ನಾಗ್ಪುರ: Vishwa Hindu Parishat -  ಅಯೋಧ್ಯೆಯ ರಾಮಜನ್ಮಭೂಮಿ ದೇಗುಲ ಕ್ಷೇತ್ರವನ್ನು ವ್ಯಾಟಿಕನ್ ಸಿಟಿ (Vatican City) ಮತ್ತು ಮೆಕ್ಕಾ (Mecca) ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಇದು ಹಿಂದುತ್ವದ ಸಂಕೇತವಾಗಿ ಹೊರಹೊಮ್ಮಲಿದೆ ಎಂದು ವಿಶ್ವ ಹಿಂದೂ ಪರಿಷತ್ (VHP) ಅಧ್ಯಕ್ಷ ರವೀಂದ್ರ ನಾರಾಯಣ್ ಸಿಂಗ್ (Rabindra Narayan Singh) ಭಾನುವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಶ್ರೀರಾಮ ಮಂದಿರ ಹಿಂದುತ್ವದ ಪ್ರತೀಕವಾಗಲಿದೆ (VHP Leader About Ram Mandir)
ಮಹಾರಾಷ್ಟ್ರದ ನಾಗ್ಪುರದ ಧಂತೋಲಿ ಪ್ರದೇಶದಲ್ಲಿ ವಿಶ್ವ ಹಿಂದೂ ಜನಕಲ್ಯಾಣ ಪರಿಷತ್ತಿನ ವಿದರ್ಭ ಪ್ರದೇಶದ ಕಚೇರಿ ಕಟ್ಟಡದ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಂಗ್ ಭಾನುವಾರ ಆಗಮಿಸಿದ್ದರು. ವಿಎಚ್‌ಪಿ ಪದಾಧಿಕಾರಿಗಳು ಮತ್ತು ಸಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯ ರಾಮ ಜನ್ಮಭೂಮಿ (Ram Mandir) ಯಾತ್ರಾ ಪ್ರದೇಶವನ್ನು ವ್ಯಾಟಿಕನ್ ಸಿಟಿ (ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಕಚೇರಿ) ಮತ್ತು ಮೆಕ್ಕಾ (ಇಸ್ಲಾಂನ ಪವಿತ್ರ ನಗರ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಅದು ಹಿಂದುತ್ವದ ಪ್ರತೀಕವಾಗಲಿದೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-Owaisi On Rahul Remarks:'ಹಿಂದೂಗಳನ್ನು ಅಧಿಕಾರಕ್ಕೆ ತನ್ನಿ' ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ


ಮುಸ್ಲಿಮರಿಗೆ ಮನವಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರವು ಭಾರತದಲ್ಲಿ ಮತಾಂತರವನ್ನು ಗುರಿಯಾಗಿಟ್ಟುಕೊಂಡು ವಿದೇಶಿ ಹಣಕ್ಕೆ ಕಡಿವಾಣ ಹಾಕುತ್ತಿದೆ ಮತ್ತು ಇದು ಶ್ಲಾಘನೀಯ ಎಂದಿದ್ದಾರೆ. ರಾಷ್ಟ್ರ ಸೇವೆಯಲ್ಲಿ ಹಿಂದೂಗಳೊಂದಿಗೆ ಕೈಜೋಡಿಸುವಂತೆ ಮುಸ್ಲಿಂ ಸಮುದಾಯಕ್ಕೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ. 


ಇದನ್ನೂ ಓದಿ-ಗಂಗೆ-ಯಮುನೆಯ ಪವಿತ್ರ ಸಂಗಮದ ಕೆಳಗೆ ಮೂರನೇ ನದಿ, ನಿಬ್ಬೇರಗಾದ ವಿಜ್ಞಾನಿಗಳು


ಹಿಂದೂಗಳ ಚಿಂತನೆಯ ಕುರಿತು ಹೇಳಿದ ರವಿಂದ್ರ ನಾರಾಯಣ್ ಸಿಂಗ್
ರವೀಂದ್ರ ನಾರಾಯಣ ಸಿಂಗ್, ' ತಮಗೆ ಏನೂ ಆಗುವುದಿಲ್ಲ ಎಂದು ಹಿಂದೂಗಳು ಭಾವಿಸುತ್ತಾರೆ. ಈ ಮನಸ್ಥಿತಿಯಿಂದಾಗಿ ನಾವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಕ್ರಿಶ್ಚಿಯನ್ ಮಿಷನರಿ ಸಂಘಟನೆಗಳು ಮತಾಂತರಕ್ಕಾಗಿ ಬುಡಕಟ್ಟು ಪ್ರದೇಶಗಳಲ್ಲಿ ಆಸ್ಪತ್ರೆ ಮತ್ತು ಶಾಲೆಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಜನ್ ಕಲ್ಯಾಣ ಪರಿಷತ್ತಿನ ಮುಂಬರುವ ಕಚೇರಿಯು ಪೂರ್ವ ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಹಿಂದೂಗಳಿಗಾಗಿ ವಿವಿಧ ಕಲ್ಯಾಣ ಕ್ರಮಗಳನ್ನು ಆರಂಭಿಸಲಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ- ಬ್ಯಾಂಕ್ ಠೇವಣಿ ವಿಮೆ ಕುರಿತು ಮಹತ್ವದ ನಿರ್ಧಾರ:"ಜನರ ಆರ್ಥಿಕ ಸಬಲೀಕರಣವೇ ನಮ್ಮ ಗುರಿ"- ಪಿಎಂ ಮೋದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.