ನವದೆಹಲಿ: ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯನ್ನು ಅಪ್ರಾಪ್ತ ವಯಸ್ಕ ಸೇರಿದಂತೆ ಐವರು ಅತ್ಯಾಚಾರ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಸಂತ್ರಸ್ತೆಯ ತಂದೆ ಭಾನುವಾರ ರಾತ್ರಿ ನಾಗೌರ್‌ನ ಜಯಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ನಂತರ ಪೊಲೀಸರು 20 ವರ್ಷದ ವ್ಯಕ್ತಿ ಜೊತೆಗೆ ಅಪ್ರಾಪ್ತ ಹುಡುಗನನ್ನು ಸೋಮವಾರ ಬಂಧಿಸಿದ್ದಾರೆ.


ಇದನ್ನೂ ಓದಿ:"ಸಿಂಗಾಪುರ ಕೊರೊನಾ ತಳಿ ವಿಚಾರದಲ್ಲಿ ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತದೆ"


'ಹುಡುಗಿಯನ್ನು ಆಕೆಯ ನೆರೆಹೊರೆಯ ಹರಿಪ್ರಸಾದ್ ತನ್ನ ಮನೆಗೆ ಗುರುವಾರ ಕೆಲವು ಕೆಲಸಗಳಿಗಾಗಿ ಕರೆಸಿಕೊಂಡರು, ಅಲ್ಲಿ ಇತರ ನಾಲ್ವರು ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದರು ಮತ್ತು ಯಾರಿಗಾದರೂ ಈ ಘಟನೆಯನ್ನು ಬಹಿರಂಗಪಡಿಸಲು ಯತ್ನಿಸಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಎಂದು ಸರ್ಕಲ್ ಅಧಿಕಾರಿ ರಾಮೇಶ್ವರ ಲಾಲ್ ಹೇಳಿದರು.


ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಶಾಲೆಗಳು ತೆರೆಯಲಿವೆಯೇ? ಮನೀಶ್ ಸಿಸೋಡಿಯಾ ಮಹತ್ವದ ಘೋಷಣೆ


ಘಟನೆಯ ನಂತರ ಸಂತ್ರಸ್ತೆ ತೀವ್ರ ಖಿನ್ನತೆಗೆ ಒಳಗಾದಾಗ ಆಕೆಯ ವರ್ತನೆಯ ಬದಲಾವಣೆಗಳನ್ನು ಗಮನಿಸಿದ ಆಕೆಯ ಕುಟುಂಬದ ಸದಸ್ಯರು ಕಾರಣ ಕೇಳಿದರು.ನಂತರ ಆ ಹುಡುಗಿ ಎಲ್ಲ ಘಟನೆಯನ್ನು ಅವರಿಗೆ ತಿಳಿಸಿದ್ದಾಳೆ, ಇದಾದ ನಂತರ ಆಕೆಯ ತಂದೆ ಪೋಲೀಸರ ಬಳಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.


ಈ ಜಹಾಂಗೀರ್ (20) ಮತ್ತು ಅಪ್ರಾಪ್ತ ಆರೋಪಿಯನ್ನು ಇಂದು ಬಂಧಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ತಿಳಿಸಿದ್ದಾರೆ.ಹರಿಪ್ರಸಾದ್, ಸೌರಭ್ ಮತ್ತು ಒಬ್ಬ ಅಪರಿಚಿತ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರನ್ನು ಹುಡುಕಲಾಗುತ್ತಿದೆ ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.