ಕೃಷ್ಣಮೃಗ ಬೇಟೆ ಪ್ರಕರಣ: ವಿಚಾರಣೆಗೆ ಹಾಜರಾಗದಿದ್ದಲ್ಲಿ ಜಾಮೀನು ರದ್ದು, ಸಲ್ಮಾನ್ ಗೆ ಕೋರ್ಟ್ ಎಚ್ಚರಿಕೆ
1998 ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯಲ್ಲಿ ಹಾಜರಾಗಲು ವಿಫಲವಾದರೆ ಅವರ ಜಾಮೀನು ತಿರಸ್ಕರಿಸಲಾಗುವುದು ಎಂದು ಜೋಧ್‌ಪುರದ ನ್ಯಾಯಾಲಯವು ನಟ ಸಲ್ಮಾನ್ ಖಾನ್ ಅವರಿಗೆ ಗುರುವಾರದಂದು ಎಚ್ಚರಿಕೆ ನೀಡಿದೆ.
ನವದೆಹಲಿ: 1998 ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯಲ್ಲಿ ಹಾಜರಾಗಲು ವಿಫಲವಾದರೆ ಅವರ ಜಾಮೀನು ತಿರಸ್ಕರಿಸಲಾಗುವುದು ಎಂದು ಜೋಧ್‌ಪುರದ ನ್ಯಾಯಾಲಯವು ನಟ ಸಲ್ಮಾನ್ ಖಾನ್ ಅವರಿಗೆ ಗುರುವಾರದಂದು ಎಚ್ಚರಿಕೆ ನೀಡಿದೆ.
ಏಪ್ರಿಲ್ 5 ರಂದು ಖಾನ್ ಅವರ 1998 ರ ಚಲನಚಿತ್ರ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ಸಮಯದಲ್ಲಿ ಜೋಧಪುರದಲ್ಲಿ ಕೃಷ್ಣಮೃಗಗಳನ್ನು ಕೊಂದ ಆರೋಪದಲ್ಲಿ ಕಳೆದ ವರ್ಷ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.ಆದರೆ ಸಲ್ಮಾನ್ ಖಾನ್ ಅವರು ಜೋಧ್‌ಪುರ ಜೈಲಿನಲ್ಲಿ ಎರಡು ರಾತ್ರಿ ಕಳೆದ ನಂತರ ನ್ಯಾಯಾಲಯ ಅವರಿಗೆ ಜಾಮೀನು ನೀಡಿತು. ಇನ್ನೊಂದೆಡೆಗೆ ಅವರ ಸಹ ನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೆಂದ್ರೆ, ನೀಲಂ ಕೊಥಾರಿ ಮತ್ತು ಟಬು - ಮತ್ತೊಬ್ಬ ಆರೋಪಿ ದುಶ್ಯಂತ್ ಸಿಂಗ್ ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.
ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸುವುದರ ವಿರುದ್ಧ ರಾಜಸ್ಥಾನ ಸರ್ಕಾರವು ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ರಾಜಸ್ಥಾನ್ ಹೈಕೋರ್ಟ್‌ನ ಜೋಧ್‌ಪುರ ನ್ಯಾಯಪೀಠ ಸಲ್ಮಾನ್ ಖಾನ್ ಗೆ ಹೊಸ ನೋಟಿಸ್ ನೀಡಿತ್ತು. ಬೇಟೆ ನಡೆದಾಗ ನಟರೊಂದಿಗೆ ಜೊತೆಯಲ್ಲಿದ್ದ ದುಶ್ಯಂತ್ ಸಿಂಗ್ ಅವರಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.