10ನೇ ವರ್ಷದ ಖುಷಿಯಲ್ಲಿದ್ದ ಬಾಲಕಿಯೊಂದು ಹುಟ್ಟು ಹಬ್ಬ ಆಚರಣೆಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಕಳೆದ ವಾರ ಪಂಜಾಬ್‌ನಲ್ಲಿ 10 ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದಂದು ಕೇಕ್ ತಿಂದ ಬಳಿಕ ಸಾವನ್ನಪ್ಪಿದ್ದಾಳೆ. ಹುಡುಗಿಯ ತಂಗಿ ಸೇರಿದಂತೆ ಇಡೀ ಕುಟುಂಬ ಕೇಕ್ ತಿಂದ ನಂತರ ಅಸ್ವಸ್ಥಗೊಂಡಿತು ಎಂದು ಆಕೆಯ ತಾತ ಮಾಹಿತಿ ನೀಡಿದ್ದಾರೆ.  ಸಾಯುವ ಕೆಲವೇ ಗಂಟೆಗಳ ಮೊದಲು, ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದ ವ್ಯಾಪಕವಾಗಿ ವೈರಲ್ ಆಗುತ್ತಿದೆ. 


ಇದನ್ನು ಓದಿ : LSG Vs PBKS : ತವರಿನಲ್ಲಿಯೇ ಗೆಲುವಿನ ಖಾತೆ ತೆರೆದ ಲಕ್ನೋ : 21ರನ್ ಗಳಿಂದ ಗೆಲುವು


ಕೇಕ್ ತಿಂದ ಕುಟುಂಬ ಅಸ್ವಸ್ಥ ಮಾರ್ಚ್ 24 ರಂದು ರಾತ್ರಿ 7 ಗಂಟೆ ಸುಮಾರಿಗೆ ಮಾನ್ವಿ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸಿದ್ದಾಳೆ. ರಾತ್ರಿ 10 ಗಂಟೆ ವೇಳೆಗೆ ಇಡೀ ಕುಟುಂಬದ ಸದಸ್ಯರು ಅಸ್ವಸ್ಥಗೊಂಡಿದ್ದಾರೆ ಎಂದು ಸಾನ್ವಿ ಅಜ್ಜ ಹರ್ಬನ್ ಲಾಲ್ ಹೇಳಿದ್ದಾರೆ. ಇಬ್ಬರು ಬಾಲಕಿಯರು ಸ್ವಲ್ಪ ಸಮಯದ ನಂತರ ವಾಂತಿ ಮಾಡಲು ಪ್ರಾರಂಭಿಸಿದರು. ಮಾನ್ವಿ ನೀರು ಕೇಳಿದಳು, ತೀವ್ರ ಬಾಯಾರಿಕೆ ಆಗುತ್ತಿದೆ ಎಂದಳು, ಬಳಿಕ ಅವಳು ಮಲಗಲು ಹೋದಳು ಎಂದು ಅವರು ಹೇಳಿದರು. ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿದ ಬಾಲಕಿಯನ್ನು ಮಾನ್ವಿ ಎಂದು ಗುರುತಿಸಲಾಗಿದೆ. ಸಾಯುವ ಕೆಲವೇ ಗಂಟೆಗಳ ಮೊದಲು, ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದ ವ್ಯಾಪಕವಾಗಿ ವೈರಲ್ ಆಗುತ್ತಿದೆ. 


ಮರುದಿನ ಬೆಳಗ್ಗೆ ಆಕೆಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆಕೆಗೆ ಆಕ್ಸಿಜನ್ ಸಹಾಯ ನೀಡಲಾಯಿತು. ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್), ಹೃದಯದ ವಿದ್ಯುತ್ ಚಟುವಟಿಕೆಯ ರೆಕಾರ್ಡಿಂಗ್ - ನಡೆಸಲಾಯಿತು ಎಂದು ಹರ್ಬನ್ ಲಾಲ್ ಹೇಳಿದರು. ಆದರೆ ವೈದ್ಯರಿಗೆ ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಹೇಳಿದ್ದಾರೆ.


ಇದನ್ನು ಓದಿ : PBKS Vs LSG : ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಬದಲಿಗೆ ಪೂರನ್ ಲಕ್ನೋ ನಾಯಕತ್ವ ವಹಿಸಿಕೊಂಡಿದ್ದೇಕೆ ?


ಕೇಕ್ ಕನ್ಹಾ' ಎನ್ನುವ ಬೇಕರಿಯಲ್ಲಿ ಆರ್ಡರ್ ಮಾಡಲಾಗಿದ್ದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶವಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಬೇಕರಿ ಮಾಲೀಕರ ವಿರುದ್ಧಎಫ್‌ಐಆರ್ ದಾಖಲಿಸಲಾಗಿದೆ. "ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಕೇಕ್‌ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ, ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ" ಎಂದು ಪೊಲೀಸರು ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.