ವಡೋದರಾ (ಗುಜರಾತ್) :  ದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ (Plastic Ban) ಆಗಿದ್ದರೂ ಅದರ ಬಳಕೆ ಮಾತ್ರ ಇನ್ನೂ ನಿಂತಿಲ್ಲ. ಭೂಮಿಯಲ್ಲಿ ಕರಗದ ಈ ಪ್ಲಾಸ್ಟಿಕ್ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿದಿನ ಮನೆ, ಅಂಗಡಿ, ಕೈಗಾರಿಕೆಗಳಿಂದ ಹೊರಬೀಳುವ ಪ್ಲಾಸ್ಟಿಕ್ ಕೇವಲ ಪರಿಸರ ಮಾಲಿನ್ಯವನ್ನಷ್ಟೇ ಉಂಟು ಮಾಡುವುದಿಲ್ಲ. ಅದು ಪ್ರಾಣಿಗಳ ಜೀವಕ್ಕೂ ಅಪಾಯ ತಂದೊಡ್ಡುತ್ತದೆ. 


COMMERCIAL BREAK
SCROLL TO CONTINUE READING

ಐಸ್ ಕ್ರೀಮ್ ಕಪ್, ಚಮಚಗಳು ಮತ್ತು ಪ್ಲಾಸ್ಟಿಕ್ ಚೀಲಗಳನ್ನುಸೇರಿ ಹಸುವಿನ ಹೊಟ್ಟೆಯೊಳಗಿದ್ದ ಬರೋಬ್ಬರಿ 77 ಕೆಜಿ ತೂಕದ  ಪ್ಲಾಸ್ಟಿಕ್ ತ್ಯಾಜ್ಯವನ್ನು (77kg of plastic in cow stomach) ಗುಜರಾತ್​​ನ ಆನಂದ್​ ಜಿಲ್ಲೆಯ ಪಶುವೈದ್ಯರು ಹೊರತೆಗೆದಿದ್ದಾರೆ.


ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಅಸ್ವಸ್ಥಗೊಂಡಿದ್ದ ಹಸುವನ್ನು ಆನಂದ್‌ನಲ್ಲಿರುವ ಪಶು ಆಸ್ಪತ್ರೆಗೆ ಕರೆತಂದಿತ್ತು. ಹಸುವನ್ನು ಪರೀಕ್ಷಿಸಿದ ವೈದ್ಯರು, ಎರಡೂವರೆ ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆದಿದ್ದಾರೆ.


ಇದನ್ನೂ ಓದಿ:  Corona : ಆತಂಕ ಹೆಚ್ಚಿಸಿದ ಒಮಿಕ್ರಾನ್, ಶೀಘ್ರದಲ್ಲೀ ಸಿಗಲಿದೆಯೇ ಲಸಿಕೆಯ ಬೂಸ್ಟರ್ ಡೋಸ್?


ನಾವು ಹಸುವಿಗೆ ಶಸ್ತ್ರಚಿಕಿತ್ಸೆ ಮಾಡಿದಾಗ, ನಮ್ಮ ತಂಡವು 77 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆದಿದೆ. ತ್ಯಾಜ್ಯದಲ್ಲಿ ಐಸ್‌ಕ್ರೀಂ ಕಪ್‌ಗಳು, ಚಮಚಗಳು ಮತ್ತು ಇತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಜನರು ರಸ್ತೆಬದಿಯಲ್ಲಿ ಎಸೆಯುತ್ತಾರೆ. ಇದನ್ನು ಬಿಡಾಡಿ ದನ-ಕರುಗಳು ತಿನ್ನುತ್ತವೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ಹಸುವಿನ ಹೊಟ್ಟೆಯೊಳಗೆ (plastic in cow stomach) ಸೇರುತ್ತದೆ ಎಂದು ಕಾಮಧೇನು ವಿಶ್ವವಿದ್ಯಾಲಯದ ಪಶುವೈದ್ಯಕೀಯ ಕಾಲೇಜಿನ ಪಶುವೈದ್ಯಕೀಯ ಮತ್ತು ವಿಕಿರಣಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಪಿನೇಶ್ ಪಾರಿಖ್ ಹೇಳಿದರು. 


ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪ್ರತಿ ವಾರ 3 ರಿಂದ 4 ಬಿಡಾಡಿ ಹಸುಗಳು ರಸ್ತೆ ಬದಿಯ ಕಸದ ರಾಶಿಯಿಂದ ಅಥವಾ ಬಯಲಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು (Plastic in cow stomach)ಸೇವಿಸಿ ಅನಾರೋಗ್ಯಕ್ಕೆ ಒಳಗಾಗುತ್ತವೆ. ಪ್ರತಿ ಬಾರಿ, ತ್ಯಾಜ್ಯವು 10 ಕೆಜಿಯಿಂದ ಹಿಡಿದು 55-60 ಕೆಜಿವರೆಗೆ ಇರುತ್ತದೆ. ಜನರು ಸಾಮಾನ್ಯವಾಗಿ ಎಸೆಯುವ ಅಥವಾ ರಸ್ತೆಬದಿಯಲ್ಲಿ ಬಿಸಾಡುವ ಪ್ಲಾಸ್ಟಿಕ್ ಅನ್ನು ಹಸುಗಳು ಆಕಸ್ಮಿಕವಾಗಿ ಸೇವಿಸಿದ ಪ್ರಕರಣಗಳು ಸಹ ನಮ್ಮ ಗಮನಕ್ಕೆ ಬಂದಿವೆ ಎಂದು ಅವರು ಹೇಳಿದರು.


ಇದನ್ನೂ ಓದಿ: Reliance Jio ಬಳಕೆದಾರರಿಗೆ ಶಾಕ್ : ಇನ್ನು ರೀಚಾರ್ಜ್ ಪ್ಲಾನ್ ನಲ್ಲಿ ಸಿಗುವುದಿಲ್ಲ ಈ ಪ್ರಯೋಜನಗಳು


ಬಿಡಾಡಿ ದನಗಳು (Stray cattle) ಆಕಸ್ಮಿಕವಾಗಿ ಪ್ಲಾಸ್ಟಿಕ್ ಸೇವಿಸುವುದರಿಂದ, ಅದು ಅವುಗಳ ಹೊಟ್ಟೆ ಸೇರುವುದರಿಂದ ಜಾನುವಾರುಗಳಿಗೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ ಎಂದು ಪಾರಿಖ್ ಹೇಳಿದರು.


ಅಂತಿಮವಾಗಿ, ಅವುಗಳ ಜೀರ್ಣ ಶಕ್ತಿ ಕಡಿಮೆಯಾಗುತ್ತದೆ ಮತ್ತು ಪ್ರಾಣಿಯು ಅನಾರೋಗ್ಯಕ್ಕೆ ಒಳಗಾಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ ಮತ್ತು ಕೆಲವೊಮ್ಮೆ ಅವರು ಪ್ಲಾಸ್ಟಿಕ್ ತ್ಯಾಜ್ಯದಿಂದ ಸಾಯುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.