ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರತೊಡಗಿದ್ದು, ವಿಧಾನಸಭೆ ಚುನಾವಣೆಗಳಿಗೆ ದಿನಗಣನೆ ಆರಂಭವಾಗಿದೆ. ಸದ್ಯ ಎಲ್ಲ ರಾಜಕೀಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಅವರ ಪುತ್ರಿ ಹರ್ಷಿತಾ ಕೆಜ್ರಿವಾಲ್ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ. ಅರವಿಂದ್ ಕೆಜ್ರಿವಾಲ್ ಅವರನ್ನು 'ಭಯೋತ್ಪಾದಕ' ಎಂಬ BJP ಹೇಳಿಕೆಯ ಹಿನ್ನೆಲೆ ಹರ್ಷಿತಾ ನೀಡಿರುವ ಈ ಹೇಳಿಕೆ ಇದೀಗ ಭಾರಿ ಮಹತ್ವಪಡೆದುಕೊಂಡಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿರುವ ಹರ್ಷಿತಾ, ದಿನನಿತ್ಯ ತೊಂದರೆ ಅನುಭವಿಸುತ್ತಿದ್ದ ದೆಹಲಿ ಜನತೆಗೆ ಇಂದು ಉಚಿತ ವಿದ್ಯುತ್, ಉಚಿತ ನೀರು ಸೌಲಭ್ಯ ಸಿಗುತ್ತಿದ್ದು, ಇದು ಉಗ್ರ ಚಟುವಟಿಕೆಯೇ? ಎಂದು ಪ್ರಶ್ನಿಸಿದ್ದಾರೆ. "ನಮ್ಮ ತಂದೆ ಯಾವಾಗಲೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಆದರೆ, ನನಗೆ ಇಂದಿಗೂ ನೆನಪಿದೆ ನನ್ನ ತಂದೆ ನನಗೆ, ನನ್ನ ಸಹೋದರ, ತಾಯಿ, ಅಜ್ಜ-ಅಜ್ಜಿ ಅವರನ್ನು ಬೆಳಗ್ಗೆ 6 ಗಂಟೆಗೆ ಎಬ್ಬಿಸಿ ನಮಗೆ ಭಗವದ್ಗೀತೆ ಓದಲು ನೀಡುತ್ತಿದ್ದರು. ಅವರು ನಿತ್ಯ ನಮಗೆ 'ಇನ್ಸಾನ್ ಸೆ ಇನ್ಸಾನ್ ಕಾ ಹೋ ಭಾಯಿಚಾರಾ' ಹಾಡನ್ನು ಕಲಿಸಿದ್ದಾರೆ. ಅವರು ಭಯೋತ್ಪಾದಕರಾಗಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.


ಕೆಲ ದಿನಗಳ ಹಿಂದೆ ಈ ಕುರಿತು ಹೇಳಿಕೆ ನೀಡಿದ್ದ BJP ಮುಖಂಡ ಪ್ರವೇಶ ವರ್ಮಾ, ದೆಹಲಿ ಪ್ರಧಾನಿ ಅರವಿಂದ್ ಕೆಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಸಂಬೋಧಿಸಿದ್ದರು. ಈ ಕುರಿತು ಮಂಗಳವಾರ ಹೇಳಿಕೆ ನೀಡಿದ್ದ BJP ಮುಖಂಡ ಪ್ರಕಾಶ್ ಜಾವಡೆಕರ್ ಕೂಡ "ಕೆಜ್ರಿವಾಲ್ ಮುಗ್ಧ ಮುಖ ಹೊತ್ತು ಜನರ ಬಳಿಗೆ ಹೋಗಿ ನಾನು ಭಯೋತ್ಪಾದಕನಾಗಿದ್ದೆನೆಯೇ? ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಷಿತಾ ಪ್ರತಿಪಕ್ಷಗಳಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಹರ್ಷಿತಾ, ರಾಜಧಾನಿ ದೆಹಲಿಯಲ್ಲಿ ಇಂದು ಶೈಕ್ಷಣಿಕ ಮಟ್ಟ ಸುಧಾರಣೆಯಾಗಿದ್ದಾರೆ ಸಿಎಂ ಉಗ್ರವಾದಿಯೇ? ಎಂದು ಪ್ರಶ್ನಿಸಿದ್ದಾರೆ.


ತಮ್ಮ ತಂದೆ ಹಾಗೂ ದೆಹಲಿ ಸಿಎಂ ಅರವಿಂದ್ ಕೆಜ್ರಿವಾಲ್ ಅವರನ್ನು ಸಮರ್ಥಿಸಿ ಮಾತನಾಡಿರುವ ಹರ್ಷಿತಾ, ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ರಾಜಕೀಯ ಮಾಡಲು ಬಿಡಿ. ನಮ್ಮ ಪರ ದೆಹಲಿಯ ಎರಡು ಕೋಟಿ ಜನರು ಪ್ರಚಾರದಲ್ಲಿ ತೊಡಗಿದ್ದಾರೆ. ಫೆಬ್ರುವರಿ 11 ರಂದು ದೆಹಲಿ ಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದ್ದು, ಜನರು ಯಾರ ಪರ ಇದ್ದಾರೆ ಮತ್ತು ಭಯೋತ್ಪಾದನೆ ಎಂದರೆ ಏನು ಎಂಬುದು ಸ್ಪಷ್ಟವಾಗಲಿದೆ ಎಂದಿದ್ದಾರೆ.