ಮಣ್ಣು ತಿನ್ನದೇ ಬದುಕಿರಲಾರ ಈ 99 ರ ವಯೋವೃದ್ದ!
ನವದೆಹಲಿ: ಜಾರ್ಖಂಡ್ ನ ಸಾಹೇಬಗಂಜ್ ಜಿಲ್ಲೆಯ ನಿವಾಸಿಯಾಗಿರುವ ಕಾರು ಪಾಸ್ವಾನ್ ಪ್ರತಿದಿನ ಒಂದು ಕಿಲೋ ಮಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದಾನೆ.
1919ರಲ್ಲಿ ಜನಿಸಿರುವ ಕಾರು ಪಾಸ್ವಾನ್ ತಾನು ಹನ್ನೊಂದು ವರ್ಷದವನಾಗಿದ್ದಾಗ ಮಣ್ಣನ್ನು ತಿನ್ನುವ ರೂಡಿಯನ್ನು ಬೆಳೆಸಿಕೊಂಡಿದ್ದಾನೆ ಎಂದ ಹೇಳಿಕೊಂಡಿರುವ ಅವನು ತನ್ನ ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟು ಈ ರೀತಿ ಅಭ್ಯಾಸಕ್ಕೆ ಅಂಟಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಎಎನ್ಐಗೆ ಪ್ರತಿಕಯಿಸಿರುವ ಅವನು "ನನ್ನ 10 ಮಕ್ಕಳನ್ನು ಸಾಕಬೇಕಾದ ಅನಿವಾರ್ಯತೆಯಿಂದಾಗಿ ನನಗೆ ಸಾಯುವ ಹಾಗೆ ಆಗಿತ್ತು ಆದ್ದರಿಂದಾಗಿ ನಾನು ಈ ಮಣ್ಣನು ತಿನ್ನುವ ಅಭ್ಯಾಸವನ್ನು ರೂಡಿಮಾಡಿಕೊಂಡೆ ಎಂದರಲ್ಲದೆ ಈ ಇದನ್ನು ಬಿಡಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಕಾರು ಪಾಸ್ವಾನ್ ನ ಹಿರಿಯ ಮಗ ರಾಮ ಪಾಸ್ವಾನ್ ಹೇಳುವಂತೆ ಹಲವು ಸಾರಿ ನಮ್ಮ ತಂದೆಯವರಿಗೆ ಇದನ್ನು ಬಿಡಿಸಲು ಪ್ರಯತ್ನಪಟ್ಟರೂ ಸಹಿತ ಅವರು ನಮ್ಮನ್ನು ಕೇಳುತ್ತಿಲ್ಲ,ಅಲ್ಲಿ ಇಲ್ಲಿ ಸಿಗುವ ಮಣ್ಣಿನ ಹೆಂಟೆಯನ್ನು ತಿಂದು ಆರೋಗ್ಯವಾಗಿದ್ದಾರೆ ಎಂದರು. ಆಶ್ಚರ್ಯವೆಂದರೆ ಈ ರೀತಿಯ ಅಭ್ಯಾಸಕ್ಕೆ ಸಾಬೌರ್ ಕೃಷಿ ವಿದ್ಯಾಲಯ 2015 ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.