ನವದೆಹಲಿ: ಬಿರುಗಾಳಿ ಸಹಿತ ಭಾರಿ ಮಳೆಯ ಸಂದರ್ಭದಲ್ಲಿ ಉಂಟಾದ ಗುಡುಗು ಸಿಡಿಲಿನಿಂದಾಗಿ ಸುಮಾರು 80 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಅಲ್ಲದೆ 136 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.


COMMERCIAL BREAK
SCROLL TO CONTINUE READING

ಗೃಹ ಸಚಿವಾಲಯವು ಪ್ರಕಟಿಸಿದ ವರದಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ 51, ಆಂಧ್ರಪ್ರದೇಶದಲ್ಲಿ 12, ಪಶ್ಚಿಮ ಬಂಗಾಳದಲ್ಲಿ 14, ನವದೆಹಲಿಯಲ್ಲಿ ಎರಡು ಮತ್ತು ಉತ್ತರಖಂಡದಲ್ಲಿ ಓರ್ವ. ಒಟ್ಟು 80 ಜನರು ಮೃತಪಟ್ಟಿದ್ದಾರೆ.


ಗಾಯಗೊಂಡ 136 ಜನರಲ್ಲಿ  ಉತ್ತರ ಪ್ರದೇಶದಲ್ಲಿ  123, ದೆಹಲಿಯಲ್ಲಿ 11 ಮತ್ತು ಉತ್ತರಖಂಡದಲ್ಲಿ 123 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಮೇ 13 ಮತ್ತು ಮೇ 14 ರ ಮಧ್ಯೆ ರಾತ್ರಿ ಭಾರಿ ಬಿರುಗಾಳಿ ಸಹಿತ ಮಳೆಗೆ ಉಂಟಾದ  ಅಂಕಿ ಅಂಶ ಎಂದು ಗೃಹ ಸಚಿವಾಲಯ ತಿಳಿಸಿದೆ.