ್ತಬ್ದಚಿತ್ರ ಪ್ರದರ್ಶನ, M777 American Ultra Light Howitzers ಗನ್​ ಸಿಸ್ಟಂ, (MBT) T-90 ಬ್ಯಾಟಲ್​ ಟ್ಯಾಂಕ್​,  ಭಾರತ ನಿರ್ಮಿತ Akash Weapon System ಮುಂತಾದ ಪ್ರಬಲ ಸೇನಾ ಅಸ್ತ್ರಗಳ ಕವಾಯತು ಗಣರಾಜ್ಯೋತ್ಸವ ಮೆರವಣಿಗೆಗೆ ರಂಗು ನೀಡಿದೆ.