ಥಾಣೆ: ಕಟ್ಟಡ ಕುಸಿದು ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಮಹಾರಾಷ್ಟ್ರದ (Maharashtra) ಥಾಣೆ ಪ್ರದೇಶದಲ್ಲಿ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದ ಥಾಣೆಯ ಭಿವಾಂಡಿ ಪ್ರದೇಶದಲ್ಲಿ ಇಂದು ಮುಂಜಾನೆ ಮೂರು ಅಂತಸ್ತಿನ ಕಟ್ಟಡ ಕುಸಿದು (Building Collapse) ಬಿದ್ದು ಎಂಟು ಮಂದಿ‌ ಸಾವನ್ನಪ್ಪಿದ್ದಾರಲ್ಲದೆ. ಐವರು ತೀವ್ರ ಸ್ವರೂಪದಲ್ಲಿ ಗಾಯಗೊಂಡು ಸಾವು ಬದುಕಿನ‌ ನಡುವೆ ಹೋರಾಟ ನಡೆಸುತ್ತಿದ್ದಾರೆ.‌ ಇದಲ್ಲದೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.


NDRF) ಆಗಮಿಸಿದ್ದು ಕಟ್ಟಡದ ಕೆಳಗಡೆ‌‌ ಮಣ್ಣಲ್ಲಿ ಹುದುಗಿದ್ದವನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ.‌ 


ಮಹಾರಾಷ್ಟ್ರದಲ್ಲಿ ಕೊರೊನಾ ಗೆದ್ದ 106 ರ ವಯೋವೃದ್ಧ ಮಹಿಳೆ


ರಾಷ್ಟ್ರೀಯ ವಿಪತ್ತು ಪರಿಹಾರ ತಂಡ (NDRF) ಕಟ್ಟಡದ ಕೆಳಗಡೆ‌‌ ಮಣ್ಣಲ್ಲಿ ಹುದುಗಿದ್ದವನ್ನು ರಕ್ಷಿಸುವ ಕೆಲಸ  ಮಾಡುತ್ತಿದ್ದರೆ ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ.


ರಾಯಗಡ್: 5 ಅಂತಸ್ತಿನ ಕಟ್ಟಡ ಕುಸಿದು ಓರ್ವ ಸಾವು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ


ಮೊದಲ ವರ್ತಮಾನದ ಪ್ರಕಾರ ಘಟನೆಯಲ್ಲಿ ಐದು ಜನ ಮಾತ್ರ ಸಾವನ್ನಪ್ಪಿದರು. ಅದೀಗ ಎಂಟಕ್ಕೆ ಏರಿದೆ. ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಕಟ್ಟಡ ಕುಸಿದು ಬೀಳಲು ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲ.