ನವದೆಹಲಿ: ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿನಿ ಶುಕ್ರವಾರದಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯನ್ನು ಕೇರಳ ಮೂಲದ ಫಾತಿಮಾ ಲತೀಫ್ ಎನ್ನಲಾಗಿದೆ. ಅವರು ಐಐಟಿಯಲ್ಲಿ ಎಂ.ಎ ಪದವಿಯಲ್ಲಿ ಓದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈಗ ವಿದ್ಯಾರ್ಥಿನಿ ಆತ್ಮಹತ್ಯೆ ಕುರಿತಾಗಿ ಹೇಳಿಕೆ ಬಿಡುಗಡೆ ಮಾಡಿರುವ ಐಐಟಿ ಮದ್ರಾಸ್  'ನವೆಂಬರ್ 8 ರಂದು ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾರ್ಥಿಯ ನಿಧನವನ್ನು ತಿಳಿಸಬೇಕಾಗಿರುವುದು ತೀವ್ರ ದುಃಖ ತರಿಸಿದೆ' ಎಂದು ತನ್ನ ಪ್ರಕಟನೆಯಲ್ಲಿ ತಿಳಿಸಿದೆ


ಫಾತಿಮಾ ಕ್ಯಾಂಪಸ್‌ನ ಸರಾಯು ಹಾಸ್ಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿದೆ. ಈ ಮೊದಲು ಆಕೆಯ ಆಕೆಯ ಪೋಷಕರು ಅವಳನ್ನು ವಿಚಾರಿಸಲು ಆಕೆಯ ಸ್ನೇಹಿತರನ್ನು ಕರೆಯಲಾಗಿದೆ. ಆಗ ಅವರನ್ನು ಪರೀಕ್ಷಿಸುವಾಗ ಶನಿವಾರ ಬೆಳಿಗ್ಗೆ 11: 30 ವರೆಗೆ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಬಾಗಿಲು ತೆರೆದಾಗ, ಅವಳು ಕೋಣೆಯೊಳಗಿನ ಫ್ಯಾನ್‌ನಿಂದ ನೇತಾಡುತ್ತಿರುವುದು ಕಂಡುಬಂದಿದೆ. ಇದಾದ ನಂತರ ಐಐಟಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತು ಎನ್ನಲಾಗಿದೆ.


ಈಗ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದೇನೆಂದರೆ ಅವರು ಆಂತರಿಕ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳನ್ನು ಗಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಅವರ ಆತ್ಮಹತ್ಯೆಯನ್ನು ವಿವಿಧ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.