ನವದೆಹಲಿ: ದಿಲ್ಲಿಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನವೊಂದು ಭಾನುವಾರ ಪಾಟ್ನಾದ ಬಿಹ್ತಾ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಅದರ ಎರಡು ಎಂಜಿನ್‌ಗಳಲ್ಲಿ ಒಂದಕ್ಕೆ ಬೆಂಕಿ ಹೊತ್ತಿಕೊಂಡಿದೆ.


COMMERCIAL BREAK
SCROLL TO CONTINUE READING

ಸ್ಥಳೀಯರು ಬೆಂಕಿಯನ್ನು ಗಮನಿಸಿ ಜಿಲ್ಲಾ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ವಿಮಾನವು ವಿಮಾನ ನಿಲ್ದಾಣಕ್ಕೆ ಮರಳಿತು. ಈಗ ಎಲ್ಲಾ 185 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.


ಇದನ್ನೂ ಓದಿ: ಸಿನಿಮಾರಂಗದ ಕಹಿ ಸತ್ಯ ಬಿಚ್ಚಿಟ್ಟ ಸ್ಯಾಂಡಲ್‌ವುಡ್‌ ತಾರೆ ರಮ್ಯಾ!!


ಸ್ಪೈಸ್‌ಜೆಟ್ ಪ್ರಕಾರ, ಕಾಕ್‌ಪಿಟ್ ಸಿಬ್ಬಂದಿ ಟೇಕಾಫ್ ಆಗುವಾಗ ಎಂಜಿನ್ ನಂಬರ್ ಒಂದಕ್ಕೆ ಹಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ. ನಂತರ ಪೈಲಟ್‌ಗಳುಎಂಜಿನ್ ಅನ್ನು ಸ್ಥಗಿತಗೊಳಿಸಿ ಪಾಟ್ನಾಗೆ ಮರಳಿದ್ದಾರೆ.ಹಕ್ಕಿಯ ಹೊಡೆತದಿಂದಾಗಿ ಫ್ಯಾನ್‌ನ ಮೂರು ಬ್ಲೇಡ್‌ಗಳು ಹಾನಿಗೊಳಗಾಗಿವೆ.ಈ ಘಟನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸ್ಪೈಸ್‌ಜೆಟ್‌ನ ಫ್ಲೈಟ್ ಕಾರ್ಯಾಚರಣೆಯ ಮುಖ್ಯಸ್ಥ ಗುರುಚರಣ್ ಅರೋರಾ, 'ಇದು ಪಕ್ಷಿಯ ಹೊಡೆತವಾಗಿದ್ದು, ಆದರೆ ಇದನ್ನು ಪೈಲೆಟ್ ಗಳು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ.ಈಗ ಈ ವಿಚಾರವಾಗಿ ಡಿಜಿಸಿಎ ತನಿಖೆ ನಡೆಸಲಿದೆ' ಎಂದು ತಿಳಿಸಿದರು.


ಬರ್ಡ್ ಹಿಟ್ ಎಂದರೇನು?


ಬರ್ಡ್ ಹಿಟ್ ಅಥವಾ ಬರ್ಡ್ ಏರ್‌ಕ್ರಾಫ್ಟ್ ಸ್ಟ್ರೈಕ್ ಅಪಾಯವು ವಿಮಾನದೊಂದಿಗೆ ಹಕ್ಕಿ ಅಥವಾ ಬಾವಲಿ ನಡುವೆ ಘರ್ಷಣೆಯಾಗಿದ್ದು, ಇದು ಸಾಮಾನ್ಯವಾಗಿ ವಿಮಾನಕ್ಕೆ ಹಾನಿಯನ್ನು ಉಂಟು ಮಾಡುತ್ತದೆ, ಅಷ್ಟೇ ಅಲ್ಲದೆ ಪಕ್ಷಿಯ ಸಾವಿಗೂ ಕೂಡ ಕಾರಣವಾಗುತ್ತದೆ ಎನ್ನಲಾಗಿದೆ.ವಿಮಾನವು ಕಡಿಮೆ ಎತ್ತರದಲ್ಲಿ ಹಾರುತ್ತಿರುವಾಗ ಪಕ್ಷಿಗಳ ಹೊಡೆತಗಳು ಸಾಮಾನ್ಯವಾಗಿ ನಡೆಯುತ್ತವೆ.


ಇದನ್ನೂ ಓದಿ: 777 Charlie New Record : ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡಿದ '777 ಚಾರ್ಲಿ'..!


ವಿಮಾನವು ಇಳಿಯುವಾಗ ಅಥವಾ ಟೇಕ್ ಆಫ್ ಆಗುವಾಗ ಪಕ್ಷಿಗಳ ಹೊಡೆತಗಳು ಹೆಚ್ಚಾಗಿ ನಡೆಯುತ್ತವೆ. 2009 ರಲ್ಲಿ, ಯುಎಸ್ ಏರ್ವೇಸ್ ಫ್ಲೈಟ್ 1549 ಪಕ್ಷಿಗಳ ಹಿಂಡುಗಳಿಂದ ಹೊಡೆದ ನಂತರ ಹಡ್ಸನ್ ನದಿಯಲ್ಲಿ ಅಚ್ಚರಿ ರೀತಿಯಲ್ಲಿ ಭೂಸ್ಪರ್ಶ ಮಾಡಿತ್ತು, ಆದರೆ ಇದೇ ವೇಳೆ ಎರಡೂ ಇಂಜಿನ್ ಗಳು ಸ್ಥಗಿತಗೊಂಡಿದ್ದವು, ಆದರೆ ಯಾರಿಗೂ ಗಾಯಗೊಂಡಿಲ್ಲ.