ಮುಂಬೈ: Road Accident-  ಮಹಾರಾಷ್ಟ್ರದ ಧುಲೆಯಲ್ಲಿ ಬುಧವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮುಂಬೈ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ (Mumbai Agra Highway) ಏಳರಿಂದ ಎಂಟು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.


Google: 150 ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಗೂಗಲ್, ನಿಮ್ಮ ಫೋನ್‌ನಲ್ಲಿಯೂ ಈ ಆ್ಯಪ್‌ಗಳಿದ್ದರೆ ಈಗಲೇ ಡಿಲೀಟ್ ಮಾಡಿ


ಸಂಪೂರ್ಣ ಜಖಂಗೊಂಡ ವಾಹನಗಳು:
ರಸ್ತೆ ಅಪಘಾತ (Road Accident) ತೀವ್ರವಾಗಿದ್ದು, ವಾಹನಗಳು ಒಂದರ ಮೇಲೊಂದು ನುಗ್ಗಿ ಸಂಪೂರ್ಣ ಜಖಂಗೊಂಡಿವೆ. ಅಪಘಾತದಲ್ಲಿ ಟ್ರಕ್ ಅಲ್ಲದೆ, ಕೆಲವು ನಾಲ್ಕು ಚಕ್ರದ ವಾಹನಗಳು ಸಹ ಜಖಂಗೊಂಡಿವೆ ಎಂದು ಹೇಳಲಾಗುತ್ತಿದೆ. ಅಪಘಾತದ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.


ಇದನ್ನೂ ಓದಿ- New Government Scheme: ಸರ್ಕಾರಿ ಪಡಿತರ ಅಂಗಡಿಗಳ ಮೂಲಕ ಗ್ಯಾಸ್ ಸಿಲಿಂಡರ್ ಮಾರಾಟ! ಬ್ಯಾಂಕ್ ಸೇವೆ, ಇನ್ಸುರೆನ್ಸ್ ಸೇವೆ ಕೂಡ ಆರಂಭ!


ವಾಹನಗಳ ಮಧ್ಯೆ ಸಿಲುಕಿದ್ದ ಹಲವರು:
ಶಿರ್ಪುರ ತಾಲೂಕಿನ ಪಲಾಸ್ನೇರ್ ಪ್ರದೇಶದಲ್ಲಿ ಮುಂಬೈ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಇನ್ನೂ ಅನೇಕ ಜನರು ವಾಹನಗಳಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ವಾಹನಗಳಿಂದ ಹೊರತರಲು ಆಡಳಿತವು ಸಾಕಷ್ಟು ಹರಸಾಹಸ ಪಡಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ನಂತರ ಪೊಲೀಸ್ ತಂಡ ಮತ್ತು ಆಂಬ್ಯುಲೆನ್ಸ್ ಕೂಡ ತಕ್ಷಣವೇ ಸ್ಥಳಕ್ಕೆ ಧಾವಿಸಿ  ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ