Latest News On 7th Pay Commission: ಹೊಸ ವರ್ಷಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ನೌಕರರಿಗೆ ಉಡುಗೊರೆ ಸಿಕ್ಕಿದೆ. ಕೇಂದ್ರ ಸರ್ಕಾರದ (Central Government) ನಂತರ ಇದೀಗ ರಾಜ್ಯ ಸರ್ಕಾರಗಳು ಕೂಡ ತಮ್ಮ ನೌಕರರ ವೇತನವನ್ನು ಪರಿಷ್ಕರಿಸುತ್ತೀವೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಹಿಮಾಚಲ ಪ್ರದೇಶ ಸರ್ಕಾರ ತನ್ನ ಉದ್ಯೋಗಿಗಳಿಗೆ ಆರನೇ ವೇತನ ಆಯೋಗದ ಅಡಿಯಲ್ಲಿ ಹೊಸ ವೇತನ ಶ್ರೇಣಿಯನ್ನು ಪ್ರಕಟಿಸಿದೆ. ಸರ್ಕಾರದ ಅಧಿಕೃತ ವಕ್ತಾರರು ಈ ಮಾಹಿತಿ ನೀಡಿದ್ದಾರೆ. ಇನ್ನುಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರನ್ನು ಎರಡು ವರ್ಷಗಳಲ್ಲಿ ಖಾಯಂಗೊಳಿಸಲಾಗುವುದು ಎಂದೂ ಕೂಡ ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ರಾಜ್ಯ ಸರ್ಕಾರದ ಘೋಷಣೆ
ಇದುವರೆಗೆ ಗುತ್ತಿಗೆ ನೌಕರರನ್ನು 3 ವರ್ಷಗಳಲ್ಲಿ ಖಾಯಂಗೊಳಿಸಲಾಗುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.  ಶನಿವಾರ, ಹಿಮಾಚಲ ಪ್ರದೇಶ ನಾನ್-ಗೆಜೆಟೆಡ್ ಎಂಪ್ಲಾಯಿಸ್ ಫೆಡರೇಶನ್‌ನ ಜಂಟಿ ಸಮನ್ವಯ ಸಮಿತಿ (JCC) ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಜೈ ರಾಮ್ ಠಾಕೂರ್, ರಾಜ್ಯ ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿಗಳನ್ನು ಘೋಷಿಸಿದ್ದಾರೆ. ಇದು 1 ಜನವರಿ 2016 ರಿಂದ ಅನ್ವಯವಾಗಲಿದೆ.  ದೊರೆತೆ ಮಾಹಿತಿಯ ಪ್ರಕಾರ, ಪರಿಷ್ಕೃತ ವೇತನ ಶ್ರೇಣಿಯ ಪ್ರಕಾರ ಜನವರಿ, 2022 ರ ವೇತನವನ್ನು ಫೆಬ್ರವರಿ, 2022 ರಲ್ಲಿ ನೀಡಲಾಗುವುದು.


ಪರಿಷ್ಕೃತ ಪಿಂಚಣಿಯ ಪ್ರಯೋಜ ಯಾವಾಗ ಸಿಗಲಿದೆ?
ಈ ಕುರಿತು ಮಾತನಾಡಿರುವ ಜೈ ರಾಮ್ ಠಾಕೂರ್, 'ರಾಜ್ಯ ಸರ್ಕಾರವು ತನ್ನ ಒಟ್ಟು ಬಜೆಟ್‌ನ ಸುಮಾರು ಶೇ.43ರಷ್ಟನ್ನು  ನೌಕರರು ಮತ್ತು ಪಿಂಚಣಿದಾರರಿಗೆ ವೆಚ್ಚ ಮಾಡುತ್ತಿದೆ. ಆರನೇ ವೇತನ ಆಯೋಗ ಜಾರಿಯಾದ ನಂತರ ಇದು ಶೇ.50ಕ್ಕೆ ಏರಿಕೆಯಾಗಲಿದೆ. ಎಲ್ಲಾ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೂ ಜನವರಿ 1, 2016 ರಿಂದ ಪರಿಷ್ಕೃತ ಪಿಂಚಣಿ ಮತ್ತು ಪಿಂಚಣಿಗಳ ಪ್ರಯೋಜನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. 


ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಹೊಸ ವರ್ಷದ Bonanza? DA, HRA ಹೆಚ್ಚಳದ ಬಗ್ಗೆ ಬಿಗ್ ನ್ಯೂಸ್


ಕೇಂದ್ರ ಸರ್ಕಾರವೂ ಸಿದ್ಧತೆ ನಡೆಸಿದೆ
ಇನ್ನೊಂದೆಡೆ ಕೇಂದ್ರ ಸರ್ಕಾರ (Modi Government) ಕೂಡ ತನ್ನ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಹೊಸ ವರ್ಷದ ಆರಂಭದಲ್ಲಿ, ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ (HRA) ಹೆಚ್ಚಿಸುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಕೇಂದ್ರ ನೌಕರರ ವೇತನವೂ ಹೆಚ್ಚಾಗಲಿದೆ. ಉದ್ಯೋಗಿಗಳ ಮಾನವ ಸಂಪನ್ಮೂಲವನ್ನು ಹೆಚ್ಚಿಸುವ ಬೇಡಿಕೆಯನ್ನು ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ (IRTS) ಮತ್ತು ರಾಷ್ಟ್ರೀಯ ರೈಲ್ವೇಮೆನ್ ಫೆಡರೇಶನ್ (NFIR) ಸಹ ಪರಿಗಣಿಸುತ್ತಿದೆ.


ಇದನ್ನೂ ಓದಿ-7th Pay Commission : ಹೊಸ ವರ್ಷಕ್ಕೆ ಏರಿಕೆಯಾಗಲಿದೆ ಕೇಂದ್ರ ನೌಕರರ ಸಂಬಳ : ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ ನೋಡಿ


ಎಚ್ ಆರ್ ಎ ಕೂಡ ಹೆಚ್ಚಾಗಲಿದೆ
X, Y ಮತ್ತು Z ವರ್ಗದ ನಗರಗಳ ಆಧಾರದ ಮೇಲೆ ಮನೆ ಬಾಡಿಗೆ ಭತ್ಯೆಯ (HRA) ವರ್ಗಗಳನ್ನು ವಿಂಗಡಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಅಂದರೆ, X ವರ್ಗದಲ್ಲಿ ಬರುವ ಉದ್ಯೋಗಿಗಳು ಈಗ ತಿಂಗಳಿಗೆ 5400 ರೂ.ಗಿಂತ ಹೆಚ್ಚು ಎಚ್‌ಆರ್‌ಎ ಪಡೆಯುತ್ತಾರೆ. ಇದರ ನಂತರ, Y ವರ್ಗದ ವ್ಯಕ್ತಿಗೆ ತಿಂಗಳಿಗೆ 3600 ರೂ. ಮತ್ತು ನಂತರ Z ವರ್ಗದ ನೌಕರರು ತಿಂಗಳಿಗೆ 1800 ರೂ. ಮನೆ ಬಾಡಿಗೆ ಭತ್ಯೆ ಪಡೆಯಲಿದ್ದಾರೆ. 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು X ವರ್ಗದಲ್ಲಿ ಬರುತ್ತವೆ. ಈ ನಗರಗಳಲ್ಲಿನ ಕೇಂದ್ರ ಉದ್ಯೋಗಿಗಳಿಗೆ 27% HRA ಸಿಗುತ್ತದೆ. ಇದು Y ವರ್ಗದ ನಗರಗಳಲ್ಲಿ ಶೇ.18 ಮತ್ತು Z ವರ್ಗದಲ್ಲಿ ಶೇ.9 ರಷ್ಟು ಇರುತ್ತದೆ.


ಇದನ್ನೂ ಓದಿ-7th Pay Commission: ತುಟ್ಟಿ ಭತ್ಯೆ ಲೆಕ್ಕಾಚಾರದಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.