Decide to Never Get Married: ಹೆಣ್ಣಾಗಲಿ, ಗಂಡಾಗಲಿ ಮದುವೆ ಎನ್ನುವುದು ಜೀವನದ ಒಂದು ನಿರ್ಣಾಯಕ ಘಟ್ಟ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮಹತ್ತರವಾದ ಘಟ್ಟ. ಅದನ್ನು ಹಾದು ಮುಂದೆ ಹೋಗಬೇಕು ಎನ್ನುವ ಪದ್ಧತಿ ಚಾಲ್ತಿಯಲ್ಲಿದೆ. ಆದರೆ ಹರಿಯಾಣದ ಫರೀದಾಬಾದಿನ ಒಂದು ಡಜನ್ ಯುವತಿಯರು ‘ನಾವು ಯಾವುದೇ ಕಾರಣಕ್ಕೂ ಮದುವೆ ಆಗುವುದಿಲ್ಲ’ ಎಂದು ಶಪಥ ಮಾಡಿದ್ದಾರೆ. ನಾವು ಮದುವೆ ಆಗದೆಯೂ ಸಾರ್ಥಕ ಜೀವನ ನಡೆಸಬಹುದು ಎಂಬ ನಿಲುವಿಗೆ ಬಂದಿದ್ದಾರೆ.


COMMERCIAL BREAK
SCROLL TO CONTINUE READING

ನಿಜ, ಮದುವೆ ಆಗುವುದೇ ಜೀವನದ ಗುರಿಯೂ ಅಲ್ಲ, ಸಾರ್ಥಕವೂ ಅಲ್ಲ. ಹಾಗಂತ, ಮದುವೆ ಆಗದೆ ಇದ್ದುಬಿಡುವುದೂ ಸಾಧನೆ ಅಲ್ಲವಲ್ಲ. ಆದರೆ ಫರೀದಾಬಾದಿನ ಈ 12 ಹುಡುಗಿಯರು ‘ಮದುವೆ ಆಗದೆಯೂ ವೈಯಕ್ತಿಕ ಬೆಳವಣಿಗೆ ಕಾಣಲು ಸಾಧ್ಯ, ಅದಕ್ಕೂ ಮಿಗಿಲಾಗಿ ಸಮಾಜ ಸೇವೆಯ ಕಡೆ ಗಮನಹರಿಸಲು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಬಹುದು’ ಎನ್ನುವ ಕಾರಣಕ್ಕೆ ವಿವಾಹವಾಗದಿರಲು ಪ್ರತಿಜ್ಞೆ ಮಾಡಿದ್ದಾರಂತೆ.


ಇದನ್ನೂ ಓದಿ- ಕರ್ನಾಟಕದ ನೆರೆಯ ರಾಜ್ಯದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲು


ಸಾಂಪ್ರದಾಯಿಕವಾಗಿ ವೈವಾಹಿಕ ನಿರೀಕ್ಷೆಗಳಿಗಿಂತ ನಾವು ನಮ್ಮ ಕಾಲ ಮೇಲೆ ನಿಂತು ಸಮಾಜಕ್ಕೆ ಏನನ್ನದಾದರೂ ಕೊಡುಗೆ ನೀಡುವುದು ಬಹಳ ಮುಖ್ಯ. ಹಾಗಾಗಿ ನಾವೆಲ್ಲರು ಒಕ್ಕೊರಲಿನಿಂದ ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ ಈ ಹುಡುಗಿಯರು. ಈ 12 ಹುಡುಗಿಯರ ಗುಂಪಿನ ಸದಸ್ಯರಲ್ಲಿ ಒಬ್ಬರಾದ ಮಿನು ಗೋಯಲ್ ಮಾಧ್ಯಮದವರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.


‘ನಾವೆಲ್ಲರೂ ನಮ್ಮ ವೈಯಕ್ತಿಕ ಹಿತಕ್ಕಿಂತ ಮಿಗಿಲಾಗಿ ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಳ್ಳಲು ನಿಶ್ಚಯಿಸಿದ್ದೇವೆ. ನಮ್ಮಗಳ ಪೈಕಿ ಪ್ರತಿಯೊಬ್ಬರಿಗೂ ಅವರದೆಯಾದ ಮಾರ್ಗವಿದೆ. ಕಠಿಣ ಶ್ರಮ ಮತ್ತು ದೃಢಸಂಕಲ್ಪದಿಂದ ಈ ಹಂತ ತಲುಪಿದ್ದೇವೆ. ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವುದು ಮತ್ತು ಸ್ವಾವಲಂಬಿಯಾಗಿ ಬದುಕುವುದು ನಮ್ಮ ಧ್ಯೇಯ’ ಎಂದು ಮಿನು ಗೋಯಲ್ ಹೇಳುತ್ತಾರೆ.


ಇದನ್ನೂ ಓದಿ- ಬಂಡೀಪುರ- ವೈನಾಡು ರಸ್ತೆಯಲ್ಲಿ ಹಾಡುಹಗಲಲ್ಲೇ ಆನೆ ಮರಿಗೆ ಕೀಟಲೆ ಮಾಡಿದ ಕಿಡಿಗೇಡಿಗಳು:Video Viral


ಬಹಳ ಅಚ್ಚರಿಯಾದ ಮತ್ತೊಂದು ವಿಷಯವೇನೆಂದರೆ ‘ವಿವಾಹವಾಗದೆ ಇರುವ’ ಮಿನು ಗೋಯಲ್ ನಿರ್ಧಾರಕ್ಕೆ ಅವರ ಕುಟುಂಬದವರ ಸಹಮತಿ ಇದೆ. ‘ನಮಗೆ ಐದು ಮಕ್ಕಳಿದ್ದಾರೆ. ಬೇರೆಯವರು ಮದುವೆ ಆಗಿದ್ದಾರೆ. ಈಕೆ ಮದುವೆ ಆಗದೆಯೂ ಬೇರೇನನ್ನೋ ಸಾಧಿಸುವುದಾದರೆ ನಾವು ಅದನ್ನು ನೋಡಿ ಸಂತಸ ಪಡುತ್ತೇವೆ. ವಿಶೇಷವಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಅದೇ ನಮಗೆ ಖುಷಿ’ ಎನ್ನುತ್ತಾರೆ ಪೋಷಕರು. ಹೀಗೆ ಪ್ರತಿಯೊಬ್ಬರೂ ಅವರದೇ ಕಾರಣಗಳಿಂದ ಮದುವೆ ಆಗದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.