ಮೂರು ದಶಕಗಳಲ್ಲಿ ಮೊದಲ ಬಾರಿಗೆ ಗುಜರಾತ್ ನಲ್ಲಿ ಕಾಣಿಸಿಕೊಂಡ `ಹುಲಿ`
1989 ರಲ್ಲಿ ದಕ್ಷಿಣ ಗುಜರಾತ್ನ ಡಾಂಗ್ ಕಾಡುಗಳಲ್ಲಿ ಹುಲಿ ಕಾಣಿಸಿಕೊಂಡಿತ್ತು. ಆದರೆ ಅರಣ್ಯ ಇಲಾಖೆಯು ನಡೆಸಿದ ನಾಲ್ಕು ವರ್ಷಗಳ ಸಮೀಕ್ಷೆ ರಾಜ್ಯದಲ್ಲಿ ಹುಲಿಗಳು ಅಳಿವಿನಲ್ಲಿರುವ ಪ್ರಾಣಿ ಎಂದು ಉಲ್ಲೇಖಿಸಲಾಗಿತ್ತು.
ಗಾಂಧಿನಗರ: 27 ವರ್ಷಗಳ ಬಳಿಕ ಗುಜರಾತ್ ನಲ್ಲಿ 'ಹುಲಿ' ಕಾಣಿಸಿಕೊಂಡಿದೆ. ಮಹಿಸಾಗರ್ ಜಿಲ್ಲೆಯ ಲುನ್ವಾಡ ಅರಣ್ಯದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂದು ಅರಣ್ಯ ಅಧಿಕಾರಿಗಳು ಮಂಗಳವಾರ ಖಚಿತ ಪಡಿಸಿದ್ದಾರೆ.
1989 ರಲ್ಲಿ ದಕ್ಷಿಣ ಗುಜರಾತ್ನ ಡಾಂಗ್ ಕಾಡುಗಳಲ್ಲಿ ಹುಲಿ ಕಾಣಿಸಿಕೊಂಡಿತ್ತು. ಆದರೆ ಅರಣ್ಯ ಇಲಾಖೆಯು ನಡೆಸಿದ ನಾಲ್ಕು ವರ್ಷಗಳ ಸಮೀಕ್ಷೆ ರಾಜ್ಯದಲ್ಲಿ ಹುಲಿಗಳು ಅಳಿವಿನಲ್ಲಿರುವ ಪ್ರಾಣಿ ಎಂದು ಉಲ್ಲೇಖಿಸಲಾಗಿತ್ತು.
ಇದೀಗ ಮೂರು ದಶಕಗಳ ಬಳಿಕ ರಾಜ್ಯದಲ್ಲಿ ಲುನ್ವಾಡ ಅರಣ್ಯದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಸುಮಾರು 7 ರಿಂದ 8 ವರ್ಷದ ಹುಲಿ ಎಂದು ತೋರುತ್ತಿದೆ ಎಂದು ರಾಜ್ಯ ಅರಣ್ಯ ಸಚಿವ ಗಣಪತ್ ವಾಸವ ಮಂಗಳವಾರ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಸಚಿವ ವಾಸವ, ಈ ಹುಲಿ ಒಂಟಿಯಾಗಿ ಬಂದಿದೆಯೇ ಅಥವಾ ಇದರೊಂದಿಗೆ ಹೆಚ್ಚು ಹುಲಿಗಳು ಬಂದಿರಬಹುದೇ ಎಂಬುದರ ಬಗ್ಗೆ ಯಾದುವೆ ಸ್ಪಷ್ಟನೆ ಇಲ್ಲ ಎಂದು ಅವರು ತಿಳಿಸಿದರು. ರಾಜಸ್ಥಾನ ಮಹಾರಾಷ್ಟ್ರ ಅಥವಾ ಮಧ್ಯಪ್ರದೇಶ ದಿಂದ ಈ ಹುಲಿ ಬಂದಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರವನ್ನು ಸಂಪರ್ಕಿಸಿದ್ದು, ಉಜ್ಜಯಿನಿ ಬಳಿ ಇರುವ ಮೀಸಲು ಹುಲಿಗಳು ಸ್ವಲ್ಪ ಸಮಯದಿಂದ "ಕಾಣೆಯಾಗಿದೆ" ಎಂಬ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.