ನವದೆಹಲಿ: ದೆಹಲಿಯ ಒಂದು ಭಾಗದಲ್ಲಿ 24 ಗಂಟೆಗಳಿಗೂ ಹೆಚ್ಚು ಕಾಲ ಪೌರತ್ವ ತಿದ್ದುಪಡಿ ಕಾನೂನಿನ ಪ್ರತಿಭಟನೆಯ ವಿಚಾರವಾಗಿ ಪರ-ವಿರೋಧದ ಗುಂಪುಗಳ ನಡುವಿನ ಘರ್ಷಣೆಯಿಂದಾಗಿ ಇದರಲ್ಲಿ ಪೊಲೀಸ್ ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈಶಾನ್ಯ ದೆಹಲಿಯ ಭಜನ್‌ಪುರ, ಚಂದ್ ಬಾಗ್ ಮತ್ತು ಕರವಾಲ್ ನಗರಗಳಲ್ಲಿ ಬೀದಿಗಳಲ್ಲಿ ಶಸ್ತ್ರಸಜ್ಜಿತ ಜನರಿಂದ ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ, ಇದು ವಿವಾದಾತ್ಮಕ ಪೌರತ್ವ ಕಾನೂನಿನ ಪರವಾಗಿ ಮತ್ತು ವಿರುದ್ಧವಾಗಿ ಪ್ರತಿಭಟನಾಕಾರರ ನಡುವೆ ಘರ್ಷಣೆ ತಾರಕ್ಕೆರಿದ್ದರಿಂದಾಗಿ ಹಿಂಸಾಚಾರ ಅಧಿಕಗೊಂಡಿದೆ.ಇದೇ ವೇಳೆ ಕೇಂದ್ರ ಗೃಹ ಸಚಿವಾಲಯವು ಹಿಂಸಾಚಾರವನ್ನು ತಡೆಗಟ್ಟಲು ಸೈನ್ಯವನ್ನು ಕರೆಯುವುದನ್ನು ತಳ್ಳಿಹಾಕಿದೆ, ಸಾಕಷ್ಟು ಕೇಂದ್ರ ಪಡೆಗಳು ಮತ್ತು ಪೊಲೀಸರು ಹಿಂಸಾಚಾರದ ಸ್ಥಳದಲಲ್ಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.


ಗೃಹ ಸಚಿವ ಅಮಿತ್ ಶಾ ಅವರು ಶಾಂತಿಗಾಗಿ ಮನವಿ ಮಾಡಿದ್ದಾರೆ ಮತ್ತು ವದಂತಿಗಳನ್ನು ನಿಲ್ಲಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭೇಟಿಯ ನಂತರ ಮೂಲಗಳು ತಿಳಿಸಿವೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜಧಾನಿಗೆ ಬರುವ ಕೆಲವೇ ಗಂಟೆಗಳ ಮೊದಲು ಹಿಂಸಾಚಾರ ಪ್ರಾರಂಭವಾಯಿತು.