ನವದೆಹಲಿ: 7th Pay Commission - ತಮ್ಮ ತುಟ್ಟಿ ಭತ್ಯೆಯ ಅರಿಯರ್ಸ್ ಗೆ ಸಂಬಂಧಪಟ್ಟಂತೆ ನಡೆಯಲಿರುವ ಸಭೆಗಾಗಿ ಕೇಂದ್ರ ಸರ್ಕಾರಿ ನೌಕರರು ತುದಿಗಾಲಲ್ಲಿ ಕಾಯುತ್ತಿದ್ದಾರೆ.  ಈ ಸಭೆ, ಕೇಂದ್ರ ಸರ್ಕಾರಿ ನೌಕರರ (CGS) ನೇತೃತ್ವದ ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ (National Council Of JCM), ಹಣಕಾಸು ಸಚಿವಾಲಯದ (Finance Ministry) ಕೇಂದ್ರ ಸರ್ಕಾರದ ಅಧಿಕಾರಿಗಳು ಮತ್ತು ಹಣಕಾಸು ಸಚಿವಾಲಯ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ನಡುವೆ ನಡೆಯಲಿದೆ.


COMMERCIAL BREAK
SCROLL TO CONTINUE READING

DA ಅರಿಯರ್ಸ್ ಗೆ ಸಂಬಂಧಿಸಿದಂತೆ ಈ ತಿಂಗಳು ನಡೆಯಲಿದೆ ಸಭೆ (7th Pay Commission Latest News Today)
ಕೇಂದ್ರ ಸರ್ಕಾರಿ ನೌಕರರ (Central Government Employees) ಜೊತೆಗಿನ ಈ ಸಭೆ ಕಳೆದ ಮೇ ತಿಂಗಳಿನಲ್ಲಿ ನಡೆಯಬೇಕಿತ್ತು. ಆದರೆ, ಕೊರೊನಾ ಮಹಾಮಾರಿಯಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆ ಸಭೆ ನಡೆದಿರಲಿಲ್ಲ.  ನ್ಯಾಷನಲ್ ಕೌನ್ಸಿಲ್ -JCM ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಇದೀಗ ಈ ಸಂಭೆ ಜೂನ್ ನಲ್ಲಿ ನಡೆಯುವ ಸಾಧ್ಯತೆ ಇದೆ.


ಕರೋನಾ ಸಾಂಕ್ರಾಮಿಕ ರೋಗದಿಂದಾಗಿ, ದೆಹಲಿಯಲ್ಲಿ ನಿರ್ಬಂಧಗಳು ಜಾರಿಯಲ್ಲಿದ್ದವು, ಈ ಕಾರಣದಿಂದಾಗಿ ಮೂರು ಕಂತುಗಳ DAಗೆ ಸಂಬಂಧಿಸಿದ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಕೇಂದ್ರ ನೌಕರರಿಗೆ ಜೂನ್ 1, 2020 ರಿಂದ ಮೂರು ಕಂತುಗಳ ಡಿಎ  ಪಾವತಿಯಾಗಬೇಕಿದೆ (DA Hike). ಇದನ್ನು ಕೇಂದ್ರ ಸರ್ಕಾರವು 2021 ರ ಜೂನ್ 30 ರವರೆಗೆ ಸ್ಥಗಿತಗೊಳಿಸಿತ್ತು. ಈ ಕಂತುಗಳ ಸ್ವೀಕೃತಿಯೊಂದಿಗೆ, ಕೇಂದ್ರ ಸರ್ಕಾರಿ ನೌಕರರ 7th Pay Commission Matrix ನಲ್ಲಿ ಭಾರಿ ಏರಿಕೆಯಾಗುವ ನಿರೀಕ್ಷೆ ಇದೆ.


ಕೊರೊನಾ ಕಾರಣದಿಂದ ನಡೆದಿರಲಿಲ್ಲ ಈ ಸಭೆ (DA Latest News Today)
ಕೇಂದ್ರ ಸರ್ಕಾರಿ ನೌಕರರ DA (DA Hike Latest Update) ಬಾಕಿ ಕುರಿತಂತೆ ನಡೆಯಬೇಕಿದ್ದ ಪ್ರಸ್ತಾವಿತ ಸಭೆಯ ಕುರಿತು ಮಾತನಾಡಿರುವ JCM ನ ನ್ಯಾಷನಲ್ ಕೌನ್ಸಿಲ್ ನ ಸೆಕ್ರೆಟರಿ ಶಿವ್ ಗೋಪಾಲ್ ಮಿಶ್ರಾ, ಕೇಂದ್ರ ವಿತ್ತ ಸಚಿವಾಲಯ ಹಾಗೂ DoPT ಅಧಿಕಾರಿಗಳ ಜೊತೆ ಮೆಯ್ 2021ರಲ್ಲಿ ಸಭೆ ನಡೆಯಬೇಕಿತ್ತು. ಕೊರೊನಾ ಲಾಕ್ ಡೌನ್ ಹಿನ್ನೆಲೆ ಈ ಸಭೆ ನಡೆಸಲಾಗಿಲ್ಲ. ಈ ಸಭೆ ಜೂನ್ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.


ಇದನ್ನೂ ಓದಿ-Income Tax New Portal ಇಂದಿನಿಂದ ಆರಂಭ, ತೆರಿಗೆದಾರರಿಗೆ ಲಭ್ಯವಾಗಲಿದೆ 7 ಹೊಸ ವೈಶಿಷ್ಟ್ಯ


ಈ ಸಭೆ ನಡೆಸುವಲ್ಲಾಗುತ್ತಿರುವ ವಿಳಂಬವನ್ನು ನೌಕರರು ನಕಾರಾತ್ಮಕ ಭಾವಿಸಬಾರದು. ಏಕೆಂದರೆ ಕೇಂದ್ರ ಸರ್ಕಾರದ ಅಧಿಕಾರಿಗಳಿಂದ ಈ ಕುರಿತು ಉತ್ತಮ ಸಂಕೇತಗಳು ಸಿಗುತ್ತಿವೆ, ನ್ಯಾಷನಲ್ ಕೌನ್ಸಿಲ್ ಆಫ್ JCM ಕೂಡ DA ಬಾಕಿ ಪಾವತಿ ಕುರಿತು ಪರ್ಯಾಯಗಳ ಹುಡುಕಾಟಕ್ಕೂ ಸಿದ್ಧವಿದೆ. ಅಷ್ಟೇ ಅಲ್ಲ ಈ ಕುರಿತು JCM ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಕೂಡ ಸಲ್ಲಿಸಿದೆ. ಒಂದು ವೇಳೆ ಮೂರು ಕಂತುಗಳ DA ಏಕಕಾಲಕ್ಕೆ ಪಾವತಿಸುವಲ್ಲಿ ಅಡಚಣೆ ಎದುರಾಗುತ್ತಿದ್ದರೆ, ಅದನ್ನು ಹಂತ ಹಂತವಾಗಿ ಸರ್ಕಾರ ಪಾವತಿಸಬಹುದು ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ ಎಂದು ಶಿವ್ ಗೋಪಾಲ್ ಮಿಶ್ರಾ ಹೇಳಿದ್ದಾರೆ.


ಇದನ್ನೂ ಓದಿ-Business Plan: ಕೇವಲ 15,000 ರೂ. ಹೂಡಿಕೆ ಮಾಡಿ ಈ ಬಿಸಿನೆಸ್ ಆರಂಭಿಸಿ, 1 ಲಕ್ಷಕ್ಕೂ ಹೆಚ್ಚು ಸಂಪಾದಿಸಿ


ಕೇಂದ್ರ ಸರ್ಕಾರಿ ನೌಕರರಿಗೆ ಪ್ರಸ್ತುತ ಶೇ.17ರ ದರದಲ್ಲಿ DA ಪಾವತಿಸಲಾಗುತ್ತಿದೆ. ಇದು ಶೇ 11 ರಷ್ಟು ಹೆಚ್ಚಾಗಿ ಶೇ. 28ಕ್ಕೆ ತಲುಪುವ ನಿರೀಕ್ಷೆ ಇದೆ. ಇದರಿಂದ ಸರ್ಕಾರಿ ನೌಕರರ ವೇತನದಲ್ಲಿ ಜಬರ್ದಸ್ತ್ ಏರಿಕೆಯಾಗಲಿದೆ.  ಇನ್ನೊಂದೆಡೆ , ನೌಕರರು ಎರಡು ವರ್ಷಗಳ ಡಿಎಯ ಲಾಭವನ್ನು ಏಕಕಾಲಕ್ಕೆ ಪಡೆಯಲಿದ್ದಾರೆ. ಏಕೆಂದರೆ 2020 ರ ಜನವರಿಯಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಲಾಗಿದೆ, ನಂತರ ದ್ವಿತೀಯಾರ್ಧದಲ್ಲಿ ಅಂದರೆ ಜೂನ್‌ನಲ್ಲಿ ಶೇ. 3 ರಷ್ಟು ಹೆಚ್ಚಳವಾಗಿದೆ. ಜನವರಿ 2021 ರಲ್ಲಿ ತುಟ್ಟಿಭತ್ಯೆಯನ್ನು ಮತ್ತೊಮ್ಮೆ ಶೇ. 4 ರಷ್ಟು  ಹೆಚ್ಚಾಗಿದೆ, ಅಂದರೆ ಕಳೆದ ವರ್ಷದ ಜನವರಿಯಿಂದ ಈ ವರ್ಷದ ಜೂನ್ ವರೆಗೆ ತುಟ್ಟಿಭತ್ಯೆ ಶೇ.11 ರಷ್ಟು ಹೆಚ್ಚಳವಾಗಿ ಶೇ.28ಕ್ಕೆ ತಲುಪಿರುವುದು ಗಮನಾರ್ಹ.


ಇದನ್ನೂ ಓದಿ- EPFO Rules: ನಿಮ್ಮ ಪಿಎಫ್ ಖಾತೆಯಲ್ಲಿ ಸಿಗಲಿದೆ 50,000 ರೂ. ನೇರ ಪ್ರಯೋಜನ, ಆದರೆ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.