ನವದೆಹಲಿ : ಕೇಂದ್ರ ಸರ್ಕಾರ ನೌಕರರಿಗೆ ಸಂತಸಗೊಳಿಸಿದ ನಂತರ, ಈಗ PSU ಅಂದರೆ ಸಾರ್ವಜನಿಕ ವಲಯದ ಘಟಕಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕುಗಳ 8 ಲಕ್ಷ ಉದ್ಯೋಗಿಗಳ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ. ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಉದ್ಯೋಗಿಗಳ ಭತ್ಯೆಯನ್ನು ಶೇ 2.10 ರಷ್ಟು ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

PSU ಬ್ಯಾಂಕ್ ಉದ್ಯೋಗಿಗಳ DA ಹೆಚ್ಚಳ 


PSU ಉದ್ಯೋಗಿಗಳ DA ಅನ್ನು ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ 2021 ರಿಂದ ಹೆಚ್ಚಿಸಲಾಗಿದೆ. ಅಂದರೆ, ಹೆಚ್ಚಳವು ಕೇವಲ ಮೂರು ತಿಂಗಳುಗಳಿಗೆ ಮಾತ್ರ ಸೀಮಿತವಾಗಿದೆ. ಎಐಎಸಿಪಿಐ (All India Average Consumer Price Index) ದತ್ತಾಂಶದ ಆಧಾರದಲ್ಲಿ ಇದನ್ನು ಸರಿಪಡಿಸಲಾಗಿದೆ. ಲೆಕ್ಕಾಚಾರ ಹೀಗಿದೆ - ಡಿಯರ್ನೆಸ್ ಅಲೋವೆನ್ಸ್ ಪರ್ಸೆಂಟೇಜ್ = (ಕಳೆದ 3 ತಿಂಗಳ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿ (ಬೇಸ್ ವರ್ಷ 2001 = 100) -126.33) x100 


ಇದನ್ನೂ ಓದಿ : ಶಾಲೆಯ ಫೀಸ್ ಮೇಲೆ 15% ದಷ್ಟು ಕಡಿತ, ಖಾಸಗಿ ಶಾಲೆಗಳಿಗೆ ಸರ್ಕಾರ ನಿರ್ದೇಶನ


ಆಗಸ್ಟ್ ತಿಂಗಳ ಸಂಬಳದಲ್ಲಿ DA ಕೈಗೆ ಸಿಗುತ್ತದೆ 


ಭಾರತೀಯ ಬ್ಯಾಂಕುಗಳ ಸಂಘದ (IBA) ಆದೇಶದ ಪ್ರಕಾರ, ಮೇ, ಜೂನ್ ಮತ್ತು ಜುಲೈ 2021 ರ DA ಅಂಕಿ 367 ಸ್ಲಾಬ್‌ಗಳು ಆಗಿದೆ. ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ 30 ಸ್ಲಾಬ್‌ಗಳ ಹೆಚ್ಚಳವಾಗಿದೆ. ಈ ಆಧಾರದ ಮೇಲೆ, ಈಗ PSU ಉದ್ಯೋಗಿಗಳ ಡಿಎ ಶೇ.2.10 ಏರಿಕೆ ಮಾಡಿದೆ. ಇದು ಒಟ್ಟು ಶೇ. 27.79 ರಷ್ಟಾಗಿದೆ. ಇದು ಮೊದಲು ಶೇ.25.69 ರಷ್ಟಿತ್ತು. ಈ ಹೆಚ್ಚಿದ DA ಆಗಸ್ಟ್ ತಿಂಗಳ ಸಂಬಳದಲ್ಲಿ ಸಿಗಲಿದೆ.


ವರ್ಗವಾರು ಲಾಭಗಳು


ಪ್ರತಿ ವರ್ಗದ ಸಂಬಳಕ್ಕೆ ಅನುಗುಣವಾಗಿ ಮುಂಗಡ ಭತ್ಯೆಯ ಹೆಚ್ಚಳದ ಪ್ರಯೋಜನವು ಲಭ್ಯವಿರುತ್ತದೆ. ಉದಾಹರಣೆಗೆ, ಬ್ಯಾಂಕ್ PO (Probationary Officer) ನ ವೇತನ ತಿಂಗಳಿಗೆ 40 ರಿಂದ 42 ಸಾವಿರ ರೂ. ಇದರಲ್ಲಿ ಬೇಸಿಕ್ 27,620 ರೂ. ಅದರ ಮೇಲೆ ಡಿಎ ಶೇ 2.10 ರಷ್ಟು ಹೆಚ್ಚಾಗಿದೆ. PO ಸೇವಾ ನಿಯಮಗಳ ಪ್ರಕಾರ, ಸಂಪೂರ್ಣ ಸೇವೆಯ ಸಮಯದಲ್ಲಿ ಉದ್ಯೋಗಿಗಳಿಗೆ 4 ಸಂಬಳ ಹೆಚ್ಚಿಸಲಾಗುತ್ತದೆ. ಬಡ್ತಿಯ ನಂತರ ಗರಿಷ್ಠ ಮೂಲ ವೇತನ 42020 ರೂ. ಆಗುತ್ತದೆ.


ಇದನ್ನೂ ಓದಿ : LPG Subsidy: ನಿಮಗೆ ಎಲ್‌ಪಿಜಿ ಮೇಲೆ ಸಬ್ಸಿಡಿ ಸಿಗುತ್ತಿದೆಯೇ ? ಹೀಗೆ ಚೆಕ್ ಮಾಡಿ


ಜುಲೈ 1 ರಿಂದ ಕೇಂದ್ರೀಯ ನೌಕರರ ಬಾಕಿ ಭತ್ಯೆಯ ಹೆಚ್ಚಳ(DA Hike) ಜಾರಿಗೆ ಬಂದಿದೆ. ಈಗ ಅವರು 17% ರ ಬದಲು 28% ರಷ್ಟು ಭತ್ಯೆಯನ್ನು ಪಡೆಯುತ್ತಿದ್ದಾರೆ. 1 ಕೋಟಿಗೂ ಹೆಚ್ಚು ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಈಗ ಜೂನ್ 2021 ಕ್ಕೆ 3% ರಷ್ಟು ಭತ್ಯೆಯನ್ನು ಕಾಯುತ್ತಿದ್ದಾರೆ, ಇದು 3% ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ, ಅವರ ಡಿಯರ್ನೆಸ್ ಭತ್ಯೆಯು ಶೇ 28 ರಿಂದ 31 ಕ್ಕೆ ಹೆಚ್ಚಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ