ನವ ದೆಹಲಿ: ಕಲಿಕೆ ಮತ್ತು ಶಿಕ್ಷಣ ಎಂದಿಗೂ ನಿರಂತರವಾದುದು. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬ ಹೆನ್ರಿ ಫೋರ್ಡ್ ಅವರ ಮಾತು ಹಲವರಿಗೆ ಸ್ಪೂರ್ತಿಯಾಗಿದೆ. ಈ ಮಾತಿನಿಂದ ಸ್ಫೂರ್ತಿ ಪಡೆದ ವ್ಯಕ್ತಿಯೊಬ್ಬರು ತಮ್ಮ 98ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಅವರೇ ಪಾಟ್ನಾದ 98 ವರ್ಷ ಪ್ರಾಯದ ರಾಜ್‌ ಕುಮಾರ್‌ ವೈಶ್‌. ಇವರು ಇತ್ತೀಚಿಗೆ ನಡೆದ ನಳಂದ ಮುಕ್ತ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಅತ್ಯಪರೂಪದ ಸಾಧನೆಯನ್ನು ಮಾಡಿದ್ದಾರೆ. 


1938ರಲ್ಲಿ ಆಗ್ರಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಇವರು, ದಶಕಗಳ ನಂತರ 2015 ರಲ್ಲಿ ನಲನದ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂಎ ಅರ್ಥಶಾಸ್ತ್ರ ಪದವಿ ಕೋರ್ಸ್ಗೆ ದಾಖಲಾಗಿದ್ದಾರು. ಇದೀಗ ಈ ವರ್ಷ ಸೆಪ್ಟೆಂಬರ್ನಲ್ಲಿ ತನ್ನ ಕೋರ್ಸ್ ಪೂರ್ಣಗೊಳಿಸಿ ಎನ್ಐಒ ನ 12 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮೇಘಾಲಯ ಗವರ್ನರ್ ಗಂಗಾ ಪ್ರಸಾದ್ ಅವರು ವೈಶ್ ಅವರಿಗೆ  ಸ್ನಾತಕೋತ್ತರ ಪದವಿ ನೀಡಿ ಗೌರವಿಸಿದರು.


ಈ ಹಿಂದೆ 1940 ರಲ್ಲಿ ವೈಶ್ ಅವರು ಎಲ್ ಎಲ್ ಬಿ ಪದವಿಯನ್ನು ಪಡೆದಿದ್ದರೂ ಸಹ ಕೊಡರ್ಮದ  ಕ್ರಿಶ್ಚಿಯನ್ ಮೈಕಾ ಇಂಡಸ್ಟ್ರಿಯಲ್ಲಿ ಕಾನೂನು ಅಧಿಕಾರಿಯಾಗಿ ಉದ್ಯೋಗ ದೊರೆತ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಸಾಧ್ಯವಾಗಿರಲಿಲ್ಲ. 


"ಇಂದು ನನಗೆ ತುಂಬಾ ಖುಷಿಯಾಗಿದೆ. ನಾನು ಇದಕ್ಕಾಗಿ ತುಂಬಾ ಶ್ರಮಪಟ್ಟಿದ್ದೆ. ಸ್ನಾತಕೋತ್ತರ ಪದವಿ ಪಡೆಯುವ ನನ್ನ ಆಸೆ ಇಂದು ಈಡೇರಿದೆ. ಯುವಕರು ಕೇವಲ ಉದ್ಯೋಗ ಪಡೆಯುವಲ್ಲಿ ಕೇಂದ್ರೀಕರಿಸದೆ ಶಿಕ್ಷಣದಲ್ಲಿ ಮನಸ್ಸನ್ನು ಇಡಬೇಕು' ಎಂದು ವೈಶ್‌ ಈ ಸಂದರ್ಭದಲ್ಲಿ ನುಡಿದರು.