ದಿಫು : ಪಶ್ಚಿಮ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಅಸ್ಸಾಂ-ನಾಗಾಲ್ಯಾಂಡ್ ಗಡಿ  (Assam Nagaland) ಬಳಿ ಭದ್ರತಾ ಪಡೆಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ಡಿಮಾಸಾ ರಾಷ್ಟ್ರೀಯ ವಿಮೋಚನಾ ಸೇನೆಯ (DNLA)  ಎಂಟು ಉಗ್ರರು ಭಾನುವಾರ ಹತರಾಗಿದ್ದಾರೆ. ಮೊದಲು ಎನ್‌ಕೌಂಟರ್‌ನಲ್ಲಿ (Encounter) 6 ಉಗ್ರರ ಸಾವನ್ನಪ್ಪಿರುವುದಾಗಿ ಹೇಳಲಾಗಿತ್ತು. ಆದರೆ, ನಂತರ ಇಬ್ಬರು ಉಗ್ರರ (Terrorist) ಮೃತದೇಹಗಳು ಪತ್ತೆಯಾಗಿದ್ದು, ಇದೀಗ ಸಾವನ್ನಪ್ಪಿದ ಉಗ್ರರ ಸಂಖ್ಯೆ ಎಂಟಾಗಿದೆ. 


COMMERCIAL BREAK
SCROLL TO CONTINUE READING

ಎಕೆ -47 ಮತ್ತು ಮದ್ದುಗುಂಡುಗಳು : 
ಗುಪ್ತಚರ ವರದಿಯ ಆಧಾರದ ಮೇಲೆ ಪಶ್ಚಿಮ ಕಾರ್ಬಿ ಆಂಗ್ಲಾಂಗ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೊವಾಲ್ (Prakah Sonowal) ನೇತೃತ್ವದ ಪೊಲೀಸ್ ಅಧಿಕಾರಿಗಳು ಮತ್ತು ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆ ಮತ್ತು ಉಗ್ರರ  (Terrorist) ನಡುವೆ ನಡೆದ ಕಾಳಗದಲ್ಲಿ 8 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ.   ಮಿಚಿಬೈಲುಂಗ್ ಪ್ರದೇಶದಲ್ಲಿ  ನಡೆದ ಮುಖಾಮುಖಿಯಲ್ಲಿ ಉಗ್ರರು ಹತರಾಗಿದ್ದಾರೆ. ಈ ಬಗ್ಗೆ ಅಸ್ಸಾಂ (Assam) ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. 


ಇದನ್ನೂ ಓದಿ : Lockdown Extended : ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್‌ಡೌನ್‌ ವಿಸ್ತರಣೆ..!


ಮುಂದುವರೆದಿರುವ ಶೋಧ ಕಾರ್ಯ : 
ಹತ್ಯೆಗೀಡಾದ ಉಗ್ರರಿಂದ 4  AK -47 ರೈಫಲ್‌ಗಳು,  ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರಂಭದಲ್ಲಿ, 6 ಉಗ್ರರ ಮೃತದೇಹಗಳು (Dead body)  ಪತ್ತೆಯಾಗಿತ್ತು. ನಂತರ ಮತ್ತೆ ಸ್ವಲ್ಪ ದೂರದಲ್ಲಿ ಇಬ್ಬರು ಉಗ್ರರ ಮೃತದೇಹಗಳು ಪತ್ತೆಯಾದವು. ಇನ್ನೂ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆದಿದೆ. 


ಕಳೆದ ವಾರ ದೌಜಿಫಾಂಗ್ ಪ್ರದೇಶದಲ್ಲಿ ಅರ್ಚಕರನ್ನು ಕೊಂದ ನಂತರ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. 


ಇದನ್ನೂ ಓದಿ : Vaccination Fear In Village: ವ್ಯಾಕ್ಸಿನ್ ಭಯದಿಂದ ನದಿಗೆ ಹಾರಿದ ಗ್ರಾಮೀಣ ಜನ, ಲಸಿಕೆ ಹಾಕಿಸಿಕೊಂಡಿದ್ದು ಕೇವಲ 14 ಜನ ಮಾತ್ರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.