ನವದೆಹಲಿ: ನೀವೂ ಕೂಡ ಒಂದು ವೇಳೆ ಕೇಂದ್ರ ಸರ್ಕಾರದ (Modi Govt) ಉದ್ಯೋಗಿ ಅಥವಾ ಪಿಂಚಣಿದಾರರಾಗಿದ್ದರೆ, ನಿಮಗಾಗಿ ಇದೊಂದು ಪ್ರಮುಖ ಸುದ್ದಿಯಾಗಿದೆ.  2020 ರಲ್ಲಿ ತನ್ನ ನೌಕರರು ಮತ್ತು ಪಿಂಚಣಿದಾರರ ಡಿಯರ್ ನೆಸ್ ಅಲ್ಲೌನ್ಸ್ (DA) ಹೆಚ್ಚಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೂ ಕೂಡ ಡಿಎನ್‌ಎಯಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಮುಂದಿನ ವರ್ಷ ಜುಲೈನಲ್ಲಿ ತುಟ್ಟಿ ಭತ್ಯೆಯನ್ನು  ಹೆಚ್ಚಿಸಲು ಪರಿಗಣಿಸಬಹುದು ಎಂದು ಸರ್ಕಾರ ಸೂಚಿಸಿದೆ. ಸರ್ಕಾರದ ಈ ನಿರ್ಧಾರವು ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರ ಮೇಲೆ ನೇರ ಪರಿಣಾಮ ಬೀರಲಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಸರ್ಕಾರಿ ನೌಕರರಿಗೆ ನೆಮ್ಮದಿಯ ಸುದ್ದಿ ನೀಡಿದ Modi Govt


ಕೊರೊನಾ ವೈರಸ್ ಹಿನ್ನೆಲೆ ನಿರ್ಧಾರವನ್ನು ಮುಂದೂಡಲಾಗಿತ್ತು
ಕೊರೊನೊವೈರಸ್ ಸಾಂಕ್ರಾಮಿಕದ ಹಿನ್ನೆಲೆ ಉದ್ಭವಿಸಿರುವ  ಆರ್ಥಿಕ ಸವಾಲನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ತನ್ನ ಉದ್ಯೋಗಿಗಳಿಗೆ ಡಿಯರ್ನೆಸ್ ಅಲ್ಲೌನ್ಸ್ ಹೆಚ್ಚಳವನ್ನು ಜುಲೈ 2021 ರವರೆಗೆ ಮುಂದೂಡಿದೆ. 2020 ರ ಜನವರಿ 1 ರಿಂದ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಕೇಂದ್ರ ಸರ್ಕಾರದ ನೌಕರರಿಗೆ ಪಾವತಿಸಬೇಕಾದ ಡಿಯರ್ ನೆಸ್ ಭತ್ಯೆಯ ಹೆಚ್ಚುವರಿ ಕಂತು ಮತ್ತು ಹಣದುಬ್ಬರ  ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.


ಅದನ್ನು ಓದಿ- ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್


ಡಿಎ ಹಾಗೂ ಹಚ್ಚುವರಿ ಕಂತಿನ ಪೇಮೆಂಟ್ ಗೆ ತಡೆ ನೀಡಲಾಗಿತ್ತು
ಜುಲೈ 1, 2020 ಮತ್ತು ಜನವರಿ 1, 2021 ರಿಂದ ಡಿಎ ಹೆಚ್ಚಳ ಮತ್ತು ಹೆಚ್ಚುವರಿ ಕಂತು ಪಾವತಿಸಲಾಗುವುದಿಲ್ಲ ಎಂದು ಖರ್ಚು ಇಲಾಖೆ ತನ್ನ  ಪತ್ರದಲ್ಲಿ ತಿಳಿಸಿದೆ. ವಾಸ್ತವದಲ್ಲಿ  ಕೊರೊನೊವೈರಸ್ ಲಾಕ್‌ಡೌನ್‌ನಿಂದಾಗಿ, ಸರ್ಕಾರದ ತೆರಿಗೆ ಆದಾಯದ ಮೇಲೆ ಕೆಟ್ಟ ಪರಿಣಾಮ  ಬೀರಿದೆ. ಖರ್ಚು ಹೆಚ್ಚಾಗಿದೆ, ಹಾಗೂ ದೇಶದ ಆದಾಯದಲ್ಲಿ ಇಳಿಕೆಯಾಗಿದೆ. ಆದ್ದರಿಂದ ಜನರ ಪರವಾಗಿ ಕಡಿಮೆ ಖರ್ಚು ಮಾಡಲಾಗುತ್ತಿದೆ.


ಇದನ್ನು ಓದಿ- ಮೋದಿ ಸರ್ಕಾರದ ದೊಡ್ಡ ಗಿಫ್ಟ್: ನಿವೃತ್ತಿ ಹೊಂದುವ ನೌಕರರ ಚಿಂತೆಯಾಗಲಿದೆ ದೂರ


ಮಾರ್ಚ್ ನಲ್ಲಿ ಶೇ. 4 ರಷ್ಟು ಡಿಎ ಹೆಚ್ಚಳಕ್ಕೆ ಅನುಮತಿ ನೀಡಲಾಗಿತ್ತು
ಇದೇ ವರ್ಷದ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರ ನೌಕರರ ಹಾಗೂ ಪಿಂಚಣಿದಾರರ ಡಿಎನಲ್ಲಿ ಶೇ.4 ರಷ್ಟು ಹೆಚ್ಚಳ ಮಾಡಲು ಅನುಮೋದನೆ ನೀಡಿತ್ತು. ಸಾಮಾನ್ಯವಾಗಿ ಹೆಚ್ಚಾಗಿರುವ ಹಣದುಬ್ಬರವನ್ನು ನಿಭಾಯಿಸಲು ವರ್ಷದಲ್ಲಿ ಎರಡು ಬಾರಿಗೆ ಡಿಎ ಪರಿಷ್ಕರಿಸುತ್ತದೆ. ಇದು ಸರ್ಕಾರದ ವೆಚ್ಚದಲ್ಲಿ ಕಡಿತ ಮಾಡುವ ಮತ್ತೊಂದು ಪ್ರಯತ್ನವಾಗಿದೆ. ಇದಕ್ಕೂ ಮೊದಲು ಸರ್ಕಾರ ಸಚಿವರು, ಪ್ರಧಾನಿ, ರಾಷ್ಟ್ರಪತಿ ಹಾಗೂ ಸಂಸದರ ವೇತನದಲ್ಲಿ ಶೇ.30ರಷ್ಟು ಕಡಿತವನ್ನು ಘೋಷಿಸಿತ್ತು. ಕೊವಿಡ್ 19 ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಸಂಸದರಿಗೆ ನೀಡಲಾಗುವ MPLAD ಫಂಡ್ ಅನ್ನು ಕೂಡ ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿದೆ.