ಬೆಂಗಳೂರು: ಗುಪ್ತಚರ ಬಲೂನ್ ಎನ್ನುವುದು ಅಕ್ಷರಶಃ ಒಂದು ಅನಿಲ ತುಂಬಿಸಿರುವ ಬಲೂನ್ ಆಗಿದ್ದು, ಸಾಮಾನ್ಯವಾಗಿ ಆಕಾಶದಲ್ಲಿ ಸಾಕಷ್ಟು ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದು ಬಹುತೇಕ ವಾಣಿಜ್ಯಿಕ ವಿಮಾನಗಳು ಹಾರಾಡುವಷ್ಟೇ ಎತ್ತರದಲ್ಲಿ ಹಾರಬಲ್ಲದು.


COMMERCIAL BREAK
SCROLL TO CONTINUE READING

ಗುಪ್ತಚರ ಬಲೂನ್‌ನಲ್ಲಿ ಅತ್ಯಾಧುನಿಕ ಗುಣಮಟ್ಟದ ಕ್ಯಾಮೆರಾಗಳು ಹಾಗೂ ಇಮೇಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಈ ಎಲ್ಲಾ ಉಪಕರಣಗಳು ನೆಲದೆಡೆಗೆ ಗಮನ ಹರಿಸಿರುತ್ತವೆ. ಈ ಬಲೂನ್‌ನಲ್ಲಿರುವ ಉಪಕರಣಗಳು ಛಾಯಾಗ್ರಹಣ ಹಾಗೂ ಇತರ ಇಮೇಜಿಂಗ್ ತಂತ್ರಜ್ಞಾನಗಳ ಮೂಲಕ ಮಾಹಿತಿ ಕಲೆ ಹಾಕುತ್ತದೆ. ಆ ಮೂಲಕ ನೆಲದಲ್ಲಿ ಏನೇನು ನಡೆಯುತ್ತದೆ ಎನ್ನುವುದನ್ನು ತಿಳಿಯಲು ಸಾಧ್ಯವಾಗುತ್ತದೆ.


[[{"fid":"287229","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಈ ರೀತಿಯ ಬಹುತೇಕ ಬಲೂನ್‌ಗಳು ಗಾಳಿ ಬೀಸುವ ದಿಕ್ಕಿನೆಡೆಗೆ ಚಲಿಸುತ್ತವೆ. ಅವುಗಳನ್ನು ಸಣ್ಣಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗಬಹುದಾದರೂ, ಅವುಗಳ ಮೇಲೆ ಜನರು ಇರಲು ಸಾಧ್ಯವಿಲ್ಲ. ಅವುಗಳು ಹವಾಮಾನದ ಕರುಣೆಯ ಮೇಲೆ ಉಳಿಯಲು ಸಾಧ್ಯವಿದೆಯಷ್ಟೇ. ಕೆಲವು ಸಂದರ್ಭಗಳಲ್ಲಿ ಇಂತಹ ಬಲೂನ್‌ಗಳಲ್ಲಿ ಅವುಗಳ ಎತ್ತರವನ್ನು ಬದಲಾಯಿಸಲು ಅನುಕೂಲಕರವಾದ ಉಪಕರಣಗಳಿರುತ್ತವೆ. ಅವುಗಳ ಮೂಲಕ ಬಲೂನ್‌ಗಳು ಅಗತ್ಯವಿರುವ ದಿಕ್ಕಿಗೆ ಚಲಿಸುವ ಗಾಳಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಕಾರ್ಮನ್ ಲೈನ್ ಎಂದು ಕರೆಯಲ್ಪಡುವ ಒಂದು ಕಾಲ್ಪನಿಕ ರೇಖೆ ಭೂಮಿಯಿಂದ 62 ಮೈಲಿ (100 ಕಿಲೋಮೀಟರ್) ಎತ್ತರದಲ್ಲಿದೆ. ಅದು ಒಂದು ರಾಷ್ಟ್ರದ ವಾಯುಪ್ರದೇಶದ ಗಡಿಯಾಗಿದೆ.


ಇದನ್ನೂ ಓದಿ: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ದೇವಿಸಿಂಗ್ ಆರ್ ಶೇಖಾವತ್ ಇನ್ನಿಲ್ಲ


ಗುಪ್ತಚರ ಉಪಗ್ರಹ ಬದಲು ಗುಪ್ತಚರ ಬಲೂನ್‌ಗಳನ್ನು ಯಾಕೆ ಬಳಸುತ್ತಾರೆ?


ಆಕಾಶದಿಂದ ಗುಪ್ತಚರ ಕಾರ್ಯಾಚರಣೆ ನಡೆಸಲು ಉಪಗ್ರಹಗಳು ಸೂಕ್ತ ಆಯ್ಕೆಯಾಗಿವೆ. ಇಂದು ಗುಪ್ತಚರ ಉಪಗ್ರಹಗಳು ನಮ್ಮ ತಲೆಯ ಮೇಲಿವೆ. ಅವುಗಳು ಸಾಮಾನ್ಯವಾಗಿ 2 ವಿವಿಧ ಕಕ್ಷೆಗಳ ಪೈಕಿ ಒಂದರಲ್ಲಿರುತ್ತವೆ. ಮೊದಲನೆಯ ಕಕ್ಷೆಯನ್ನು ಲೋ ಅರ್ತ್ ಆರ್ಬಿಟ್ ಎಂದು ಕರೆಯಲಾಗುತ್ತದೆ. ಅದರ ಹೆಸರೇ ಹೇಳುವಂತೆ ಇಲ್ಲಿರುವ ಉಪಗ್ರಹಗಳು ಭೂಮಿಗೆ ಸನಿಹದಲ್ಲಿರುತ್ತವೆ. ಆದರೆ ಅವುಗಳು ನಮ್ಮಿಂದ ನೂರಾರು ಮೈಲಿ ಎತ್ತರದಲ್ಲಿರುತ್ತವೆ.


[[{"fid":"287231","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಇಮೇಜಿಂಗ್ ಮತ್ತು ಛಾಯಾಚಿತ್ರ ತೆಗೆಯಲು ಯಾವುದಾದರೂ ವಸ್ತುವಿನ ಸನಿಹ ಹೋದಷ್ಟೂ ಅದನ್ನು ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ. ಇದು ಗುಪ್ತಚರ ಕಾರ್ಯಾಚರಣೆಗೂ ಅನ್ವಯವಾಗುತ್ತದೆ. ಭೂಮಿಯ ಕೆಳಕಕ್ಷೆಯಲ್ಲಿರುವ ಉಪಗ್ರಹಗಳು ಭೂಮಿಗೆ ಸನಿಹದಲ್ಲಿರುವುದರಿಂದ, ಅವುಗಳು ಸಾಕಷ್ಟು ದೂರದಲ್ಲಿರುವ ಉಪಗ್ರಹಗಳಿಗೆ ಹೋಲಿಸಿದರೆ ಹೆಚ್ಚು ಸ್ಪಷ್ಟವಾಗಿ ನೋಡಬಲ್ಲವು.


[[{"fid":"287234","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"5":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"5"}}]]


ಆದರೆ ಈ ಲೋ ಅರ್ತ್ ಆರ್ಬಿಟ್ ಉಪಗ್ರಹಗಳ ಅನನುಕೂಲತೆ ಎಂದರೆ ಅವುಗಳು ಸತತವಾಗಿ ಭೂಮಿಯ ಸುತ್ತ ಪರಿಭ್ರಮಣೆ ನಡೆಸುತ್ತಿರುತ್ತವೆ. ಭೂಮಿಯ ಸುತ್ತ ಒಂದು ಪರಿಭ್ರಮಣೆ ನಡೆಸಲು ಅವುಗಳಿಗೆ 90 ನಿಮಿಷ ಬೇಕಾಗುತ್ತದೆ. ಆದರೆ ಭೂಮಿಯ ಮೇಲೆ ನಡೆಯುತ್ತಿರುವುದರ ಉತ್ತಮ ಗುಣಮಟ್ಟದ ಸ್ಪಷ್ಟ ಛಾಯಾಚಿತ್ರ ತೆಗೆಯಲು ಈ ವೇಗ ಬಹಳ ಹೆಚ್ಚಾಗುತ್ತದೆ.


[[{"fid":"287232","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"3":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"3"}}]]


2ನೇ ಮಾದರಿಯ ಉಪಗ್ರಹಗಳ ಕಕ್ಷೆಯನ್ನು ಜಿಯೋಸಿಂಕ್ರೊನಸ್ ಆರ್ಬಿಟ್ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ದೂರದಲ್ಲಿರುತ್ತದೆ. ಇದಕ್ಕಿರುವ ಅನನುಕೂಲತೆ ಎಂದರೆ, ಯಾವುದಾದರೂ ವಸ್ತುವಿನಿಂದ ಸಾಕಷ್ಟು ದೂರ ದೂರ ತೆರಳಿದಷ್ಟೂ ಅದನ್ನು ಸ್ಪಷ್ಟವಾಗಿ ಕಾಣುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಆದರೆ ಈ ಉಪಗ್ರಹಗಳಿಗೆ ನಿರಂತರತೆಯ ಅನುಕೂಲತೆ ಇದೆ. ಅಂದರೆ, ಈ ಉಪಗ್ರಹಗಳು ಸತತವಾಗಿ ಛಾಯಾಚಿತ್ರಗಳನ್ನು ತೆಗೆಯಬಲ್ಲವು.


ಇದನ್ನೂ ಓದಿ: ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ


ಈ ಕಕ್ಷೆಗಳಲ್ಲಿ ಸಾಮಾನ್ಯವಾಗಿ ಪ್ರತಿ ಸಲವೂ ಭೂಮಿಯ ಅದೇ ಪ್ರದೇಶವನ್ನು ನೋಡುವಂತಾಗುತ್ತದೆ. ಯಾಕೆಂದರೆ ಈ ಉಪಗ್ರಹಗಳು ಭೂಮಿ ಪರಿಭ್ರಮಣೆ ನಡೆಸುವ ರೀತಿಯಲ್ಲೇ, ಅದೇ ವೇಗದಲ್ಲಿ ಸುತ್ತುತ್ತವೆ. ಆದರೆ ಗುಪ್ತಚರ ಬಲೂನ್ ಇದರಲ್ಲಿ ಅತ್ಯುತ್ತಮ ಅವಕಾಶ ಕಲ್ಪಿಸುತ್ತದೆ. ಈ ಬಲೂನ್‌ಗಳು ಭೂಮಿಗೆ ಯಾವುದೇ ಉಪಗ್ರಹಗಳಿಂದ ಅತಿಹೆಚ್ಚು ಸನಿಹದಲ್ಲಿರುತ್ತವೆ. ಆ ಮೂಲಕ ಅವುಗಳು ಎಲ್ಲವನ್ನೂ ಸ್ಪಷ್ಟವಾಗಿ ನೋಡಬಲ್ಲವು.


[[{"fid":"287233","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"4":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"4"}}]]


ಬಲೂನ್‌ಗಳು ಸಹಜವಾಗಿಯೇ ಗಾಳಿಯಲ್ಲಿ ಚಲಿಸುತ್ತಿರುತ್ತವೆ. ಆದರೆ ಅವುಗಳು ಸಾಕಷ್ಟು ನಿಧಾನವಾಗಿ ಚಲಿಸುತ್ತವೆ. ಆದ್ದರಿಂದ ಅವುಗಳ ವಿಚಕ್ಷಣೆಯಲ್ಲೂ ಒಂದಷ್ಟು ನಿರಂತರತೆ ಇರುತ್ತದೆ. ಗುಪ್ತಚರ ಬಲೂನ್‌ಗಳು ಇಲೆಕ್ಟ್ರಾನಿಕ್ ಸಿಗ್ನಲ್‌ಗಳನ್ನು ಕಲೆಹಾಕುವ ಸಾಮರ್ಥ್ಯ ಹೊಂದಿದ್ದು, ಸಂವಹನವನ್ನು ಅಡ್ಡಿಪಡಿಸಬಲ್ಲವು. ಆದರೆ ಇತ್ತೀಚಿನ ದಿನಗಳಲ್ಲಿ ಗೂಢಾಚಾರಿಕೆಯನ್ನು ಬಲೂನ್‌ಗಳ ಮೂಲಕ ಸಾಮಾನ್ಯವಾಗಿ ನಡೆಸುವುದಿಲ್ಲ. ಯಾಕೆಂದರೆ ಅವುಗಳು ಸಾಮಾನ್ಯವಾಗಿ ಸುಲಭದ ಗುರಿಯಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ.


ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.