ನವದೆಹಲಿ: ಪಶ್ಚಿಮ ದೆಹಲಿಯ ನಿಹಾಲ್ ವಿಹಾರ್ ನಲ್ಲಿ ಹಿಂಸಾಚಾರದ ಕುರಿತಾಗಿ ಸುಳ್ಳು ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ 24 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಭಿಶೇಕ್ ಶುಕ್ಲಾ ಅವರನ್ನು ನಿಹಾಲ್ ವಿಹಾರ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಮಂದೀಪ್ ಸಿಂಗ್ ರಾಂಧವಾ ತಿಳಿಸಿದ್ದಾರೆ. ನಿಹಾಲ್ ವಿಹಾರದಲ್ಲಿ ಗಲಭೆಗಳ ಬಗ್ಗೆ ವದಂತಿಗಳನ್ನು ಹಬ್ಬಿಸಿದ್ದಕ್ಕಾಗಿ ದೆಹಲಿ ಪೊಲೀಸರ ಸೈಬರ್ ಕ್ರೈಮ್ ಸೆಲ್ ಶುಕ್ಲಾಳನ್ನು ಬಂಧಿಸಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ 10,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ವದಂತಿಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದರು ”ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.


ಶುಕ್ಲಾ ಅವರ ಮೊಬೈಲ್ ಫೋನ್ ನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಆಪಾದಿತ ವ್ಯಕ್ತಿ ಸಾಮಾಜಿಕ ಮಾಧ್ಯಮ ಪೋಸ್ಟ್ ನ್ನು ಅವರ ಪ್ರೊಫೈಲ್‌ನಿಂದ ಅಪ್‌ಲೋಡ್ ಮಾಡಲಾಗಿದೆ ಎನ್ನವುದು ಧೃಡಪಟ್ಟಿದೆ ಎಂದು ಅವರು ಹೇಳಿದರು. ಭಾನುವಾರ ರಾಜಧಾನಿಯ ಕೆಲವು ಭಾಗಗಳಲ್ಲಿ ಆತಂಕಕ್ಕೆ ಕಾರಣವಾಗಿರುವ ವದಂತಿಗಳಿಗೆ ಸಂಬಂಧಿಸಿದಂತೆ 24 ಜನರನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.18 ಜನರ ವಿರುದ್ಧವೂ ಈ ಪೋಲಿಸ್ ಪಡೆ ಕ್ರಮ ಕೈಗೊಂಡಿದೆ ಮತ್ತು ಎರಡು ಪ್ರಕರಣಗಳನ್ನು ದಾಖಲಿಸಿದೆ ಎಂದು ಅದು ಹೇಳಿದೆ.


ವದಂತಿ ಹರಡುವಿಕೆಯಲ್ಲಿ ಭಾಗಿಯಾಗಿರುವ ಇಬ್ಬರು ಶಂಕಿತರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಭಾನುವಾರ ರಾತ್ರಿ ಸುಮಾರು 1880 ಕರೆಗಳು ಗಲಭೆ ಕುರಿತಾಗಿ ಪೊಲೀಸರಿಗೆ ಬಂದಿದ್ದು, ಇವೆಲ್ಲವೂ ಕೂಡ ಸುಳ್ಳು ವದಂತಿಗಳಾಗಿವೆ ಎನ್ನಲಾಗಿದೆ.


ಕಳೆದ ವಾರ ಈಶಾನ್ಯ ಪ್ರದೇಶದಲ್ಲಿ ಕನಿಷ್ಠ ನಾಲ್ಕು ದಿನಗಳ ಮಾರಣಾಂತಿಕ ಹಿಂಸಾಚಾರಕ್ಕೆ ದೆಹಲಿ ಸಾಕ್ಷಿಯಾದ ನಂತರ ಕೆಲವು ಪ್ರದೇಶಗಳಲ್ಲಿ ಭೀತಿ ಹರಡಿತು. ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.