ನವದೆಹಲಿ:ಕೇರಳದ ತಿರುವನಂತಪುರಂನಲ್ಲಿ ಆರೋಗ್ಯ ಅಧಿಕಾರಿಯೊಬ್ಬರು 44 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರಾಗಿರುವ ಅಧಿಕಾರಿ ಪ್ರಮಾಣಪತ್ರ ಪಡೆಯಲು ಮಹಿಳೆಗೆ ತಮ್ಮ ಮನೆಗೆ ಬರಲು ಕೇಳಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮನೆಗೆ ತಲುಪಿದಾಗ ಆಕೆಯ ಮೇಲೆ ಅತ್ಯಾಚಾರಗೈಯ್ಯಲಾಯಿತು ಎಂದು ಮಹಿಳೆ ದೂರಿದ್ದಾಳೆ.ಸಂತ್ರಸ್ಥ ಮಹಿಳೆ ಮಲಪ್ಪುರಂನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು, ಇತ್ತೀಚೆಗೆ ಕುಲತುಪುಳದಲ್ಲಿರುವ ತನ್ನ ಮನೆಗೆ ಮರಳಿದ್ದಳು.


ಅವಳು ಆಂಟಿಜೆನ್ ಪರೀಕ್ಷೆಗೆ ಒಳಗಾಗಿದ್ದಳು ಅದು ನೆಗಟಿವ್ ಎಂದು ತೋರಿಸಿತ್ತು,ಆಕೆಗೆ ಕೊರೊನಾ ನೆಗಟಿವ್ ಪ್ರಮಾಣ ಪತ್ರವನ್ನು ತರಲು ಕೇಳಿಕೊಳ್ಳಲಾಯಿತು.ಆಗ ಅಧಿಕಾರಿ ಅವಳ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಈಗ ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಸುನೀಶ್ ತಿಳಿಸಿದ್ದಾರೆ.ಪ್ರದೀಪ್ ಎಂದು ಗುರುತಿಸಲಾಗಿರುವ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಆದೇಶಿಸಿದ್ದಾರೆ.ಮಹಿಳಾ ಆಯೋಗವು ಅಧಿಕಾರಿಯ ವಿರುದ್ಧವೂ ಪ್ರಕರಣ ದಾಖಲಿಸಿದೆ.


ದೂರಿನ ಆಧಾರದ ಮೇಲೆ ಕೇರಳದ ಪಥನಮತ್ತಟ್ಟಾದಲ್ಲಿ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಂಬ್ಯುಲೆನ್ಸ್ ಚಾಲಕನನ್ನು ಬಂಧಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.