ಹರ್ಯಾಣಕ್ಕೆ 60 ಲಕ್ಷ Sputnik V ಡೋಸ್ ವಿತರಿಸಲು ಆಸಕ್ತಿ ತೋರಿದ ಮಾಲ್ಟಾ ಕಂಪನಿ
ಮಾಲ್ಟಾದ ಕಂಪನಿಯೊಂದು ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ (Sputnik V) ಯ 60 ಮಿಲಿಯನ್ ಡೋಸ್‌ಗಳನ್ನು ನೇರವಾಗಿ ಹರಿಯಾಣಕ್ಕೆ ಪೂರೈಸಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ರಾಜ್ಯ ಸರ್ಕಾರ ಇಂದು ತಿಳಿಸಿದೆ.
ನವದೆಹಲಿ: ಮಾಲ್ಟಾದ ಕಂಪನಿಯೊಂದು ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ (Sputnik V) ಯ 60 ಮಿಲಿಯನ್ ಡೋಸ್‌ಗಳನ್ನು ನೇರವಾಗಿ ಹರಿಯಾಣಕ್ಕೆ ಪೂರೈಸಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ರಾಜ್ಯ ಸರ್ಕಾರ ಇಂದು ತಿಳಿಸಿದೆ.
ಇದನ್ನೂ ಓದಿ : Vaccination Fear In Village: ವ್ಯಾಕ್ಸಿನ್ ಭಯದಿಂದ ನದಿಗೆ ಹಾರಿದ ಗ್ರಾಮೀಣ ಜನ, ಲಸಿಕೆ ಹಾಕಿಸಿಕೊಂಡಿದ್ದು ಕೇವಲ 14 ಜನ ಮಾತ್ರ
ಆ ಮೂಲಕ ನೇರ ಲಸಿಕೆ ಸರಬರಾಜಿಗೆ ಸಕಾರಾತ್ಮಕ ಪ್ರತಿಕ್ರಿಯೆ ಪಡೆದ ದೇಶದ ಮೊದಲ ರಾಜ್ಯ ಹರಿಯಾಣವಾಗಿದೆ.ಇತರ ರಾಜ್ಯಗಳಿಗೆ ಲಸಿಕೆ ಸಂಸ್ಥೆಗಳು ಕೇಂದ್ರ ಸರ್ಕಾರದೊಂದಿಗೆ ಮಾತ್ರ ವ್ಯವಹರಿಸುತ್ತವೆ ಎಂದು ತಿಳಿಸಿವೆ.ಯುರೋಪಿಯನ್ ರಾಷ್ಟ್ರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಫಾರ್ಮಾ ರೆಗ್ಯುಲೇಟರಿ ಸರ್ವೀಸಸ್ ಲಿಮಿಟೆಡ್ ಆಸಕ್ತಿಯ ವಹಿಸಿದೆ. ಆದರೆ ಇನ್ನೂ ಒಪ್ಪಂದಕ್ಕೆ ಬಿಡ್ ಮಾಡಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : Lockdown Extended : ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆ..!
ಹರಿಯಾಣ ವೈದ್ಯಕೀಯ ಸೇವೆಗಳ ನಿಗಮವು ಮೇ 26 ರಂದು ಜಾಗತಿಕ ಟೆಂಡರ್ ಅನ್ನು ಬಿಡುಗಡೆ ಮಾಡಿತು, ಫಾರ್ಮಾ ಸಂಸ್ಥೆಗಳಿಗೆ ನೇರವಾಗಿ ಲಸಿಕೆಗಳನ್ನು ಪೂರೈಸಲು ಆಹ್ವಾನಿಸಿತ್ತು. ನಿನ್ನೆ ಟೆಂಡರ್ ಕೊನೆಗೊಂಡಿತ್ತು.ಟೆಂಡರ್ ಮುಗಿದ ನಂತರ ಪ್ರಸ್ತಾಪವು ಬಂದಿದ್ದರೂ ಟೆಂಡರ್ನಲ್ಲಿ ಉಲ್ಲೇಖಿಸಲಾದ ಷರತ್ತುಗಳನ್ನು ಪೂರೈಸುತ್ತದೆಯೇ ಎಂದು ಪರಿಶೀಲಿಸಲು ರಾಜ್ಯ ಸರ್ಕಾರವು ಎಚ್ಚರಿಕೆಯಿಂದ ಸಾಗುತ್ತಿದೆ ಎಂದು ಹರಿಯಾಣ ಆರೋಗ್ಯ ಮುಖ್ಯ ಮುಖ್ಯ ಕಾರ್ಯದರ್ಶಿ ರಾಜೀವ್ ಅರೋರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.