ನವದೆಹಲಿ: ಛತ್ತೀಸ್ ಗಡ್ ಸುಕ್ಮಾ ಜಿಲ್ಲೆಯ ಸಕ್ಲರ್ ಗ್ರಾಮದಲ್ಲಿ ಸಿಆರ್ಪಿಎಫ್ ಪಡೆ ಸೋಮವಾರದಂದು ನಡೆದ ಎನ್ಕೌಂಟರ್ನಲ್ಲಿ ಎಂಟು ನಕ್ಸಲರನ್ನು ಗುಂಡಿಕ್ಕಿದ್ದಾರೆ. ಈಎನ್ಕೌಂಟರ್ನಲ್ಲಿ ಕನಿಷ್ಟ ಎರಡು ಡಿಆರ್ಜಿ ಸೈನಿಕರು ಕೂಡ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ


COMMERCIAL BREAK
SCROLL TO CONTINUE READING

ಎನ್ಕೌಂಟರ್ನಲ್ಲಿ ಒಬ್ಬ ನಕ್ಸಲನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಅವರಿಂದ ಎರಡು "ಭರ್ಮರ್" ಗನ್ ಗಳನ್ನು ಕೂಡಾ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಕ್ಮಾ ಎಸ್ಪಿ ಅಭಿಷೇಕ್ ಮೀನಾ ಅವರ ಪ್ರಕಾರ ಮೃತ ಯೋಧರ ದೇಹಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗಿದೆ. ಇನ್ನು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.ಎಲ್ಲಾ ಮಾವೋವಾದಿಗಳು ಭಾರತದ ಕಮ್ಯುನಿಸ್ಟ್ ಪಕ್ಷ(ಮಾವೋವಾದಿ)ಯ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಗೆ ಸೇರಿದವರು ಎಂದು ಎನ್ನಲಾಗಿದೆ.


ಭಾನುವಾರದಂದು ಬಿಜಾಪುರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಇಬ್ಬರು ನಕ್ಸಲ್ ರನ್ನು ಹತ್ಯೆ ಮಾಡಲಾಗಿತ್ತು, ಈ ವೇಳೆ ಪೋಲಿಸ್ ನೋಬ್ಬನು ಸಹಿತ ಗಾಯಗೊಂಡಿದ್ದನು.ಭದ್ರತಾ ಪಡೆಗಳು ಗಂಗಲೂರು ಮತ್ತು ಮದ್ದೆದ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು.