ನವದೆಹಲಿ: ಇತ್ತೀಚಿಗೆ ಮೊಬೈಲ್ ಫೋನ್ ಎಷ್ಟು ಎಲ್ಲರನ್ನೂ ಆವರಿಸಿದೆ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಮೊಬೈಲ್ ಬಿಟ್ಟಿರದಂತಾಗಿದ್ದಾರೆ. ಮೊಬೈಲ್ ಫೋನ್ ಇಲ್ಲದೆ ನಮ್ಮ ಬದುಕೇ ಇಲ್ಲ ಎನ್ನುವವರಿಗೆ ಮೊಬೈಲ್ ಫೋನ್ ನಮ್ಮ ಬದುಕನ್ನೇ ನುಂಗಬಹುದು ಎಂಬ ಅರಿವೇ ಇಲ್ಲದಂತಾಗಿದೆ.


COMMERCIAL BREAK
SCROLL TO CONTINUE READING

ಅತಿಯಾದರೆ ಅಮೃತವೂ ವಿಷ ಎಂಬಂತೆ ತಂತ್ರಜ್ಞಾನವನ್ನು ಹಿತ ಮಿತವಾಗಿ ಬಳಸಿಕೊಳ್ಳುವ ಬದಲು ಅದರ ಅತಿಯಾದ ಬಳಕೆ ನಮ್ಮ ಜೀವಕ್ಕೆ ಕುತ್ತು ತರಬಹುದು ಎಂಬುದು ತಿಳಿದಿದೆಯೇ? ಸ್ಮಾರ್ಟ್ ಫೋನ್ ಗಳು ಆರೋಗ್ಯಕ್ಕೆ ಉತ್ತಮವಾದ ವಿಕಿರಣವನ್ನು ನೀಡುವುದಿಲ್ಲ. ಇದಲ್ಲದೆ ಹಲವು ಬಾರಿ ಬ್ಯಾಟರಿ ಬ್ಲಾಸ್ಟ್ ಘಟನೆಗಳ ಬಗ್ಗೆಯೂ ನೀವೂ ಕೇಳಿರುತ್ತೀರಿ. ಇದೇ ರೀತಿಯ ಪ್ರಕರಣ ಉತ್ತರ ಪ್ರದೇಶದ ಸೋನ್ಭದ್ರದಲ್ಲಿ ನಡೆದಿದ್ದು, ವಯೋವೃದ್ಧರೊಬ್ಬರು ಇದರಿಂದ ಮೃತಪಟ್ಟಿದ್ದಾರೆ.


ಸೋನಭದ್ರ ಜಿಲ್ಲೆಯ ಶಾಹಗಂಜ್ ಪ್ರದೇಶದ ರಾಜ್ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಯಸ್ಸಾದ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ, ತನ್ನ ಎದೆಯ ಮೇಲೆ ಫೋನ್ ಇಟ್ಟುಕೊಂಡು ಮಲಗಿದ್ದರು. ಇದ್ದಕ್ಕಿದ್ದಂತೆ ಒಂದು ಸ್ಫೋಟ ಸಂಭವಿಸಿದೆ. ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತಲುಪಿದರು. ಮಲಗುವ ವೇಳೆ ಅಲಾರಂ ಇಟ್ಟು ಅವರು ತಮ್ಮ ಫೋನ್ ಅನ್ನು ಪಕ್ಕದಲ್ಲೇ ಇಟ್ಟುಕೊಳ್ಳುತ್ತಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.


ಶನಿವಾರ ರಾತ್ರಿ ಎಂದಿನಂತೆ ಎದೆಯ ಮೇಲೆ ಫೋನ್ ಇಟ್ಟುಕೊಂಡು ಆ ವಯಸ್ಸಾದ ವ್ಯಕ್ತಿ ಮಲಗಿದ್ದರು. ಬೆಳಿಗ್ಗೆ ಇದ್ದಕ್ಕಿದ್ದಂತೆ ಸ್ಫೋಟವೊಂದು ಕೇಳಿ ಬಂದಿತು. ಅದೇನು ಎಂದು ನಾವು ನೋಡಲು ಬಂದಾಗ, ಅವರ ಎದೆಯ ಮೇಲೆ ಸ್ಫೋಟದ ದೃಶ್ಯ ಕಂಡು ಬಂದಿತ್ತು. ಸುತ್ತಮುತ್ತಲೂ ಮೊಬೈಲ್ ಚಿದ್ರವಾಗಿ ಬಿದ್ದಿತ್ತು. ಅವರು ಮರಣ ಹೊಂದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.


ಸ್ಮಾರ್ಟ್ಫೋನ್ ಬೇಗನೆ ಹೀಟ್ ಆಗುತ್ತದೆ ಎಂದು ಹಲವರು ದೂರುತ್ತಾರೆ. ಫೋನ್ ಅನ್ನು ಬಳಸುವ ವೇಳೆ ಅದು ಹೆಚ್ಚು ಬಿಸಿಯಾಗಿರುತ್ತದೆ. ಅಥವಾ ಚಾರ್ಜ್ ಮಾಡುವಾಗಲೂ, ಸ್ಮಾರ್ಟ್ಫೋನ್ ಶಾಖವನ್ನು ಪಡೆಯುತ್ತದೆ. ಇದು ಸರಿಯಾದ ಚಿಹ್ನೆ ಅಲ್ಲ, ಏಕೆಂದರೆ ಅಂತಹ ಒಂದು ಸ್ಮಾರ್ಟ್ ಫೋನ್ ಅಥವಾ ಫೀಚರ್ ಫೋನ್ ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು. ಇದನ್ನು ಎಂದಿಗೂ ನಿರ್ಲಕ್ಷಿಸಬಾರದು, ನಿರ್ಲಕ್ಷಿಸಿದ್ದೆ ಆದರೆ ಅದು ಎಂದಿಗೂ ಅಪಾಯಕಾರಿಯಾಗಿರುತ್ತದೆ.