ಪೂಂಚ್: ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ ಪಾಕಿಸ್ತಾನವು ಭಾರತದ ವಿರುದ್ಧ ನಿರಂತರವಾಗಿ ಭಯೋತ್ಪಾದಕ ಪಿತೂರಿಯಲ್ಲಿ ತೊಡಗಿದೆ. ಒಂದೆಡೆ, ಪಾಕಿಸ್ತಾನದ ಭಯೋತ್ಪಾದಕರು ನಿರಂತರವಾಗಿ ಒಳನುಸುಳಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ, ಪಾಕಿಸ್ತಾನ ಸೇನಾ ನಿಯಂತ್ರಣ ರೇಖೆಯ (ಎಲ್‌ಒಸಿ) ಪಕ್ಕದ ಪ್ರದೇಶಗಳಲ್ಲಿ, ನಿರಂತರ ಕದನ ವಿರಾಮ ಉಲ್ಲಂಘನೆ ನಡೆಸುವಲ್ಲಿ ನಿರತವಾಗಿವೆ.


COMMERCIAL BREAK
SCROLL TO CONTINUE READING

ಬಾಲಕೋಟ್ ವಲಯದಲ್ಲಿ, ಪಾಕಿಸ್ತಾನದ ದುಷ್ಕೃತ್ಯಕ್ಕೆ ಜೀವಂತ ಪುರಾವೆ ದೊರೆತಿದೆ. ಪೂಂಚ್ ಜಿಲ್ಲೆಯ ಬಾಲಕೋಟ್ ರೆಸಿಡೆನ್ಶಿಯಲ್ನಲ್ಲಿ ಪಾಕ್ ಉದ್ದೇಶಿತ ಪ್ರದೇಶಗಳು, ಇದರಲ್ಲಿ 120 ಎಂಎಂನ 9 ಮಾರ್ಟರ್‌ ಶೆಲ್‌ಗ‌ಳನ್ನು ಹಾರಿಸಲಾಗಿದೆ.


ಅದೃಷ್ಟವಶಾತ್ ಪಾಕ್‌ ಪಡೆಗಳು ಹಾರಿಸಿದ್ದ ಮಾರ್ಟರ್‌ ಶೆಲ್‌ಗ‌ಳು ಸಿಡಿಯದೇ ಹಾಗೆಯೇ ಬಿದ್ದಿವೆ. ಪಾಕಿಸ್ತಾನ ಬುಧವಾರ (ಸೆಪ್ಟೆಂಬರ್ 19) ದ ಭಾರತದ ಕಡೆಗೆ ಹಾರಿಸಿದ್ದ ಈ 9 ಜೀವಂತ ಮಾರ್ಟರ್‌ ಶೆಲ್‌ಗ‌ಳನ್ನು ಭಾರತೀಯ ಸೇನೆಯು ತಟಸ್ಥಗೊಳಿಸಿತು.


ಕಳೆದ 2 ದಿನಗಳಲ್ಲಿ, ಮೆಂಧರ್‌ನ ಬಾಲಕೋಟ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಸೈನಿಕರು ಭಾರಿ ಗುಂಡಿನ ದಾಳಿ ನಡೆಸಿದ್ದು  ಬಸುನಿ, ಸಿಂಡೋಟ್ ಮತ್ತು ಬಾಲಕೋಟ್‌ನಲ್ಲಿನ ಹೊಲಗಳು ಮತ್ತು ಇತರ ಪ್ರದೇಶಗಳಲ್ಲಿ ಅನೇಕ ಜೀವಂತ ಮಾರ್ಟರ್‌ ಶೆಲ್‌ಗ‌ಳು ಪತ್ತೆಯಾಗಿವೆ.


ಜನರು ತಮ್ಮ ಮನೆಗಳ ಬಳಿ ಜೀವಂತ ಮಾರ್ಟರ್‌ ಶೆಲ್‌ಗ‌ಳು ಪತ್ತೆಯಾಗಿರುವುದರಿಂದ ಭಯಭೀತರಾಗಿದ್ದಾರೆ.  ಈ ಬಗ್ಗೆ ಸೇನಾಧಿಕಾರಿಗಳಿಗೆ ತಿಳಿಸಿದರು. ಗ್ರಾಮದಲ್ಲಿ ದೊರೆತ 9 ಜೀವಂತ ಗುಂಡುಗಳನ್ನು ಸೇನೆಯು ನಿಶ್ಶಕ್ತಗೊಳಿಸಿದೆ.