ನವದೆಹಲಿ: ದೆಹಲಿ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದನ್ನು ದೆಹಲಿ ಸರ್ಕಾರ ಘೋಷಣೆ ಮಾಡಿದೆ. ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ದೆಹಲಿ ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯದ ನೌಕರರ ವೇತನ ಪರಿಷ್ಕರಣೆಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ. ಈ ಪರಿಷ್ಕೃತ ವೇತನ ಜನವರಿ 1, 2016 ರಿಂದ ಅನ್ವಯವಾಗಲಿದೆ.


COMMERCIAL BREAK
SCROLL TO CONTINUE READING

ಇಂದು ನಡೆದ ಸಭೆಯಲ್ಲಿ, ಉನ್ನತ ಶಿಕ್ಷಣ ಇಲಾಖೆಯ ವೇತನ ಪರಿಷ್ಕರಣೆ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ ಕ್ಯಾಬಿನೆಟ್, ಏಳನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ಶಿಕ್ಷಕರು ಮತ್ತು ಅದೇ ದರ್ಜೆಯ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ನೌಕರರ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದೆ. 


ದೆಹಲಿ ಸರ್ಕಾರವು 12 ವಿಶ್ವವಿದ್ಯಾನಿಲಯಗಳು ಮತ್ತು ದೆಹಲಿ ವಿಶ್ವವಿದ್ಯಾನಿಲಯದ 12 ಅನುದಾನಿತ ಕಾಲೇಜುಗಳು, ಮೂರು ವಿಶ್ವವಿದ್ಯಾನಿಲಯಗಳನ್ನು ನಡೆಸುತ್ತಿದೆ. ಅಷ್ಟೇ ಅಲ್ಲದೆ, ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ನಡೆಸುತ್ತಿರುವ ಶಾಲೆಗಳ ಸಮಗ್ರ ಮೌಲ್ಯಮಾಪನಕ್ಕೆ ಭಾರತೀಯ ಗುಣಮಟ್ಟ ಮಂಡಳಿ (QCI) ಯನ್ನು ಕನ್ವೀನರ್ ಆಗಿ ನೇಮಿಸಬೇಕು ಎಂಬ ಪ್ರಸ್ತಾವನೆಗೂ ಕ್ಯಾಬಿನೆಟ್ ಅನುಮೋದನೆ ನೀಡಿದೆ. ದೆಹಲಿ ಸರ್ಕಾರವು ಸೆಪ್ಟೆಂಬರ್ನಲ್ಲಿ ಅತಿಥಿ ಶಿಕ್ಷಕರ ವೇತನವನ್ನು ಪರಿಷ್ಕರಿಸಿತ್ತು.


ಇದಕ್ಕೂ ಮುನ್ನ, ಬಿಹಾರ ಸರ್ಕಾರ ತನ್ನ ರಾಜ್ಯದ ನೌಕರರು ಮತ್ತು ನಿವೃತ್ತ ನೌಕರರ ಡಿಎ(Dearness Allowance-DA)ಯನ್ನು ಶೇ. 7 ರಿಂದ 9ಕ್ಕೆ ಹೆಚ್ಚಿಸಿತ್ತು. ಈ ಭತ್ಯೆ ಹೆಚ್ಚಳ ಜುಲೈ1, 2018ರಿಂದ ಅನ್ವಯವಾಗಲಿದೆ ಎಂದು ಬಿಹಾರ ಸರ್ಕಾರ ತಿಳಿಸಿದೆ. ಹೀಗಾಗಿ ಸರ್ಕಾರಿ ನೌಕರರಷ್ಟೇ ಅಲ್ಲದೆ, ನಿವೃತ್ತ ನೌಕರರೂ ಸಹ ಈ ಪ್ರಯೋಜನ ಪಡೆಯಲಿದ್ದಾರೆ.