ಜಮ್ಮು: ಪಂಜಾಬ್-ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಟ್ರಕ್‌ನಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ. ಕಥುವಾದ ಲಖನ್‌ಪುರ ಗಡಿಯಲ್ಲಿ ಪರಿಶೀಲಿಸುವಾಗ ಈ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಈ ಆಯುಧವನ್ನು ಪಂಜಾಬ್‌ನಿಂದ ಶ್ರೀನಗರಕ್ಕೆ ಕೊಂಡೊಯ್ಯಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. 



COMMERCIAL BREAK
SCROLL TO CONTINUE READING

ಟ್ರಕ್‌ನಲ್ಲಿ ದಿನಸಿ ಸಾಮಗ್ರಿಗಳ ಮಧ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಸಾಗಿಸಲಾಗುತ್ತಿತ್ತು. ಈ ಶಸ್ತ್ರಾಸ್ತ್ರಗಳೊಂದಿಗೆ 3 ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. 5 ಎಕೆ -47 ರೈಫಲ್‌ಗಳು ಹಾಗೂ 4.5 ಲಕ್ಷ ರೂಪಾಯಿಗಳನ್ನು ಸಹ ಭಯೋತ್ಪಾದಕರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಸ್ತ್ರಾಸ್ತ್ರಗಳು ದೊರೆತ ಟ್ರಕ್‌ನಲ್ಲಿ ಶ್ರೀನಗರ ನೋಂದಣಿ ಸಂಖ್ಯೆ ಇದೆ. 


ಬಂಧಿತ ಜನರನ್ನು ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಟ್ರಕ್ ಪಂಜಾಬ್‌ನ ಅಮೃತಸರದಿಂದ ಶ್ರೀನಗರಕ್ಕೆ ಹೋಗುತ್ತಿತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.


ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರಗಳನ್ನು ಗುರಿಯಾಗಿಸುವ ಸಾಧ್ಯತೆ: ಗುಪ್ತಚರ ವರದಿ
ಕೆಲವು ದಿನಗಳ ಹಿಂದೆ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾ ಪಿತೂರಿಯನ್ನು ಬಹಿರಂಗಪಡಿಸಿದವು. ಗುಪ್ತಚರ ಮಾಹಿತಿಯ ಪ್ರಕಾರ, ಲಷ್ಕರ್ ಉಗ್ರರು ಸೇನಾ ಶಿಬಿರಗಳ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದಾರೆ.  ಭಯೋತ್ಪಾದಕ ಸಂಘಟನೆಯು ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಬಹುದು. ಸೇನಾ ಶಿಬಿರಗಳು ಮತ್ತು ಮಿಲಿಟರಿ ಕೇಂದ್ರಗಳು ಭಯೋತ್ಪಾದಕರ ಗುರಿಯಾಗಿವೆ ಎಂದು ವರದಿಯಾಗಿದೆ. ಮಾಹಿತಿಯ ಪ್ರಕಾರ, ಲಷ್ಕರ್ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಸೇನೆಯ ಬರಿ ಬ್ರಾಹ್ನಾ, ಸುಂಜ್ವಾನ್ ಮತ್ತು ಕಲು ಚಕ್ ಶಿಬಿರಗಳ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾರೆ. ಇದರೊಂದಿಗೆ, ಭಯೋತ್ಪಾದಕರ ಶೋಪಿಯಾನ್‌ನಿಂದ ಜಮ್ಮುಗೆ ನುಸುಳುವ ಯೋಜನೆಗಳಿವೆ ಎಂಬ ವರದಿಗಳಿವೆ.