ನವದೆಹಲಿ: ಗುರುವಾರದಂದು ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಚಾಯ್ ವಾಲಾ ಜನರಿಗೆ ಉಚಿತವಾಗಿ ಚಹಾ ವಿತರಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಸತತ ಎರಡನೇ ಬಾರಿಗೆ ಸ್ಪಷ್ಟ ಬಹುಮತದಿಂದ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.ಈ ಹಿನ್ನಲೆಯಲ್ಲಿ ಎಎನ್ಐಗೆ ಪ್ರತಿಕ್ರಿಯಿಸಿರುವ ಚಾಯವಾಲಾ ನಂದಲಾಲ್ ಸುನಾರ್ " ಮೋದಿಯವರು ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಿನಿಂದಲೂ ನಾನು ಬಿಜೆಪಿ ಬಗ್ಗೆ ಒಲವನ್ನು ಹೊಂದಿದ್ದೇನೆ. ಇಂದು ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಸಂತಸದಿಂದ ನಾನು ಈಗ ಟಿ ವಿತರಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.ಉಚಿತವಾಗಿ ಚಹಾ ಮಾರುತ್ತಿರುವುದನ್ನು ಮನಗಂಡ ಜನರು ನಂದಲಾಲ್ ಸುನಾರ್ ಟಿ ಅಂಗಡಿಗೆ ಧಾವಿಸಿ ಚಹಾ ಸೇವಿಸುತ್ತಿದ್ದರು.


ಇಂದು ಬಿರ್ಭುಂನಲ್ಲಿ, 31 ಪುರೋಹಿತರು ತರಾಪಿತ್ ದೇವಸ್ಥಾನದಲ್ಲಿ ಯಜ್ಞ ಕಾರ್ಯವನ್ನು ನಡೆಸಿದರು. ಇಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಮಸ್ಟೆಕ್ ರಾಷ್ಟ್ರಗಳ ನಾಯಕರು ಕೂಡ ಭಾಗವಹಿಸಲಿದ್ದಾರೆ. ಈ ಬಿಮಸ್ಟೆಕ್ ಒಕ್ಕೂಟದಲ್ಲಿ ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಮತ್ತು ಥೈಲೆಂಡ್ ಹಾಗೂ ಭಾರತ ಸದಸ್ಯ ರಾಷ್ಟ್ರಗಳಾಗಿವೆ.