ನವದೆಹಲಿ: ದೇಶದ ರಾಜಧಾನಿಯಾದ ದೆಹಲಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಪ್ಪೋ ಮೊಬೈಲ್ ಕಂಪನಿಯ ಸೇವಾ ಕೇಂದ್ರಕ್ಕೆ ಹೋಗಿ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡಿದ್ದು  ಗಾಯಗೊಂಡ ವ್ಯಕ್ತಿಯನ್ನು ರೋಹಿಣಿಯ ಬಿಎಸ್‌ಎ ಆಸ್ಪತ್ರೆಗೆ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಸೇವಾ ಕೇಂದ್ರವು ಗ್ರಾಹಕರೊಂದಿಗೆ ಕೆಟ್ಟದಾಗಿ ವರ್ತಿಸಿದೆ ಎಂಬ ಆರೋಪ:
ವಾಸ್ತವವಾಗಿ 38 ವರ್ಷದ ಭೀಮ್ ಸಿಂಗ್ ಅವರ ಫೋನ್ ರಿಪೇರಿಗಾಗಿ ರೋಹಿಣಿಯ ಎಂ2ಕೆ ಮಾಲ್‌ನಲ್ಲಿರುವ Oppo ಸೇವಾ ಕೇಂದ್ರಕ್ಕೆ ಸುತ್ತುತ್ತಿದ್ದರು. ಆದರೆ ಸೇವಾ ಕೇಂದ್ರ ಫೋನ್‌ ರಿಪೇರಿ ಮಾಡಿಕೊಡಲು ಸಿದ್ಧವಿರಲಿಲ್ಲ. ಅದೂ ಅಲ್ಲದೆ ಅವರು ಭೀಮ್ ಸಿಂಗ್ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದರು ಎನ್ನಲಾಗಿದೆ.


ಇಲ್ಲಿನ ಸೇವಾ ಕೇಂದ್ರದಲ್ಲಿ ಕುಳಿತುಕೊಳ್ಳುವ ಮಹಿಳಾ ಅಧಿಕಾರಿ ಯಾವುದೇ ಗ್ರಾಹಕರೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ ಮತ್ತು ಹಲವು ಬಾರಿ ಬೈದು ಕಳುಹಿಸುತ್ತಾರೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ. ವಾಸ್ತವವಾಗಿ 38 ವರ್ಷದ ಭೀಮ್ ಸಿಂಗ್ ತನ್ನ ಸೋದರ ಸೊಸೆಯ ಆನ್‌ಲೈನ್ ತರಗತಿಗಾಗಿ ಒಪ್ಪೊದ ಹೊಸ ಫೋನ್ ತೆಗೆದುಕೊಂಡಿದ್ದರು. ಆದರೆ ಆ ಫೋನ್‌ನಲ್ಲಿ (Phone) ದೋಷ ಕಂಡುಬಂದಿದೆ. ಇದರ ನಂತರ ಭೀಮ್ ಸಿಂಗ್ ಅವರು ಫೋನ್ ರಿಪೇರಿಗಾಗಿ 1 ವಾರ ನಿರಂತರವಾಗಿ ಸೇವಾ ಕೇಂದ್ರವನ್ನು ಸುತ್ತುತ್ತಿದ್ದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. 


ಭಾರತದಲ್ಲಿ Oppo, Vivo ಮತ್ತು Samsung ಸ್ಮಾರ್ಟ್‌ಫೋನ್ ಉತ್ಪಾದನೆ ಸ್ಥಗಿತ


ನಿರಂತರವಾಗಿ ಒಂದು ವಾರದಿಂದ ಸುತ್ತುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಫೋನ್ ರಿಪೇರಿ ಆಗದಿರಲು ಕಾರಣವೇನು ಎಂದು ಭೀಮ್ ಸಿಂಗ್ ಕೇಳಿದ್ದಾರೆ. ಈ ವೇಳೆ ಮಹಿಳಾ ಅಧಿಕಾರಿ ಭೀಮ್ ಸಿಂಗ್ ಅವರ ಬಳಿ ಅನುಚಿತವಾಗಿ ವರ್ತಿಸಿದ್ದು ನೀವು ಹೊರಡಿ ಎಂದು ಖಾರವಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿಯು ಇಂತಹ ಸೇವಾ ಕೇಂದ್ರಕ್ಕೆ ಸುತ್ತುವುದಕ್ಕಿಂತ ಸಾಯುವುದೇ ಒಳ್ಳೆಯದು ಎಂದಿದ್ದಾರೆ. ಆಗ ಆ ಮಹಿಳೆಯು ನಿಮಗೆ ಅದು ಒಳ್ಳೆಯದು ಎಂದೆನಿಸಿದರೆ ಹೋಗಿ ಬೆಂಕಿ (Fire) ಹಚ್ಚಿಕೊಳ್ಳಿ ಎಂದಿದ್ದಾರೆ. ತಕ್ಷಣವೇ ಕಾರಿನ ಬಳಿ ತೆರಳಿದ ಭೀಮ್ ಸಿಂಗ್ ಕಾರಿನಲ್ಲಿದ್ದ ಪೆಟ್ರೋಲ್ ತಂದು ಸೇವಾ ಕೇಂದ್ರದಲ್ಲಿಯೇ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತಕ್ಷಣವೇ ಸುತ್ತಮುತ್ತಲಿನ ಜನರು ಬೆಂಕಿಯನ್ನು ನಂದಿಸಿದರು. ಆದರೆ ಆ ಹೊತ್ತಿಗೆ ಅವರು ಸಾಕಷ್ಟು ಸುಟ್ಟು ಹೋಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಇನ್ಮುಂದೆ ನಿಮ್ಮ Smartphone ಬ್ಯಾಟರಿ ಹೆಚ್ಚಿಸುವುದು ಇನ್ನಷ್ಟು ಸುಲಭವಾಗಿದೆ, ಹೇಗೆ ಅಂತಿರಾ?


ರೋಹಿಣಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಭೀಮ್ ಸಿಂಗ್ ಶಹಾಬಾದ್ ಡೈರಿ ಪ್ರದೇಶದ ನಿವಾಸಿ ಪ್ರಹ್ಲಾದ್ ಪುರ್ ಮೂಲದವರಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪತ್ತೆ ಮಾಡಲಾಗಿದೆ. ಭೀಮ್ ಸಿಂಗ್ ಅವರ ಹೇಳಿಕೆಯನ್ನು ವೈದ್ಯರ ಸಮ್ಮುಖದಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.